ದೀಪಾವಳಿ ಧಮಾಕಾ; ಟಾಪ್ ಬೆಸ್ಟ್ ಕಾರು, ಬೈಕ್ ಆಫರ್ ಗಳು
ಯಾವುದೇ ಕಾರಣಕ್ಕೂ ಕಾರು ಬೈಕ್ ಮೇಲಿನ ದೀಪಾವಳಿ ಆಫರ್ ಮಿಸ್ ಮಾಡದಿರಿ!
ದೀಪಾವಳಿ ಹಬ್ಬದ ಆವೃತ್ತಿಯ ಅಂಗವಾಗಿ ಬಹುತೇಕ ಎಲ್ಲ ವಾಹನ ಸಂಸ್ಥೆಗಳು ಗರಿಷ್ಠ ಮಾರಾಟವನ್ನು ಮುಂದಿಟ್ಟಿದೆ. ಈ ಅವಧಿಯಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುವುದು ದೇಶದ ಮುಂಚೂಣಿಯ ವಾಹನ ಸಂಸ್ಥೆಗಳ ಗುರಿಯಾಗಿದೆ. ಇಲ್ಲಿ ಕಾರು ಹಾಗೂ ಬೈಕ್ ಗಳಿಗೆ ವಿಶೇಷ ಆಫರ್ ಗಳನ್ನು ನೀಡಲಾಗುತ್ತಿದೆ. ಈ ಸಂಬಂಧ ವಿಸೃತ ಮಾಹಿತಿಗಳನ್ನು ಇಲ್ಲಿ ಕೊಡಲಾಗುವುದು.

ಮಾರುತಿ ಸುಜುಕಿ
ದೇಶದ ಅತಿ ದೊಡ್ಡ ವಾಹನ ಸಂಸ್ಥೆಯಾಗಿರುವ ಮಾರುತಿ ಸುಜುಕಿ ತನ್ನ ಜನಪ್ರಿಯ ಮಾದರಿಗಳಾದ ಸ್ವಿಫ್ಟ್, ಸ್ವಿಫ್ಟ್ ಡಿಜೈರ್, ಸಿಯಾಝ್, ಎರ್ಟಿಗಾ ಮತ್ತು ಎಸ್ ಕ್ರಾಸ್ ಮಾದರಿಗಳಿಗೆ ಡಿಸ್ಕೌಂಟ್ ಮತ್ತು ಎಕ್ಸ್ ಚೇಂಜ್ ಬೋನಸ್ ಗಳನ್ನು ಮುಂದಿಟ್ಟಿದೆ.

ಮಾರುತಿ ಕಾರುಗಳಿಗೆ 45,000 ರು.ಗಳ ವರೆಗೆ ಡಿಸ್ಕೌಂಟ್ ಹಾಗೂ 50,000 ರು.ಗಳ ವರೆಗೆ ಎಕ್ಸ್ ಚೇಂಜ್ ಬೋನಸ್ ನೀಡಲಾಗುತ್ತದೆ. ಆದರೆ ಈ ಆಫರುಗಳು ಅತಿ ಹೆಚ್ಚು ಮಾರಾಟವಾಗುತ್ತಿರುವ ಮಾರುತಿ ಬಲೆನೊ ಮತ್ತು ವಿಟಾರಾ ಬ್ರಿಝಾ ಕಾರುಗಳಿಗೆ ಲಭ್ಯವಾಗಿರುವುದಿಲ್ಲ.

ಹ್ಯುಂಡೈ
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ, ಕ್ರೆಟಾ ಕ್ರೀಡಾ ಬಳಕೆಯ ವಾಹನದ ಹೊರತಾಗಿ ಇತರೆಲ್ಲ ಕಾರುಗಳಿಗೆ ವಿಶೇಷ ಪ್ರಯೋಜನಗಳನ್ನು ಒದಗಿಸುತ್ತಿದೆ.

