ಭಾರತಕ್ಕೆ ಲಗ್ಗೆಯಿಡಲಿರುವ 5 ಹೊಸ ಕಾರು ಬ್ರಾಂಡ್ ಗಳು

By Nagaraja

ಭಾರತದಲ್ಲಿ ಈಗಾಗಲೇ ಹಲವಾರು ವಿಶ್ವ ವಿಖ್ಯಾತ ಕಾರು ಬ್ರಾಂಡ್ ಗಳು ತನ್ನ ವ್ಯಾಪಾರವನ್ನು ಕುದುರಿಸಿಕೊಂಡಿದೆ. ಇನ್ನು ಕೆಲವು ಅತಿ ಮುಖ್ಯವಾದ ಸಂಸ್ಥೆಗಳು ದೇಶಕ್ಕೆ ಕಾಲಿಡಲು ಹಾತೊರೆಯುತ್ತಿದ್ದು, ತುದಿಗಾಲಲ್ಲಿ ನಿಂತಿದೆ.

ಭಾರತದ ರಸ್ತೆಗಿಳಿಯುತ್ತಿರುವ ವಾಹನಗಳ ಸಂಖ್ಯೆ ವರ್ಷಂದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಎಲ್ಲ ಮುಂಚೂಣಿಯ ಸಂಸ್ಥೆಗಳು ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಪರಿಚಯಿಸುತ್ತಿದ್ದು, ವಾಹನ ಪ್ರೇಮಿಗಳು ಇದನ್ನು ಮನಸಾರೆ ಸ್ವೀಕರಿಸುತ್ತಿದ್ದಾರೆ. ಪ್ರಸ್ತುತ ಲೇಖನದಲ್ಲಿ ನಿಕಟ ಭವಿಷ್ಯದಲ್ಲೇ ದೇಶಕ್ಕೆ ಎಂಟ್ರಿ ಕೊಡಲಿರುವ ಐದು ಪ್ರಮುಖ ಬ್ರಾಂಡ್ ಗಳ ಬಗ್ಗೆ ವಿವರಣೆಯನ್ನು ಕೊಡಲಿದ್ದೇವೆ.

01. ದೈಹಟ್ಸು

01. ದೈಹಟ್ಸು

ಭಾರತದಲ್ಲಿ ಬಜೆಟ್ ಕಾರುಗಳಿಗೆ ಗಣನೀಯ ಬೇಡಿಕೆಯಿದೆ ಎಂಬುದನ್ನು ಅರಿತುಕೊಂಡಿರುವ ಜಪಾನ್ ಮೂಲದ ಟೊಯೊಟಾ ಸಂಸ್ಥೆಯು 'ದೈಹಟ್ಸು' ಕಡಿಮೆ ಬೆಲೆಗಳಲ್ಲಿ ಆಕರ್ಷಕ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಪ್ರಮುಖವಾಗಿಯೂ ಸಣ್ಣ ಕಾರು ಮಾರುಕಟ್ಟೆಯಲ್ಲಿ ಆಲ್ಟೊ ಮತ್ತು ಕ್ವಿಡ್ ಗಳಂತಹ ಮಾದರಿಗಳಿಗೆ ಟೊಯೆಟಾ ದೈಹಟ್ಸು ಕಾರುಗಳು ಪ್ರತಿಸ್ಪರ್ಧಿಯಾಗಲಿದೆ.

02. ಕಿಯಾ

02. ಕಿಯಾ

ಭಾರತೀಯ ಪ್ರಯಾಣಿಕ ಮಾರುಕಟ್ಟೆಯಲ್ಲಿ ಮಾರುತಿಯ ಬಳಿಕ ಅತಿ ಹೆಚ್ಚು ಮಾರಾಟವನ್ನು ಹೊಂದಿರುವ ಹ್ಯುಂಡೈ ಮಗದೊಂದು ಅದೃಷ್ಟ ಪರೀಕ್ಷೆಗಿಳಿಯಲು ನಿರ್ಧರಿಸಿದೆ. ಎಂಟ್ರಿ ಲೆವೆಲ್ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸವಾಲನ್ನು ಎದುರಿಸುವುದು ಅಷ್ಟು ಸುಲಭವಲ್ಲ. ಇದನ್ನು ಅರಿತುಕೊಂಡಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು ದೈದಟ್ಸು ಬ್ರಾಂಡ್ ಕಣಕ್ಕಿಳಿಸಲು ನಿರ್ಧರಿಸಿದೆ.

