'ಕಿಂಗ್ ಮೇಕರ್' ಮೊದಲನೇ ತಲೆಮಾರಿನ ಇನ್ನೋವಾ ನಿರ್ಮಾಣಕ್ಕೆ ಕೊನೆ
ಎರಡನೇ ತಲೆಮಾರಿನ ಇನ್ನೋವಾ ಕ್ರೈಸ್ಟಾಗೆ ಹಾದಿ ಬಿಟ್ಟುಕೊಟ್ಟಿರುವ ಮೊದಲನೇ ತಲೆಮಾರಿನ ಇನ್ನೋವಾ ಕೊನೆಯ ಆವೃತ್ತಿಯು ಬೆಂಗಳೂರಿನ ಹೊರ ವಲಯದಲ್ಲಿ ಸ್ಥಿತಗೊಂಡಿರುವ ಟೊಯೊಟಾದ ಬಿಡದಿಯ ಘಟಕದಿಂದ ಹೊರ ಬಂದಿದೆ.
Also Read: ಇನ್ನೋವಾ ಕ್ರೈಸ್ಟಾ; ಹಳೆ ಬಾಟಲಿಯಲ್ಲಿ ಹೊಸ ಮದ್ಯ
ಜಪಾನ್ ಮೂಲದ ಟೊಯೊಟಾ ಕಿರ್ಲೊಸ್ಕರ್ ಮೋಟಾರು ಸಂಸ್ಥೆಯು 2005ನೇ ಸಾಲಿನಲ್ಲಿ ಮೊದಲನೇ ಬಾರಿಗೆ ಪ್ರಥಮ ತಲೆಮಾರಿನ ಇನ್ನೋವಾ ಕಾರನ್ನು ಪರಿಚಯಿಸಿತ್ತು. ಬರ ಬರುತ್ತಿದ್ದಂತೆಯೇ ದೇಶದ ಪ್ರೀಮಿಯಂ ಬಹು ಬಳಕೆಯ ವಾಹನ (ಎಂಪಿವಿ) ವಿಭಾಗದಲ್ಲಿ ಇನ್ನೋವಾ ನೆಚ್ಚಿನ ಕಾರೆಂಬ ಪಟ್ಟ ಕಟ್ಟಿಕೊಂಡಿತ್ತು.

2005ರಲ್ಲಿ ಟೊಯೊಟಾದ ಜನಪ್ರಿಯ ಕ್ವಾಲಿಸ್ ಮಾದರಿಗೆ ಬದಲಾಗಿ ಇನ್ನೋವಾ ಪ್ರವೇಶವಾಗಿತ್ತು. ಇದು ಏಕಕಾಲದಲ್ಲಿ ಖಾಸಗಿ ಮತ್ತು ವಾಣಿಜ್ಯ ಬಳಕೆದಾರರ ನೆಚ್ಚಿನ ಗಾಡಿಯೆನಿಸಿತ್ತು.
picture credit: car and Bike

ಈದೀಗ ಒಂದು ದಶಕದ ಬಳಿಕವೂ ಟೊಯೊಟಾ ಇನ್ನೋವಾ 'ಕಿಂಗ್ ಮೇಕರ್' ಎಂಬ ಪಟ್ಟವನ್ನು ಉಳಿಸಿಕೊಂಡಿದೆ. ಇದರೊಂದಿಗೆ ಹೊಸ ತಾಜಾತನದ ಇನ್ನೋವಾ ಕ್ರೈಸ್ಟಾಗೆ ಹಾದಿ ಬಿಟ್ಟುಕೊಟ್ಟಿದೆ.
picture credit: car and Bike

ಇನ್ನೋವಾ ಕ್ರೈಸ್ಟಾ ಜೊತೆ ಹಳೆಯ ಮಾದರಿಯ ಮಾರಾಟ ನಡೆಸಲಿದೆಯೇ ಎಂಬುದು ಗೊಂದಲಕ್ಕೆ ಕಾರಣವಾಗಿತ್ತು. ಆದರೆ ಬಿಡದಿಯ ಘಟಕದಲ್ಲಿ ನಡೆದ ಅಮೋಘ ಕಾರ್ಯಕ್ರಮದಲ್ಲಿ ಕೊನೆಯ ಇನ್ನೋವಾ ಹೊರ ಬರುತ್ತಿದ್ದಂತೆಯೇ ಎಲ್ಲ ಪ್ರಶ್ನೆಗಳಿಗೂ ಉತ್ತರ ಲಭಿಸಿದೆ.
picture credit: car and Bike
ದೇಶ ಎಂಪಿವಿ ವಿಭಾಗಕ್ಕೆ ಮಾರುತಿ ಸುಜುಕಿ ಎರ್ಟಿಗಾ, ಹೋಂಡಾ ಮೊಬಿಲಿಯೊ, ಮಹೀಂದ್ರ ಕ್ಸೈಲೋ, ನಿಸ್ಸಾನ್ ಇವಾಲಿಯಾ, ರೆನೊ ಲೊಡ್ಜಿಗಳಂತಹ ಸಾಲು ಸಾಲು ಕಾರುಗಳು ಪ್ರವೇಶಿಸಿದರೂ ಇನ್ನೋವಾ ಯಶಸ್ಸಿಗೆ ಧಕ್ಕೆ ತರಲು ಸಾಧ್ಯವಾಗಲಿಲ್ಲ.