ಹ್ಯುಂಡೈ ಐಯಾನ್ ಮತ್ತು ಐ10 ಮಾದರಿಗಳಿಗೆ 62,500 ರು.ಗಳ ವರೆಗೆ ಎಕ್ಸ್ ಚೇಂಜ್ ಆಫರ್, ಹಾಗೆಯೇ ಗ್ರಾಂಡ್ ಐ10 ಮತ್ತು ಎಕ್ಸ್ ಸೆಂಟ್ ಕಾಂಪಾಕ್ಟ್ ಸೆಡಾನ್ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳಿಗೆ 91,000 ರು.ಗಳ ವರೆಗೆ ಆಫರ್ ನೀಡಲಾಗುತ್ತದೆ. ಇನ್ನೊಂದೆಡೆ ಸಾಂಟಾ ಫೆಗೆ 1.50 ಲಕ್ಷ ರು.ಗಳ ವರೆಗೆ ಪ್ರಯೋಜನ ಲಭ್ಯವಾಗಲಿದೆ.

ರೆನೊ
ರೆನೊ ತನ್ನ ಜನಪ್ರಿಯ ಡಸ್ಟರ್ ಎಸ್ ಯುವಿ ಕಾರಿನ ಎಎಂಟಿ ಮಾದರಿಗೆ 40,000 ರು.ಗಳ ವರೆಗೆ ಆಫರ್ ನೀಡುತ್ತಿದೆ.

ಹೋಂಡಾ
ಜಪಾನ್ ಮೂಲದ ಹೋಂಡಾ ಸಂಸ್ಥೆಯು ಮೊಬಿಲಿಯೊ ಪೆಟ್ರೋಲ್ ಹಾಗೂ ಡೀಸೆಲ್ ಕಾರುಗಳಿಗೆ ಅನುಕ್ರಮವಾಗಿ 1.20 ಲಕ್ಷ ರು. ಹಾಗೂ 2 ಲಕ್ಷ ರು.ಗಳ ವರೆಗೆ ವಿಶೇಷ ಪ್ರಯೋಜನಗಳು ಲಭ್ಯವಾಗಲಿದೆ.

ಫೋರ್ಡ್
ಪ್ರೀಮಿಯಂ ಎಸ್ ಯುವಿ ವಿಭಾಗದಲ್ಲಿ ಗರಿಷ್ಠ ಮಾರಾಟ ಕಾಯ್ದುಕೊಂಡಿರುವ ಎಂಡೀವರ್ ಕಾರಿಗೂ ಫೋರ್ಡ್ ಸಂಸ್ಥೆಯು ಆಫರ್ ಗಳನ್ನು ಒದಗಿಸುತ್ತಿದೆ. ಮುಂಬರುವ ನೂತನ ಟೊಯೊಟಾ ಫಾರ್ಚ್ಯುನರ್ ಭೀತಿಯನ್ನು ಮನಗಂಡು ಫೋರ್ಡ್ ಇಂತಹದೊಂದು ಹೆಜ್ಜೆ ಮುಂದಿಟ್ಟಿದೆ.

ಎಂಡೀವರ್
ಇದೀಗ ಫೋರ್ಡ್ ಎಂಡೀವರ್ ಎಂಟ್ರಿ ಲೆವೆಲ್ ರಿಯರ್ ವೀಲ್ ಡ್ರೈವ್ ಜೊತೆಗಿನ 2.2 ಲೀಟರ್ ಮ್ಯಾನುವಲ್ ಆವೃತ್ತಿಯು 25.50 ಲಕ್ಷ ರು.ಗಳಿಗೆ ಲಭ್ಯವಾಗಲಿದೆ. ಅದೇ ಹೊತ್ತಿಗೆ ಇದೇ ಎಂಜಿನ್ ಹಾಗೂ ಗೇರ್ ಬಾಕ್ಸ್ ಒಳಗೊಂಡಿರುವ ರಿಯರ್ ವೀಲ್ ಡ್ರೈವ್ ಆವೃತ್ತಿಯು 23.78 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಆಟೋಮ್ಯಾಟಿಕ್ ಆವೃತ್ತಿಗೂ ಇದು ಅನ್ವಯವಾಗಲಿದೆ.

ಹಾಗೆಯೇ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗಿನ ರಿಯರ್ ವೀಲ್ ಡ್ರೈವ್ 3.2 ಲೀಟರ್ ಟ್ರೆಂಡ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 25.93 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಅಂದರೆ 1.72 ಲಕ್ಷ ರು.ಗಳಷ್ಟು ಬೆಲೆ ಕಡಿತಗೊಂಡಿದೆ.

