ಆಟೋ ಎಕ್ಸ್‌ಪೋಗೆ ಸಿದ್ಧಗೊಂಡ ಎರಡು ರತ್ನಗಳು
ಮುಂಬರುವ ಫೆಬ್ರವರಿ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಸಂಸ್ಥೆಯು ಎರಡು ಹೊಸ ಕಾನ್ಸೆಪ್ಟ್ ಮಾದರಿಗಳನ್ನು ಪ್ರದರ್ಶಿಸಲಿದೆ.
ಭಾರತದಲ್ಲಿ ಷೆವರ್ಲೆ ಕಾರು ಬ್ರಾಂಡ್ ಮಾಡುತ್ತಿರುವ ಜನರಲ್ ಮೋಟಾರ್ಸ್, ತನ್ನ ಶ್ರೇಣಿಯ ವಾಹನಗಳನ್ನು ವಿಸ್ತರಿಸುವ ಯೋಜನೆಯಲ್ಲಿದೆ. ಇದಕ್ಕೆ ಆಟೋ ಎಕ್ಸ್ ಪೋ ಪರಿಪೂರ್ಣ ವೇದಿಕೆಯಾಗಲಿದೆ.

ಎರಡು ನೂತನ ಕಾನ್ಸೆಪ್ಟ್ ಗಳ ಜೊತೆಗೆ ತನ್ನ ಶ್ರೇಣಿಯ ಹೊಸ ಹಾಗೂ ಪರಿಷ್ಕೃತ ಮಾದರಿಗಳನ್ನು ಪರಿಚಯಿಸುವ ಇರಾದೆಯನ್ನು ಷೆವರ್ಲೆ ಹೊಂದಿದೆ. ಈ ಮೂಲದ ದೇಶದ ಮೇಲಿರುವ ತನ್ನ ಬದ್ಧತೆಯನ್ನು ಪ್ರದರ್ಶಿಸಲಿದೆ.
ನಿಮ್ಮ ಮಾಹಿತಿಗಾಗಿ, ಆಟೋ ಎಕ್ಸ್ ಪೋ ಎರಡು ವರ್ಷಗಳಿಗೊಮ್ಮೆ ನವದೆಹಲಿಯಲ್ಲಿ ನಡೆಯುತ್ತಿರುವ ದೇಶದ ಅತಿ ದೊಡ್ಡ ವಾಹನ ಮೇಳವಾಗಿದೆ. ದೇಶದ ಬಹುತೇಕ ಸಂಸ್ಥೆಗಳು ತನ್ನ ಹೊಸ ಕಾನ್ಸೆಪ್ಟ್ ಗಳೊಂದಿಗೆ ಆಟೋ ಎಕ್ಸ್ ಪೋವನ್ನು ಬರಮಾಡಿಕೊಳ್ಳುತ್ತಿದ್ದು, ಪ್ರತಿ ಬಾರಿಯಂತೆಯೂ ಈ ಬಾರಿಯೂ ಸಾವಿರಾರು ಸಂಖ್ಯೆಯ ವಾಹನ ಪ್ರೇಮಿಗಳನ್ನು ಆಕರ್ಷಿಸಲಿದೆ.


Click it and Unblock the Notifications