03. ಲೆಕ್ಸಸ್

03. ಲೆಕ್ಸಸ್

ಮೊದಲೆರಡು ಸಣ್ಣ ಕಾರು ಬ್ರಾಂಡ್ ಆಗಿದ್ದರೆ ಲೆಕ್ಸಸ್ ಆಗಮನದೊಂದಿಗೆ ಪ್ರೀಮಿಯಂ ಕಾರು ವಿಭಾಗದಲ್ಲಿ ಟೊಯೊಟಾ ತನ್ನ ಸಾನಿಧ್ಯವನ್ನು ಮತ್ತಷ್ಟು ಭದ್ರಪಡಿಸಲಿದೆ. ಜರ್ಮನಿಯ ತ್ರಿವಳಿ ಸಂಸ್ಥೆಗಳಾದ ಮರ್ಸಿಡಿಸ್ ಬೆಂಝ್, ಆಡಿ ಮತ್ತು ಬಿಎಂಡಬ್ಲ್ಯು ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿರುವ ಲೆಕ್ಸಸ್ ದೇಶದ ಐಷಾರಾಮಿ ಗ್ರಾಹಕರಿಗೆ ಹೊಸ ಅನುಭವ ನೀಡಲಿದೆ.

04. ಅಕ್ಯುರಾ

04. ಅಕ್ಯುರಾ

ಇನ್ನೊಂದೆಡೆ ಲೆಕ್ಸಸ್ ಗೆ ವಿರುದ್ಧವಾಗಿ ಜಪಾನ್ ಮೂಲದ್ದೇ ಆಗಿರುವ ಹೋಂಡಾ ಸಂಸ್ಥೆಯು ಅಕ್ಯುರಾ ಬ್ರಾಂಡನ್ನು ಕಣಕ್ಕಿಳಿಸಲಿದೆ. ಇದು ಕೂಡಾ ಮರ್ಸಿಡಿಸ್, ಆಡಿ ಮತ್ತು ಬಿಎಂಡಬ್ಲ್ಯು ನೆಚ್ಚಿನ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ. ಅಮೆರಿಕದಂತಹ ದೇಶಗಳಲ್ಲಿ ಉತ್ಯುತ್ತಮ ಹೆಸರು ಮಾಡಿರುವ ಅಕ್ಯುರಾ ದೇಶಕ್ಕೆ ಪ್ರವೇಶಿಸಿದ್ದಲ್ಲಿ ಗ್ರಾಹಕರಿಗೆ ತಾಜಾತನವನ್ನು ತುಂಬಲಿದೆ.

05. ಜೆನಿಸಿಸ್

05. ಜೆನಿಸಿಸ್

ಕಾದು ನೋಡುವ ತಂತ್ರ ಅನುಸರಿಸಿರುವ ಹ್ಯುಂಡೈ ಮುಂದಿನ ಕೆಲವೇ ವರ್ಷಗಳಲ್ಲಿ ಜೆನಿಸಿಸ್ ಐಷಾರಾಮಿ ಬ್ರಾಂಡ್ ಪರಿಚಯಿಸಿದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ. 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳಿಸುವ ಮುಖಾಂತರ ವಾಹನ ಪ್ರೇಮಿಗಳಲ್ಲಿ ನಿರೀಕ್ಷೆ ಮುಟ್ಟಿಸಿರುವ ಹ್ಯುಂಡೈ, 2020ರ ವೇಳೆಯಾಗುವಾಗ ಜೆನಿಸಿಸ್ ಬ್ರಾಂಡ್ ಪರಿಚಯಿಸುವ ಸಾಧ್ಯತೆಯಿದೆ.

More from DriveSpark

Article Published On: Friday, June 3, 2016, 17:11 [IST]
English summary
Five Car Brands That May Soon Set Foot In India
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+