ಅಂದತೆ ಬದಲಾಯಿಸಲಿರುವ ಬಿಎಂಡಬ್ಲ್ಯು ಐ8
ಹೊಸ ವರ್ಷದಲ್ಲಿ ಬಿಎಂಡಬ್ಲ್ಯು ಐ8 ಹೈಬ್ರಿಡ್ ಕಾರು ಹೊಸ ಸ್ವರೂಪವನ್ನು ಪಡೆಯಲಿದೆ.
ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಬಿಎಂಡಬ್ಲ್ಯು ಐ8 ನಿಕಟ ಭವಿಷ್ಯದಲ್ಲೇ ಹೊಸ ರೂಪದೊಂದಿಗೆ ಪ್ರತ್ಯಕ್ಷಗೊಳ್ಳಲಿದೆ. ಜರ್ಮನಿಯ ಮೂಲದ ಬಿಎಂಡಬ್ಲ್ಯು ಸಂಸ್ಥೆಗೆ ಅತಿ ಹೆಚ್ಚು ಯಶಸ್ಸನ್ನು ತಂದು ಕೊಟ್ಟಿರುವ ಬಿಎಂಡಬ್ಲ್ಯು ಐ8 ಫೇಸ್ ಲಿಫ್ಟ್ ಮಾದರಿಯು ಅತಿ ಶೀಘ್ರದಲ್ಲೇ ಬಿಡುಗಡೆಗೊಳ್ಳಲಿದೆ.

ಬಲ್ಲ ಮೂಲಗಳ ಪ್ರಕಾರ ಕಳೆದ ಮೂರು ವರ್ಷಗಳಿಂದಲೂ ಮಾರುಕಟ್ಟೆಯಲ್ಲಿರುವ ಬಿಎಂಡಬ್ಲ್ಯು ಐ8, 2017ನೇ ಸಾಲಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ನೂತನ ಬಿಎಂಡಬ್ಲ್ಯು ಐ8 ಮತ್ತಷ್ಟು ಹೆಚ್ಚು ಶಕ್ತಿಶಾಲಿ ಎನಿಸಿಕೊಳ್ಳಲಿದ್ದು, ಒಟ್ಟು 371 ಅಶ್ವಶಕ್ತಿ ಉತ್ಪಾದಿಸಲಿದೆ. ತನ್ಮೂಲಕ ಹಿಂದಿನ ಆವೃತ್ತಿಗಿಂತಲೂ 15 ಬಿಎಚ್ ಪಿ ಹೆಚ್ಚು ಉತ್ಪಾದಿಸಲಿದೆ.

ಇನ್ನು ನಿರ್ವಹಣೆಯಲ್ಲೂ ಇದು ಕಂಡುಬರಲಿದ್ದು, ಕೇವಲ 4.4 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವಷ್ಟು ಸಮರ್ಥವಾಗಿರಲಿದೆ.

ಈ ಪೆಟ್ರೋಲ್-ಎಲೆಕ್ಟ್ರಿಕ್ ಹೈಬ್ರಿಡ್ ಕಾರಿನ ನಿರ್ವಹಣೆಯಲ್ಲಿ ಸುಧಾರಣೆ ಕಂಡುಬರುವುದರೊಂದಿಗೆ ಕಾರಿನ ಒಟ್ಟಾರೆ ವ್ಯಾಪ್ತಿಯನ್ನು ವರ್ಧಿಸುವತ್ತ ಗುರಿಯಿಡಲಾಗಿದೆ.

ಇದಕ್ಕಾಗಿ ಫಾರ್ಮುಲಾ ಇ ಭದ್ರತಾ ವಾಹನ ಬಳಕೆ ಮಾಡುವ ಪರಿಷ್ಕೃತ 10 ಕೆಡಬ್ಲ್ಯುಎಚ್ ಬ್ಯಾಟರಿ ಪ್ಯಾಕ್ ಜೋಡಿಸಲಾಗುವುದು.

ಇವೆಲ್ಲದರ ಜೊತೆಗೆ ಚಾಸೀಯಲ್ಲಿ ಪರಿಷ್ಕೃರಣೆ ತರಲಾಗುವುದು. ಇನ್ನು ಇತರೆ ತಾಂತ್ರಿಕತೆಯಲ್ಲೂ ಸಣ್ಣ ಪುಟ್ಟ ಬದಲಾವಣೆ ಕಂಡುಬರಲಿದೆ.

ಅದೇ ಹೊತ್ತಿಗೆ ಅತಿ ನೂತನ ಬಿಎಂಡಬ್ಲ್ಯು ಐ8 ಸ್ಪೈಡರ್ ಕಾರು ಬಿಡುಗಡೆ ಮಾಡುವ ಯೋಜನೆಯನ್ನು ಬಿಎಂಬ್ಲ್ಯು ಹೊಂದಿರುತ್ತದೆ.


Click it and Unblock the Notifications








