ನಮ್ಮ ಬೆಂಗಳೂರಿಗೆ ಹೋಂಡಾ ಬಿಆರ್-ವಿ ಭರ್ಜರಿ ಎಂಟ್ರಿ
ಈಗಾಗಲೇ ಭಾರತೀಯ ಮಾರುಕಟ್ಟೆಗೆ ಪ್ರವೇಶ ಪಡೆದಿರುವ ಹೋಂಡಾ ಬಿಆರ್-ವಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವು ಸ್ಥಳೀಯ ಬಿಡುಗಡೆ ಭಾಗವಾಗಿ ನಮ್ಮ ಬೆಂಗಳೂರಿನಲ್ಲಿ ಭರ್ಜರಿ ಬಿಡುಗಡೆ ಕಂಡಿದೆ.
ಆರಂಭಿಕ ಬೆಲೆ: 8.86 ಲಕ್ಷ ರು. (ಎಕ್ಸ್ ಶೋ ರೂಂ ಬೆಂಗಳೂರು)
ನೂತನ ಹೋಂಡಾ ಬಿಆರ್-ವಿ ಪೆಟ್ರೋಲ್ ಆರಂಭಿಕ ಬೆಲೆ 8.86 ಲಕ್ಷ ರು.ಗಳಾಗಿದ್ದು, ಟಾಪ್ ಎಂಡ್ ಡೀಸೆಲ್ ಆವೃತ್ತಿಯು 13.08 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ. ಈ ಮೂಲಕ ಗರಿಷ್ಠ ಮಾರಾಟವನ್ನು ಹೋಂಡಾ ಗುರಿಯಾಗಿರಿಸಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)
ಪೆಟ್ರೋಲ್
- ಇ: 8.86 ಲಕ್ಷ ರು.
- ಎಸ್: 9.99 ಲಕ್ಷ ರು.
- ವಿ: 11.05 ಲಕ್ಷ ರು.
- ವಿಎಕ್ಸ್: 11.99 ಲಕ್ಷ ರು.
- ವಿ (ಸಿವಿಟಿ): 12.14 ಲಕ್ಷ ರು.
- ಇ: 9.99 ಲಕ್ಷ ರು.
- ಎಸ್: 11.13 ಲಕ್ಷ ರು.
- ವಿ: 12.01 ಲಕ್ಷ ರು.
- ವಿಎಕ್ಸ್: 13.08 ಲಕ್ಷ ರು.
- ಕಾರ್ನೆಲಿಯನ್ ರೆಡ್ ಪಿಯರ್ಲ್,
- ವೈಟ್ ಓರ್ಕಿಡ್ ಪಿಯರ್ಲ್,
- ಅಲಬಾಸ್ಟರ್ ಸಿಲ್ವರ್ ಮೆಟ್ಯಾಲಿಕ್,
- ಗೋಲ್ಡನ್ ಬ್ರೌನ್ ಮೆಟ್ಯಾಲಿಕ್,
- ಅರ್ಬನ್ ಟೈಟಾನಿಯಂ ಮೆಟ್ಯಾಲಿಕ್,
- ಅಲಬಾಸ್ಟರ್ ಸಿಲ್ವರ್ ಮೆಟ್ಯಾಲಿಕ್,
- ಟಫೆಟಾ ವೈಟ್

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಬೆಂಗಳೂರು)
ಡೀಸೆಲ್

ಅತಿ ನೂತನ ಹೋಂಡಾ ಬಿಆರ್-ವಿ ಪೂರ್ಣರೂಪ ಬೋಲ್ಡ್ ರನ್ಎಬೌಟ್ ವೆಹಿಕಲ್ (Bold Runabout Vehicle) ಎಂದಾಗಿದೆ. ಇದನ್ನು ಸಂಕ್ಷಿಪ್ತವಾಗಿ ಬಿಆರ್-ವಿ ಎಂದು ಉಚ್ಚರಿಸಲಾಗುತ್ತಿದೆ.

ನೂತನ ಹೋಂಡಾ ಬಿಆರ್ ವಿಯಲ್ಲಿರುವ 1.5 ಲೀಟರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ 145 ಎನ್ ಎಂ ತಿರುಗುಬಲದಲ್ಲಿ (4600 ಆರ್ ಪಿಎಂ) 119 ಅಶ್ವಶಕ್ತಿಯನ್ನು (6600 ಆರ್ ಪಿಎಂ) ಉತ್ಪಾದಿಸಲಿದೆ.

