ಈ 5 ಕಿಯಾ ಕಾರುಗಳು ಭಾರತಕ್ಕೆ ಆಗಮಿಸಿದ್ದಲ್ಲಿ ಎಷ್ಟು ಚೆಂದ ನೋಡಿ!

By Nagaraja

ಹ್ಯುಂಡೈ ಸೋದರಿ ಬ್ರಾಂಡ್ ಆಗಿರುವ ಕಿಯಾ ಮೋಟಾರ್ಸ್ ಭಾರತಕ್ಕೆ ಪ್ರವೇಶ ಪಡೆಯಲಿದೆಯೇ ಎಂಬುದರ ಬಗ್ಗೆ ವಾಹನ ಜಗತ್ತಿನಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ಸಂಬಂಧ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈಯಾಗಲೀ ಅಥವಾ ಕಿಯಾ ಆಗಲಿ ಅಧಿಕೃತ ಪ್ರಕಟಣೆಯನ್ನು ಹೊರಡಿಸಿಲ್ಲ.

ಹಾಗಿದ್ದರೂ ಕಿಯಾ ಕಾರುಗಳು ಹ್ಯುಂಡೈಗೆ ದೇಶದಲ್ಲಿ ಮತ್ತಷ್ಟು ಪ್ರೀಮಿಯಂ ಸ್ಪರ್ಶ ನೀಡಲಿದೆ. 1944ನೇ ಇಸವಿಯಿಂದಲೇ ಅಸ್ತಿತ್ವದಲ್ಲಿರುವ ಕಿಯಾ ಕಾರುಗಳು ಭಾರತ ಪ್ರವೇಶಿಸಿದ್ದಲ್ಲಿ ಅಚ್ಚರಿಪಡಬೇಕಿಲ್ಲ. ಭಾರತಕ್ಕೆ ಎಂಟ್ರಿ ಕೊಡಲು ಸಾಧ್ಯತೆಯಿರುವ ಕೆಲವು ಪ್ರಮುಖ ಕಿಯಾ ಕಾರುಗಳನ್ನು ನಾವಿಲ್ಲಿ ಪರಿಚಯಿಸಲಿದ್ದೇವೆ.

ಪಿಕಾಂಟೊ

ಪಿಕಾಂಟೊ

ಸ್ಟೈಲಿಷ್ ಹಾಗೂ ಕಾಂಪಾಕ್ಟ್ ವಿನ್ಯಾಸವನ್ನು ಪಿಕಾಂಟೊ ಕಾಪಾಡಿಕೊಂಡಿದೆ. ಭಾರತದಂತಹ ತೀವ್ರ ವಾಹನ ದಟ್ಟಣೆಯ ರಸ್ತೆಗಳಲ್ಲಿ ಪಿಕಾಂಟೊ ಅದ್ಭುತ ಚಾಲನಾ ಅನುಭವವನ್ನು ನೀಡಲಿದೆ. ಇದು ದೇಶದಲ್ಲಿ ಹ್ಯುಂಡೈ ಇಯಾನ್ ಹಾಗೂ ಗ್ರಾಂಡ್ ಐ10 ನಡುವೆ ಗುರುತಿಸಿಕೊಳ್ಳುವ ಸಾಧ್ಯತೆಯಿದ್ದು, ಹಳೆಯ ಐ10ಗೆ ಪರಿಪೂರ್ಣ ಬದಲಿ ಆಯ್ಕೆಯಾಗಿರಲಿದೆ.

ಪಿಕಾಂಟೊ

ಪಿಕಾಂಟೊ

ಜಾಗತಿಕವಾಗಿ ಪಿಕಾಂಟೊ 1.2 ಲೀಟರ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಆದರೆ ಭಾರತಕ್ಕೆ ಇಯಾನ್ ನಲ್ಲಿರುವುದಕ್ಕೆ ಸಮಾನವಾದ 1.0 ಲೀಟರ್ ಎಂಜಿನ್ ಆಳವಡಿಸಿದರೆ ಸೂಕ್ತವೆನಿಸುವುದು. ಇಲ್ಲಿ ಎದುರಾಗುವ ಒಂದೇ ಒಂದು ತೊಂದರೆ ಏನೆಂದರೆ ಪಿಕಾಂಟೊ ಬದಲು ಬೇರೆ ಏನಾದರೂ ಹೆಸರನ್ನು ಸೂಚಿಸಬಹುದು. ಯಾಕೆಂದರೆ ಪಿಕಾಂಟೊ ಉಚ್ಛಾರಣೆ ಭಾರತೀಯರಿಗೆ ಸ್ವಲ್ಪ ಕಷ್ಟವಾದಿತು.

ರಿಯೊ

ರಿಯೊ

ಮಾರುತಿ ಸ್ವಿಫ್ಟ್ ಗೆ ನೇರ ಎದುರಾಳಿಯಾಗಲಿದೆ ರಿಯೊ. ಇದು ಎಲ್ ಇಡಿ ಡೈಟೈಮ್ ರನ್ನಿಂಗ್ ಲೈಟ್ಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ ಮತ್ತು ರಿವರ್ಸ್ ಪಾರ್ಕಿಂಗ್ ಅಸಿಸ್ಟನ್ಸ್ ಮುಂತಾದ ವೈಶಿಷ್ಟ್ಯಗಳಿಂದ ತುಂಬಿ ತುಳುಕುತ್ತಿದೆ.

