ಹೊಸ ಹೊಸ ವೈಶಿಷ್ಟ್ಯಗಳೊಂದಿಗೆ ಬರಲಿದೆ ಹೋಂಡಾ ಸಿಟಿ
ದೇಶದ ಮಧ್ಯಮ ಗಾತ್ರದ ಸೆಡಾನ್ ಕಾರುಗಳ ಪೈಕಿ ಸದಾ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಹೋಂಡಾ ಸಿಟಿ 2016ನೇ ಸಾಲಿನಲ್ಲಿ ಹೊಸ ಸ್ವರೂಪವನ್ನು ಪಡೆದುಕೊಳ್ಳಲಿದೆ.
ಪ್ರತಿಸ್ಪರ್ಧಿಗಳಿಂದ ಎದುರಾಗುತ್ತಿರುವ ನಿಕಟ ಸವಾಲುಗಳಿಂದ ಎಚ್ಚೆತ್ತುಕೊಂಡಿರುವ ಹೋಂಡಾ ತನ್ನ ಜನಪ್ರಿಯ ಸೆಡಾನ್ ಕಾರಿಗೆ ಹೆಚ್ಚಿನ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿದೆ.

ಗ್ರಾಹಕರ ಬೇಡಿಕೆಗಳನ್ನು ಗಮನಕ್ಕೆ ತೆಗೆದುಕೊಂಡು ನೂತನ ಹೋಂಡಾ ಸಿಟಿ ಆಗಮನವಾಗಲಿದೆ. ಪ್ರಸ್ತುತ ಕೆಲವೊಂದು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಳ್ಳಲಿದ್ದು, ಸಂಪೂರ್ಣ ವೈಶಿಷ್ಟ್ಯಗಳೊಂದಿಗೆ 2017ನೇ ಸಾಲಿನಲ್ಲಿ ಬಿಡುಗಡೆಯಾಗಲಿದೆ.
ಹಿಂದಿನ ಮಾದರಿಗೆ ಹೋಲಿಸಿದಾಗ ನೂತನ ಸಿಟಿ ಕಾರು ಹೆಚ್ಚು ಪ್ರೀಮಿಯಂ ಲುಕ್ ಪಡೆಯಲಿದೆ. ಇದು ಪ್ರಮುಖವಾಗಿಯೂ ಯುವ ಗ್ರಾಹಕರನ್ನು ಹೆಚ್ಚೆಚ್ಚು ಆಕರ್ಷಿಸಲಿದೆ.
ಹೊಸ ಹೆಡ್ ಲೈಟ್, ಲೈಟ್ ಲೈಟ್ ಜೊತೆಗೆ ಎಲ್ ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್ ಇರಲಿದೆ. ಇದು 1.5 ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳನ್ನು ಪಡೆದುಕೊಳ್ಳಲಿದೆ.


Click it and Unblock the Notifications