ಫೋಕ್ಸ್ ವ್ಯಾಗನ್
'ಫೋಕ್ಸ್ ಫೆಸ್ಟ್' ಎಂಬ ಹೆಸರಿನಿಂದ ಹಬ್ಬದ ಆವೃತ್ತಿಯನ್ನು ಬರಮಾಡಿಕೊಂಡಿರುವ ಫೋಕ್ಸ್ ವ್ಯಾಗನ್ ತನ್ನ ಜನಪ್ರಿಯ ಪೊಲೊ, ವೆಂಟೊ ಮತ್ತು ಜೆಟ್ಟಾ ಕಾರುಗಳಿಗೆ ಆಫರ್ ಗಳನ್ನು ನೀಡುತ್ತಿದೆ.

ಫೋಕ್ಸ್ ವ್ಯಾಗನ್ ಪೊಲೊ ಮತ್ತು ವೆಂಟೊ ಖರೀದಿಸುವಾಗ ಶೇಕಡಾ ಶೂನ್ಯ ಬಡ್ಡಿದರದಲ್ಲಿ ಮೂರು ವರ್ಷಗಳಿಗೆ ಅಥವಾ 35,000 ರು.ಗಳ ಕ್ಯಾಶ್ ಬ್ಯಾಕ್ ಆಫರ್ ನೀಡಲಾಗುತ್ತಿದೆ.

ಅದೇ ರೀತಿ ಶೇಕಡಾ 4.99 ಬಡ್ಡಿದರಲ್ಲಿ ಫೋಕ್ಸ್ ವ್ಯಾಗನ್ ಜೆಟ್ಟಾಗೆ ಕಾರು ಸಾಲ ಲಭ್ಯವಾಗಲಿದೆ. ಸಂಸ್ಥೆಯು ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಲಾಯಲ್ಟಿ ಪ್ರಯೋಜನವನ್ನು ನೀಡುತ್ತಿದ್ದು, ವಿಶೇಷ ಲಕ್ಕಿ ಡ್ರಾದಲ್ಲಿ ವಿಜೇತರಾದವರಿಗೆ ಮಲ್ಟಿಮೀಡಿಯಾ ಟಾಬ್ಲೆಟ್ ಗೆಲ್ಲುವ ಅವಕಾಶವಿರುತ್ತದೆ.

ಬಿಎಂಡಬ್ಲ್ಯು ನೂತನ ಗ್ರಾಹಕರಿಗೆ ಬಿಎಂಡಬ್ಲ್ಯು ಫಿನಾನ್ಸಿಯಲ್ ಸರ್ವೀಸಸ್ ಮುಖಾಂತರ ಶೇಕಡಾ 7.99 ರ ಬಡ್ಡಿದರದಲ್ಲಿ ಸಾಲ ನೀಡಲಾಗುತ್ತದೆ.

ಅಂತೆಯೇ ಬಿಎಂಡಬ್ಲ್ಯು ಸರ್ವಿಸ್ ಇನ್ ಕ್ಲೂಸಿವ್ ಪ್ಲಸ್ ಮತ್ತು ಬಿಎಂಡಬ್ಲ್ಯು ರಿಪೇರಿ ಇನ್ ಕ್ಲೂಸಿಸ್ ಮೂರು ವರ್ಷಗಳಿಗೆ ಅಥವಾ 40,000 ರು.ಗಳ ವರೆಗೆ ಸೇವೆಯನ್ನು ಒದಗಿಸಲಿದೆ. ಪ್ರಸ್ತುತ ಆಫರ್ ಅಕ್ಟೋಬರ್ ತಿಂಗಳಲ್ಲಿ ಬಿಎಂಡಬ್ಲ್ಯು 3 ಸಿರೀಸ್, 5 ಸಿರೀಸ್ ಮತ್ತು ಎಕ್ಸ್ 3 ಮಾದರಿಗಳಿಗೆ ಲಭ್ಯವಾಗಲಿದೆ.