ರಿಯೊ

ರಿಯೊ

ಭಾರತದಲ್ಲಿ ಹ್ಯಾಚ್ ಬ್ಯಾಕ್ ಕಾರುಗಳಿಗೆ ಅತಿ ಹೆಚ್ಚು ಬೇಡಿಕೆ ಇರುವುದರಿಂದ ಪರಿಪೂರ್ಣ ಪ್ಯಾಕೇಜ್ ಗಳನ್ನು ಒಳಗೊಂಡಿರುವ ರಿಯೊ ದೇಶದ ವಾಹನ ಪ್ರೇಮಿಗಳಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.

ರಿಯೊ ಸೆಡಾನ್

ರಿಯೊ ಸೆಡಾನ್

ಸೆಡಾನ್ ವಿಭಾಗದಲ್ಲೂ ಕಿಯಾ ಅತ್ಯುತ್ತಮ ಕಾರನ್ನು ಒದಗಿಸುತ್ತದೆ. ಇದು ನೇರವಾಗಿ ಟೊಯೊಟಾ ಎಟಿಯೋಸ್, ರೆನೊ ಸ್ಕಾಲಾ ಹಾಗೂ ನಿಸ್ಸಾನ್ ಸನ್ನಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ರಿಯೊ ಸೆಡಾನ್

ರಿಯೊ ಸೆಡಾನ್

ರಿಯೊ ಸೆಡಾನ್ ಕಾರು ಹ್ಯುಂಡೈ ವೆರ್ನಾದಲ್ಲಿರುವುದಕ್ಕೆ ಸಮಾನವಾದ ಶಕ್ತಿಶಾಲಿ 1.4 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ.

ಕೇರೆನ್ಸ್

ಕೇರೆನ್ಸ್

ಭಾರತದಲ್ಲಿ ಬಹು ಬಳಕೆಯ ವಾಹನ (ಎಂಪಿವಿ) ಬಿಡುಗಡೆಯ ಯೋಜನೆಯಲ್ಲಿರುವ ಹ್ಯುಂಡೈ ಸಂಸ್ಥೆಗೆ ಕಿಯಾ ಕೇರೆನ್ಸ್ ಸ್ಪಷ್ಟ ಉತ್ತರವಾಗಲಿದೆ.

ಕೇರೆನ್ಸ್

ಕೇರೆನ್ಸ್

ಏಳು ಸೀಟುಗಳ ಕಿಯಾ ಕೇರೆನ್ಸ್ ಮಾರುಕಟ್ಟೆಯಲ್ಲಿ ಗರಿಷ್ಠ ಮಾರಾಟದಲ್ಲಿರುವ ಟೊಯೊಟಾ ಇನ್ನೋವಾ ಕ್ರೈಸ್ಟಾ ಹಾಗೂ ರೆನೊ ಲೊಡ್ಜಿ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

ಸ್ಪೋರ್ಟೆಜ್

ಸ್ಪೋರ್ಟೆಜ್

ಭಾರತದಲ್ಲಿ ಕ್ರೀಡಾ ಬಳಕೆಯ ವಾಹನಗಳಿಗೆ (ಎಸ್ ಯುವಿ) ಬೇಡಿಕೆ ಹೆಚ್ಚುತ್ತಲೇ ಇದೆ. ಹಾಗಿರುವಾಗ 2.0 ಲೀಟರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿತ ಶಕ್ತಿಶಾಲಿ ಕಿಯಾ ಸ್ಪೋರ್ಟೆಜ್ ಕಾರು ಪರಿಪೂರ್ಣ ಆಯ್ಕೆಯಾಗಿರಲಿದೆ.

ಸ್ಪೋರ್ಟೆಜ್

ಸ್ಪೋರ್ಟೆಜ್

ಕಿಯಾ ಸ್ಪೋರ್ಟೆಜ್ ಕಾರು ದೇಶದ ಮಾರುಕಟ್ಟೆಯಲ್ಲಿ ಮಹೀಂದ್ರ ಎಕ್ಸ್ ಯುವಿ500 ಕಾರಿಗೆ ಪ್ರತಿಸ್ಪರ್ಧೆಯಾಗಲಿದೆ. ಇದರ ಎಂಜಿನ್ 134 ಹಾಗೂ 183 ಗಳೆಂಬ ಎರಡು ಟ್ಯೂನ್ ಗಳಲ್ಲಿ ಅಶ್ವಶಕ್ತಿ ವಿತರಿಸಲಿದೆ.

ಈ 5 ಕಿಯಾ ಕಾರುಗಳು ಭಾರತಕ್ಕೆ ಆಗಮಿಸಿದ್ದಲ್ಲಿ ಎಷ್ಟು ಚೆಂದ ನೋಡಿ!

ಅಷ್ಟಕ್ಕೂ ಇಲ್ಲಿ ಕೊಟ್ಟಿರುವ ಕಿಯಾ ಕಾರುಗಳು ನಿಮಗೆ ಇಷ್ಟವಾಯಿತೇ ? ಈ ಸಂಬಂಧ ನಿಮ್ಮ ಅನಿಸಿಕಗಳನ್ನು ಕೆಳಗಡೆ ಕೊಟ್ಟಿರುವ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಲು ಮರೆಯದಿರಿ.

More from DriveSpark

Article Published On: Thursday, August 18, 2016, 15:49 [IST]
English summary
5 Kia Cars That Should Come To India
Read more on ಕಾರು car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+