ಬುಗಾಟಿ ಕೈರಾನ್ ಹೈಪರ್ ಕಾರಿಗೆ ಭಾರಿ ಬೇಡಿಕೆ
ಬುಗಾಟಿ ಕೈರಾನ್ ಹೈಪರ್ ಕಾರಿಗೆ ಜಗತ್ತಿನಾದ್ಯಂತ ಅತ್ಯುತ್ತಮ ಬೇಡಿಕೆ ದಾಖಲಾಗಿದೆ.
ಫ್ರಾನ್ಸ್ ನ ಗರಿಷ್ಠ ನಿರ್ವಹಣಾ ಕಾರು ತಯಾರಕ ಸಂಸ್ಥೆಯಾಗಿರುವ ಬುಗಾಟಿ, ಕೆಲವು ಸಮಯಗಳ ಹಿಂದೆಯಷ್ಟೇ ವಿಶ್ವದ ಅತಿ ವೇಗದ ಕೈರಾನ್ ಹೈಪರ್ ಕಾರನ್ನು ಪರಿಚಯಿಸಿತ್ತು. ಪ್ರಸ್ತುತ ಹೈಪರ್ ಕಾರಿಗೆ ಭಾರಿ ಬೇಡಿಕೆ ಪಾತ್ರವಾಗಿದ್ದು, ಒಂಬತ್ತು ತಿಂಗಳಲ್ಲೇ 220ರಷ್ಟು ಆರ್ಡರ್ ಗಳು ದಾಖಲಾಗಿವೆ.

ಬುಗಾಟಿ ಕಾರಿಗೆ ಬೇಡಿಕೆ ಹೆಚ್ಚಿದ್ದರಿಂದ ವಾರ್ಷಿಕವಾಗಿ 65 ಯುನಿಟ್ ಗಳನ್ನು ನಿರ್ಮಿಸಲು ಸಂಸ್ಥೆಯು ನಿರ್ಧರಿಸಿದೆ. ಅಂದರೆ ಪ್ರತಿ ಐದು ದಿನಕ್ಕೊಂದು ಕೈರಾನ್ ಕಾರು ಹೊರ ಬರಲಿದೆ.

ಬುಗಾಟಿ ಕೈರಾನ್ ಭಾರತೀಯ ಬೆಲೆಯ ಪ್ರಕಾರ 17.82 ಕೋಟಿ ರುಪಾಯಿಗಳಷ್ಟು ದುಬಾರಿಯೆನಿಸುತ್ತದೆ.

ಎಲ್ಲರನ್ನು ಮನ ಸೆಳೆಯುವಂತಹ ಸಾನಿಧ್ಯವು ಬುಗಾಟಿ ಕೈರಾನ್ ಕಾರಿಗೆ ಮತ್ತಷ್ಟು ಮೆರಗನ್ನು ತುಂಬಿತ್ತು. ಇದು ಈಗಿರುವ ವೆರೊನ್ ಕಾರಿಗೆ ಉತ್ತರಾಧಿಕಾರಿ ಎಂದೇ ಬಿಂಬಿಸಲಾಗುತ್ತಿದೆ.

ಇದಕ್ಕೂ ಮೊದಲು ಜಿನೆವಾದಲ್ಲಿ ಶಕ್ತಿ ಪ್ರದರ್ಶನ ನಡೆಸಿರುವ ಬುಗಾಟಿ ಕೈರಾನ್, 8.0 ಲೀಟರ್ ಕ್ವಾಡ್ ಟರ್ಬೊ ಡಬ್ಲ್ಯು16 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ಜಗತ್ತಿನ ಅತ್ಯಂತ ಶಕ್ತಿಶಾಲಿ ಸಾಲಿನಲ್ಲಿ ಗುರುತಿಸಿಕೊಳ್ಳಲಿರುವ ಬುಗಾಟಿ ಕೈರಾನ್, ಬರೋಬ್ಬರಿ 1479 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1600 ಎನ್ ಎಂ ತಿರುಗುಬಲ ಇದರಲ್ಲಿದೆ.

ಕೇವಲ 2.5 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿರುವ ಬುಗಾಟಿ ಕೈರಾನ್, 6.5 ಹಾಗೂ 13.6 ಸೆಕೆಂಡುಗಳಲ್ಲೇ ಅನುಕ್ರಮವಾಗಿ ಗಂಟೆಗೆ 200 ಹಾಗೂ 300 ಕೀ.ಮೀ. ಗಳನ್ನು ಕ್ರಮಿಸಲಿದೆ.

ವಿಶ್ವದ ಅತಿ ವೇಗದ ರಸ್ತೆ ಕಾರು ಎಂಬ ಕೀರ್ತಿಗೆ ಪಾತ್ರವಾಗಿರುವ ಬುಗಾಟಿ ಕೈರಾನ್ ಗಂಟೆಗೆ ಗರಿಷ್ಠ 420 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ನೂತನ ಬುಗಾಟಿ ಕೈರಾನ್ ಫೋರ್ ವೀಲ್ ಹಾಗೂ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೂ ಶಕ್ತಿ ರವಾನಿಸಲಿದೆ.

ಐದು ಚಾಲನಾ ವಿಧಗಳು- ಲಿಫ್ಟ್, ಆಟೋ, ಆಟೋಬಾನ್, ಹ್ಯಾಂಡ್ಲಿಂಗ್ ಮತ್ತು ಟಾಪ್ ಸ್ಪೀಡ್


Click it and Unblock the Notifications