ಆಡಿ
ಆಡಿ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಒಂದು ಲಕ್ಷ ರುಪಾಯಿಗಳ ವರೆಗೆ ಎಕ್ಸ್ ಚೇಂಜ್ ಬೋನಸ್ ಮತ್ತು ಮೂರು ವರ್ಷಗಳ ವರೆಗೆ ವರ್ಧಿತ ವಾರಿಂಟಿ ಸೌಲಭ್ಯವನ್ನು ನೀಡುತ್ತಿದೆ.

ಬೈಕ್ - ಹೀರೊ ಮೊಟೊಕಾರ್ಪ್
ದೇಶದ ಅತಿ ದೊಡ್ಡ ದ್ವಿಚಕ್ರ ವಾಹನ ಸಂಸ್ಥೆಯಾಗಿರುವ ಹೀರೊ ಮೊಟೊಕಾರ್ಪ್ ತನ್ನೆಲ್ಲ ಬೈಕ್ ಹಾಗೂ ಸ್ಕೂಟರ್ ಗಳಿಗೆ ವಿಶೇಷ ಇಎಂಐ ಸೇವೆಯನ್ನು ಒದಗಿಸುತ್ತಿದೆ. ಹೀರೊ ಡ್ಯುಯೆಟ್, ಮ್ಯಾಸ್ಟ್ರೋ, ಎಡ್ಜ್ ಮತ್ತು ಪ್ಲೆಶರ್ ಸ್ಕೂಟರ್ ಗಳಿಗೆ ಶೇಕಡಾ ಶೂನ್ಯ ಬಡ್ಡಿದರ ಹಾಗೂ ಮೊದಲ ವರ್ಷದ ಉಚಿತ ವಿಮಾ ಸೇವೆಯು ಲಭ್ಯವಾಗಲಿದೆ.

ಹೀರೊ ಶ್ರೇಣಿಯ ಸ್ಕೂಟರ್ ಬೈಕ್ ಗಳಿಗೆ ಐದು ವರ್ಷಗಳ ವರ್ಧಿತ ವಾರಂಟಿ ಸೇವೆಯು ಲಭ್ಯವಾಗಲಿದೆ. ಇನ್ನು ಡೀಲರುಗಳಲ್ಲಿ ಆಕ್ಸೆಸರಿಗಳಿಗೆ ವಿಶೇಷ ಆಫರ್ ಸಹ ನೀಡಲಾಗುತ್ತಿದೆ.

ಟಿವಿಎಸ್
ಟಿವಿಎಸ್ ಸಹ ವಿಶೇಷ ಹಣಕಾಸು ಯೋಜನೆಗಳನ್ನು ಮುಂದಿಟ್ಟಿದ್ದು, ಶೇಕಡಾ 3.99 ಬಡ್ಡಿದರಲ್ಲಿ ಸಾಲವನ್ನು ನೀಡುತತ್ದೆ. ಹಾಗೆಯೇ ಉಚಿತ 24/7 ರೋಡ್ ಸಹಾಯ ಸೇವೆಯು ಲಭ್ಯವಾಗಲಿದೆ.

ಭಾರತದಲ್ಲಿ ಹಬ್ಬಗಳಿಗೆ ಅತಿ ಹೆಚ್ಚಿನ ಪ್ರಾಮುಖ್ಯತೆಯಿದ್ದು, ಅದರಲ್ಲೂ ದೀಪಾವಳಿ ವೇಳೆಯಲ್ಲಿ ಅತಿ ಹೆಚ್ಚು ಕಾರು ಮತ್ತು ಬೈಕ್ ಗಳ ಮಾರಾಟವಾಗುತ್ತಿದೆ. ಹೊಸ ಕಾರು ಅಥವಾ ಬೈಕ್ ಖರೀದಿಸಲು ಬಯಸುವ ಗ್ರಾಹಕರು ಹತ್ತಿರದ ಡೀಲರುಗಳಿಗೆ ತೆರಳಿ ಆಫರ್ ಗಳ ಬಗ್ಗೆ ಕೂಲಂಕುಷವಾಗಿ ಪರಿಶೋಧನೆ ಮಾಡಿಕೊಳ್ಳತಕ್ಕುದ್ದು.


Click it and Unblock the Notifications








