ಫೆರಾರಿ 488 ಜಿಟಿಬಿ ಐಷಾರಾಮಿ ಕ್ರೀಡಾ ಕಾರು ಭಾರತಕ್ಕೆ ಎಂಟ್ರಿ
ಬಹುನಿರೀಕ್ಷಿತ ಫೆರಾರಿ 488 ಜಿಟಿಬಿ ಭಾರತಕ್ಕೆ ಭರ್ಜರಿ ಪ್ರವೇಶ ಪಡೆದಿದೆ. ನವದೆಹಲಿಯಲ್ಲಿ ಸ್ಥಿತಗೊಂಡಿರುವ ಸಂಸ್ಥೆಯ ಡೀಲರ್ ಶಿಪ್ ನಲ್ಲಿ ಸಾಗಿದ ಅಮೋಘ ಸಮಾರಂಭದಲ್ಲಿ ಅಧಿಕೃತವಾಗಿ ದೇಶಕ್ಕೆ ಪಾದಾರ್ಪಣಗೈದಿದೆ.
ಬೆಲೆ ಮಾಹಿತಿ: 3.88 ಕೋಟಿ ರು. (ಎಕ್ಸ್ ಶೋ ರೂಂ ದೆಹಲಿ)
ಕ್ರೀಡಾ ಕಾರು ವಿಭಾಗದಲ್ಲಿ ಹೊಸ ಅಧ್ಯಾಯ ತೆರೆದುಕೊಂಡಿರುವ ಇಟಲಿಯ ಐಕಾನಿಕ್ ಫೆರಾರಿ 488 ಜಿಟಿಬಿ ಕಾರಿನಲ್ಲಿ ಕ್ರಾಂತಿಕಾರಿ ಏರೋಡೈನಾಮಿಕ್ ವಿನ್ಯಾಸ ನೀತಿಯನ್ನು ಅನುಸರಿಸಲಾಗಿದೆ.

ಎಂಜಿನ್ ತಾಂತ್ರಿಕತೆ
3.9 ಲೀಟರ್ ವಿ8 ಟರ್ಬೊ ಚಾರ್ಜ್ಡ್ ಪೆಟ್ರೋಲ್
670 ಅಶ್ವಶಕ್ತಿ,
760 ಎನ್‌ಎಂ ತಿರುಗುಬಲ
ಗೇರ್ ಬಾಕ್ಸ್: ಸೆವೆನ್ ಸ್ಪೀಡ್ ಎಫ್1 ಡ್ಯುಯಲ್ ಗೇರ್ ಬಾಕ್ಸ್.
ಆಯಾಮ (ಎಂಎಂ)
ಉದ್ದ: 4568
ಅಗಲ: 1952
ಎತ್ತರ: 1213
ನಿರ್ವಹಣೆ
ಗಂಟೆಗೆ 0-100 ಕೀ.ಮೀ.: 3.0 ಸೆಕೆಂಡು
ಗರಿಷ್ಠ ವೇಗ: ಗಂಟೆಗೆ 330 ಕೀ.ಮೀ.
ಇಂಧನ ವ್ಯಯ: 11.4 ಲೀಟರ್/100 ಕೀ.ಮೀ.
ಎಮಿಷನ್ (Co2): 260 ಗ್ರಾಂ/ಕೀ.ಮೀ.


Click it and Unblock the Notifications






































