ಕ್ರೆಟಾ ಪ್ರತಿಸ್ಪರ್ಧಿ ಹೋಂಡಾ ಬಿಆರ್‌ವಿ ಬಿಡುಗಡೆಗೆ ದಿನಗಣನೆ

By Nagaraja

ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ಅತಿ ನೂತನ ಬಿಆರ್‌ವಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಮುಂದಿನ ತಿಂಗಳಾರಂಭದಲ್ಲಿ ಬಿಡುಗಡೆ ಮಾಡಲಿದೆ.

ಹೋಂಡಾ ಬಿಆರ್-ವಿ; ಬಿಡುಗಡೆಗೂ ಮುನ್ನ ತಿಳಿದುಕೊಳ್ಳಬೇಕಾದ ವಿಷಯಗಳು

ಬಲ್ಲ ಮೂಲಗಳ ಪ್ರಕಾರ ನೂತನ ಹೋಂಡಾ ಬಿಆರ್‌ವಿ ಮೇ 05ರಂದು ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಲಿದೆ. ಈ ಏಳು ಸೀಟಿನ ಕಾರು 2016 ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಪ್ರದರ್ಶನ ಕಂಡಿತ್ತು.

ತಳಹದಿ

ತಳಹದಿ

ಬ್ರಿಯೊ ಹ್ಯಾಚ್ ಬ್ಯಾಕ್, ಅಮೇಜ್ ಕಾಂಪಾಕ್ಟ್ ಸೆಡಾನ್ ಮತ್ತು ಮೊಬಿಲಿಯೊ ಎಂಪಿವಿ ತಳಹದಿಯಲ್ಲೇ ನಿರ್ಮಾಣವಾಗಲಿರುವ ನೂತನ ಹೋಂಡಾ ಬಿಆರ್‌-ವಿ, ಮೊಬಿಲಿಯೊಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ.

ಎಂಜಿನ್

ಎಂಜಿನ್

ಮೊಬಿಲಿಯೊದಲ್ಲಿರುವುದಕ್ಕೆ ಸಮಾನವಾದ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಬಳಕೆಯಾಗಲಿದ್ದು, ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇರಲಿದೆ. ಇದಲ್ಲದೆ ಪೆಟ್ರೋಲ್ ಆವೃತ್ತಿಯಲ್ಲಿ ಸಿವಿಟಿ ಆಯ್ಕೆಯೂ ಇರಲಿದೆ.

ಹೊರಮೈ

ಹೊರಮೈ

ಕ್ರೋಮ್ ಗ್ರಿಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್, ದೊಡ್ಡದಾದ ಏರ್ ಡ್ಯಾಮ್, 16 ಇಂಚುಗಳ ಅಲಾಯ್ ವೀಲ್, ಹೈ ರೂಫ್ ರೈಲ್, ಟೈಲ್ ಲ್ಯಾಂಪ್, ಸ್ಕಿಡ್ ಗಾರ್ಡ್ ಇತ್ಯಾದಿ ಸೌಲಭ್ಯಗಳು ಕ್ರೀಡಾತ್ಮಕ ವಿನ್ಯಾಸ ಪ್ರದಾನ ಮಾಡಲಿದೆ.

ಒಳಮೈ

ಒಳಮೈ

ಕಾರಿನೊಳಗೆ 2 ಡಿನ್ ಮಾಹಿತಿ ಮನರಂಜನಾ ವ್ಯವಸ್ಥೆ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಮತ್ತು ಎರಡನೇ ಸಾಲಿನಲ್ಲಿ 60:40 ವಿಭಜಿತ ಸೀಟುಗಳಿರಲಿದೆ.

ನಿರೀಕ್ಷಿತ ಬೆಲೆ

ನಿರೀಕ್ಷಿತ ಬೆಲೆ

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಹೋಂಡಾ ಬಿಆರ್ ವಿ ಎಂಟು ಲಕ್ಷ ರು.ಗಳಿಂದ 11.5 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಪ್ರತಿಸ್ಪರ್ಧಿ

ಪ್ರತಿಸ್ಪರ್ಧಿ

ಪ್ರಮುಖವಾಗಿಯೂ ಭಾರತದ ವರ್ಷದ ಕಾರು ಪ್ರಶಸ್ತಿಗೆ ಭಾಜನವಾಗಿರುವ ಹ್ಯುಂಡೈ ಕ್ರೆಟಾ ಜೊತೆಗೆ ನೂತನ ರೆನೊ ಡಸ್ಟರ್, ಮಾರುತಿ ಎಸ್ ಕ್ರಾಸ್ ಮಾದರಿಗಳಿಗೆ ಹೋಂಡಾ ಬಿಆರ್ ವಿ ಪೈಪೋಟಿಯನ್ನು ಒಡ್ಡಲಿದೆ.

Most Read Articles

Kannada
Read more on ಹೋಂಡಾ
English summary
Honda BR-V Could Launch On 5th May
Story first published: Friday, April 15, 2016, 14:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X