ಇನ್ನೋವಾ ಕಾರಿನಲ್ಲಿ ಒದಗಿಸಲಾಗುತ್ತಿರುವ ಆರಾಮ ಹಾಗೂ ಅನುಕೂಲತೆ, ನಿರ್ಮಾಣ ಗುಣಮಟ್ಟತೆ, ವಿನ್ಯಾಸ ಹಾಗೂ ನೋಟ, ನಿರ್ವಹಣೆ, ಚಾಲನಾ ಅನುಭವ, ಭದ್ರತೆ ಹೀಗೆ ಎಲ್ಲ ವಿಭಾಗದಲ್ಲೂ ತನ್ನ ಪ್ರತಿಸ್ಪರ್ಧಿಗಳನ್ನು ಮೀರಿ ನಿಂತಿದೆ.

ದೆಹಲಿಯಲ್ಲಿ ನಡೆಯುತ್ತಿದ 2016 ಆಟೋ ಎಕ್ಸ್ ಪೋದಲ್ಲಿ ನೂತನ ಟೊಯೊಟಾ ಇನ್ನೋವಾ ಕ್ರೈಸ್ಟಾ (Toyota Innova Crysta) ಭರ್ಜರಿ ಅನಾವರಣಗೊಂಡಿತ್ತು. ಇದರಲ್ಲಿ ಸಂಪೂರ್ಣವಾದ ಹೊಸತಾದ ಎಂಜಿನ್ ಆಳವಡಿಸಲಾಗಿದೆ.

ಎಂಜಿನ್ ತಾಂತ್ರಿಕತೆ
ಡೀಸೆಲ್ 2.4 ಲೀಟರ್
147 ಅಶ್ವಶಕ್ತಿ (3400 rpm)
359 ಎನ್‌ಎಂ ತಿರುಗುಬಲ (1200-2800 rpm)
6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್

ವಿಶಿಷ್ಟತೆಗಳು
ಹೊಸ ಡೀಸೆಲ್ ಎಂಜಿನ್,
6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್,
ಹೊಸ ಚಾಸೀ,
ಎಬಿಎಸ್ ಜೊತೆ ಇಬಿಡಿ,
ಹಿಲ್ ಸ್ಟ್ಯಾರ್ಟ್ ಅಸಿಸ್ಟ್,

ವಿಶಿಷ್ಟತೆಗಳು
ಕೀಲೆಸ್ ಎಂಟ್ರಿ ಮತ್ತು ಪುಶ್ ಬಟನ್ ಎಂಜಿನ್ ಸ್ಟ್ಯಾರ್ಟ್/ಸ್ಟಾಪ್,
ಚಾಲಕ ಮತ್ತು ಪ್ರಯಾಣಿಕ ಬದಿಯ ಏರ್ ಬ್ಯಾಗ್ (ಸ್ಟ್ಯಾಂಡರ್ಡ್),
ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಜೊತೆ ರಿಯರ್ ಆಟೋ ಕೂಲರ್,
8 ಇಂಚುಗಳ ಟಚ್ ಸ್ಕ್ರೀನ್ ನಿಯಂತ್ರಿತ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಏರ್ ಗೆಸ್ಟರ್,
ಡ್ಯಾಶ್ ಬೋರ್ಡ್ ನಲ್ಲಿ ಮರದ ಸ್ಪರ್ಶ

ಪ್ರಸ್ತುತ ಮುಂಬೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಇನ್ನೋವಾ 10.48 ಲಕ್ಷ ರು.ಗಳಿಂದ ಟಾಪ್ ಎಂಡ್ 16.01 ಲಕ್ಷ ರು.ಗಳ ವರೆಗೆ ದುಬಾರಿಯೆನಿಸಿದೆ. ಅಂದರೆ ಹೊಸ ಇನ್ನೋವಾ ಇದಕ್ಕಿಂತಲೂ ಬೆಲೆ ಬಾಳಲಿದೆ.


Click it and Unblock the Notifications