ಅದೇ ರೀತಿ 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ 200 ಎನ್ ಎಂ ತಿರುಗುಬಲದಲ್ಲಿ (1750 ಆರ್ ಪಿಎಂ) 100 ಅಶ್ವಶಕ್ತಿಯನ್ನು (3600 ಆರ್ ಪಿಎಂ) ಉತ್ಪಾದಿಸಲಿದೆ.

ಪೆಟ್ರೋಲ್ ಆವೃತ್ತಿಯು ಆರು ಸ್ಪೀಡ್ ಮ್ಯಾನುವಲ್ ಜೊತೆಗೆ ಫಸ್ಟ್ ಇನ್ ಕ್ಲಾಸ್ ಸಿವಿಟಿ ಗೇರ್ (Continuously Variable Transmission) ಬಾಕ್ಸ್ ಆಯ್ಕೆಯನ್ನು ಕೊಡಲಾಗುತ್ತಿದೆ. ಅದೇ ಹೊತ್ತಿಗೆ ಅರ್ಥ್ ಡ್ರೀಮ್ ತಂತ್ರಜ್ಞಾನ ಶ್ರೇಣಿಯ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಬಳಕೆಯಾಗಲಿದೆ.

ಸುರಕ್ಷತೆಗೂ ಗರಿಷ್ಠ ಆದ್ಯತೆ ಕೊಡಲಾಗಿದ್ದು, ಎಲ್ಲ ವೆರಿಯಂಟ್ ಗಳಲ್ಲೂ ಡ್ಯುಯಲ್ ಎಸ್ ಆರ್ ಎಸ್ ಏರ್ ಬ್ಯಾಗ್ ಸ್ಟ್ಯಾಂಡರ್ಡ್ ಆಗಿ ಕೊಡಲಾಗಿದೆ. ಇದರ ಜೊತೆಗೆ ಅನೇಕ ಆಕ್ಟಿವ್ ಮತ್ತು ಪ್ಯಾಸಿವ್ ಭದ್ರತಾ ವ್ಯವಸ್ಥೆಗಳನ್ನು ಒಳಗೊಂಡಿರಲಿದೆ.

ಅಷ್ಟೇ ಯಾಕೆ ಇದೇ ಮೊದಲ ಬಾರಿಗೆ ಈ ಸೆಗ್ಮೆಂಟ್ ನಲ್ಲಿ ಆಟೋಮ್ಯಾಟಿಕ್ ಸಿವಿಟಿ ವೆರಿಯಂಟ್ ನಲ್ಲಿ ಕ್ರೀಡಾ ಕಾರಿನಿಂದ ಸ್ಪೂರ್ತಿ ಪಡೆದ ಪೆಡಲ್ ಶಿಫ್ಟ್ (paddle shift) ವ್ಯವಸ್ಥೆಯನ್ನು ಕೊಡಲಾಗುತ್ತಿದೆ. ಇದು ಚಾಲಕರಿಗೆ ಮ್ಯಾನುವಲ್ ಕಾರು ಚಾಲನೆ ಮಾಡಿದಷ್ಟೇ ಖುಷಿ ಕೊಡಲಿದೆ.

ಮೈಲೇಜ್
ಪೆಟ್ರೋಲ್: 15.4 ಕೀ.ಮೀ.
ಡೀಸೆಲ್: 21.9 ಕೀ.ಮೀ.

ತಂತ್ರಜ್ಞಾನ
ಪುಶ್ ಬಟನ್ ಸ್ಟ್ಯಾರ್ಟ್ ಜೊತೆ ಸ್ಮಾರ್ಟ್ ಎಂಟ್ರಿ, ಇಂಟೇಗ್ರೇಟಡ್ ಬ್ಲೂಟೂತ್ ಆಡಿಯೋ ಸಿಸ್ಟಂ ಜೊತೆ ಹ್ಯಾಂಡ್ಸ್ ಫ್ರಿ ಟೆಲಿಫೋನ್ (ಎಚ್‌ಎಫ್ ಟಿ), ಆಡಿಯೋಗಾಗಿ ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್, ಆಟೋಮ್ಯಾಟಿಕ್ ಎಸಿ, ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಡೆಯ ರಿಯರ್ ವ್ಯೂ ಮಿರರ್ ಮುಂತಾದ ವೈಶಿಷ್ಟ್ಯಗಳಿರಲಿದೆ.

ಆಯಾಮ (ಎಂಎಂ)
ಉದ್ದ: 4456
ಅಗಲ: 1735
ಎತ್ತರ: 1666
ಚಕ್ರಾಂತರ: 2662



Click it and Unblock the Notifications








