ಹೊಸ ಕಾರು ಖರೀದಿಸಲು ಬಯಸುವೀರಾ? ಬೆಸ್ಟ್ ಆಫರ್ ನೋಡಿ
ನೀವು ಹೊಸ ಕಾರು ಖರೀದಿಸುವ ತವಕದಲ್ಲಿದ್ದೀರಾ? 2016 ಮೇ ತಿಂಗಳಲ್ಲಿ ಲಭ್ಯವಿರುವ ಅತ್ಯುತ್ತಮ ಆಫರ್ ಗಳ ಪಟ್ಟಿಯನ್ನು ಓದುಗರ ಮುಂದಿಡಲಿದ್ದೇವೆ. ಎಂದಿನಂತೆ ದೇಶದ ದೇಶದ ಜನಪ್ರಿಯ ಸಂಸ್ಥೆಯು ಈ ಬೇಸಿಗೆ ಕಾಲದ ಅಂತ್ಯದಲ್ಲಿ ಗರಿಷ್ಠ ಆಫರ್ ಗಳನ್ನು ಗ್ರಾಹಕರ ಮುಂದಿಟ್ಟಿದೆ.
ಇವುಗಳ ಬಗ್ಗೆ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ. ವಿ.ಸೂ: ರಿಯಾಯಿತಿ ದರಗಳ ಬಗೆಗಿನ ನಿಖರ ಮಾಹಿತಿಗಾಗಿ ಡೀಲರ್ ಗಳನ್ನು ಸಂಪರ್ಕಿಸತಕ್ಕುದ್ದು.

ಹ್ಯುಂಡೈ ಇಯಾನ್
ದಕ್ಷಿಣ ಕೊರಿಯಾ ಮೂಲದ ವಾಹನ ಸಂಸ್ಥೆಯಾಗಿರುವ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ ತನ್ನ ಜನಪ್ರಿಯ ಇಯಾನ್ ಮಾದರಿಗೆ ಗರಿಷ್ಠ 35,000 ರು.ಗಳ ವರೆಗಿನ ಡಿಸ್ಕೌಂಟ್ ನೀಡುತ್ತಿದೆ.

ಗ್ರಾಂಡ್ ಐ10
ಅದೇ ರೀತಿ ಜನಪ್ರಿಯ ಹ್ಯಾಚ್ ಬ್ಯಾಕ್ ಕಾರಾಗಿರುವ ಹ್ಯುಂಡೈ ಗ್ರಾಂಡ್ ಐ10 ಮಾದರಿಗೆ 47,000 ರು.ಗಳ ವರೆಗೆ ಡಿಸ್ಕೌಂಟ್ ಒದಗಿಸಲಾಗುತ್ತಿದೆ.

ಎಕ್ಸ್ ಸೆಂಟ್
ನಾಲ್ಕು ಮೀಟರ್ ಉದ್ದ ಪರಿಧಿಯೊಳಗಿನ ಕಾಂಪಾಕ್ಟ್ ಸೆಡಾನ್ ಕಾರಾಗಿರುವ ಹ್ಯುಂಡೈ ಎಕ್ಸ್ ಸೆಂಟ್ ಮೇಲೂ ಗರಿಷ್ಠ 72,000 ರು.ಗಳ ವರೆಗಿನ ಪ್ರಯೋಜನ ನೀಡಲಾಗುತ್ತಿದೆ.

ಸಾಂಟಾ ಫೆ
ಹ್ಯುಂಡೈ ಪ್ರೀಮಿಯಂ ಕ್ರೀಡಾ ಬಳಕೆಯ ವಾಹನವಾಗಿರುವ ಸಾಂಟಾ ಫೆ ಖರೀದಿಯಲ್ಲಿ ಗರಿಷ್ಠ ಒಂದು ಲಕ್ಷ ರು.ಗಳ ವರೆಗೆ ರಿಯಾಯಿತಿ ದರ ನೀಡಲಾಗುತ್ತಿದೆ.

ಹೋಂಡಾ ಜಾಝ್
ಒಂದೆಡೆ ಮಾರುತಿ ಬಲೆನೊ ಮತ್ತು ಎಲೈಟ್ ಐ20 ಮಾದರಿಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದನ್ನು ಮನಗಂಡಿರುವ ಹೋಂಡಾ ಸಂಸ್ಥೆಯು ತನ್ನ ಜನಪ್ರಿಯ ಜಾಝ್ ಮಾದರಿಗೆ 40,000 ರು.ಗಳ ವರೆಗೆ ರಿಯಾಯಿತಿ ನೀಡುತ್ತಿದೆ.

ಫೋರ್ಡ್ ಇಕೊಸ್ಪೋರ್ಟ್
ತಂತ್ರಗಾರಿಕೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಅಮೆರಿಕ ಮೂಲಕ ಫೋರ್ಡ್ ಸಂಸ್ಥೆಯು ತನ್ನ ಹೆಸರಾಂತ ಇಕೊಸ್ಪೋರ್ಟ್ ಕಾರಿಗೆ ಗರಿಷ್ಠ 100000 ಲಕ್ಷ ರು.ಗಳ ವರೆಗೆ ಪ್ರಯೋಜನ ನೀಡಲಾಗುತ್ತಿದೆ.

ಫಿಗೊ ಆಸ್ಪೈರ್
ಫಿಗೊ ಆಸ್ಪೈರ್ ಕಾಂಪಾಕ್ಟ್ ಸೆಡಾನ್ ಕಾರಿಗೂ ಗರಿಷ್ಠ 80,000 ರು.ಗಳ ವರೆಗೆ ರಿಯಾಯಿತಿ ದರಗಳನ್ನು ಫೋರ್ಡ್ ನೀಡುತ್ತಿದೆ.

ದಟ್ಸನ್ ಗೊ ಪ್ಲಸ್
ಈಗಷ್ಟೇ ರೆಡಿ ಗೊ ಕಾರನ್ನು ಬಿಡುಗಡೆ ಮಾಡಿರುವ ದಟ್ಸನ್, ಈಗಾಗಲೇ ಮಾರುಕಟ್ಟೆಯಲ್ಲಿರುವ ಏಳು ಸೀಟುಗಳ ಗೊ ಪ್ಲಸ್ ಮಾದರಿಗೆ ಉಚಿತ ವಿಮೆ, ಕಡಿಮೆ ಡೌನ್ ಪೇಮೆಂಟ್ ಮುಂತಾದ ಸೇವೆಗಳನ್ನು ಒದಗಿಸುತ್ತಿದೆ.

ಟೊಯೊಟಾ ಇಟಿಯೋಸ್ ಕ್ರಾಸ್
ಹಾಗೆಯೇ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು ತನ್ನ ಜನಪ್ರಿಯ ಇಟಿಯೋಸ್ ಕ್ರಾಸ್ ಮಾದರಿಗೆ ಗರಿಷ್ಠ 20,000 ರು.ಗಳ ಡಿಸ್ಕೌಂಟ್ ಗಳನ್ನು ನೀಡುತ್ತಿದೆ.

ಈಗ ಕೊಟ್ಟಿರುವ ಪಟ್ಟಿಯಲ್ಲಿ ನಿಮ್ಮ ನೆಚ್ಚಿನ ಕಾರನ್ನು ಆಯ್ಕೆ ಮಾಡಿರಿ.


Click it and Unblock the Notifications








