ಹೋಂಡಾ ಬಿಆರ್‌ವಿಗೆ ಹಾದಿ ಬಿಟ್ಟು ಕೊಡಲಿರುವ ಮೊಬಿಲಿಯೊ

By Nagaraja

ಕಳೆಗುಂದಿರುವ ಮಾರಾಟದ ಹಿನ್ನೆಲೆಯಲ್ಲಿ ಜಪಾನ್ ಮೂಲದ ವಾಹನ ಸಂಸ್ಥೆ ಹೋಂಡಾ, ತನ್ನ ಜನಪ್ರಿಯ ಮೊಬಿಲಿಯೊ ಬಹು ಬಳಕೆಯ ವಾಹನದ (ಎಂಪಿವಿ) ನಿರ್ಮಾಣವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಇರಾದೆಯಲ್ಲಿದೆ.

Also Read: ಹೊಸ ಹೋಂಡಾ ಅಮೇಜ್ ಕಾರು ಭರ್ಜರಿ ಬಿಡುಗಡೆ

2014ನೇ ಮಧ್ಯಂತರ ಸಾಲಿನಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿರುವ ಹೋಂಡಾ ಮೊಬಿಲಿಯೊ ಪ್ರಾರಂಭದಲ್ಲಿ ಅತಿ ಹೆಚ್ಚಿನ ಮಾರಾಟವನ್ನು ಗಿಟ್ಟಿಸಿಕೊಂಡಿತ್ತು. ಆದರೆ ಬರ ಬರುತ್ತಾ ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯವನ್ನು ಕಳೆದುಕೊಂಡಿತ್ತು.

 ಮಾರಾಟ ಕುಸಿತ

ಮಾರಾಟ ಕುಸಿತ

ವಾಹನ ವಲಯದಿಂದ ಬಂದಿರುವ ಮಾಹಿತಿಗಳ ಪ್ರಕಾರ ಹೋಂಡಾ ಮೊಬಿಲಿಯೊ ಎಂಪಿವಿ ಕಾರಿನ ಮಾರಾಟದಲ್ಲಿ ಕಾಲ ಕ್ರಮೇಣ ಕುಸಿತವುಂಟಾಗಿದೆ.

ಬಿಆರ್‌ವಿಗೆ ಹಾದಿ

ಬಿಆರ್‌ವಿಗೆ ಹಾದಿ

ಇಲ್ಲಿ ಸಮಾನ ಬೆಲೆಗಳಲ್ಲಿ ಬಿಡುಗಡೆಯಾಗಲಿರುವ ನೂತನ ಬಿಆರ್ ವಿ ಕಾಂಪಾಕ್ಟ್ ಎಸ್‌ಯುವಿ ಕಾರಿಗೆ ಹಾದಿ ಸುಗಮಗೊಳಿಸುವ ಇರಾದೆಯೂ ಇದೆ. ಈ ನಿಟ್ಟಿನಲ್ಲಿ ಮೊಬಿಲಿಯೊ ಬದಿಗೆ ಸರಿಯಲಿದೆ.

ಮಾರಾಟ ಅಂಕಿಅಂಶ

ಮಾರಾಟ ಅಂಕಿಅಂಶ

2014 ಜುಲೈ ತಿಂಗಳಲ್ಲಿ ಬಿಡುಗಡೆಯಾಗಿರುವ ಹೋಂಡಾ ಮೊಬಿಲಿಯೊ ಆರಂಭದಲ್ಲಿ 3,500ರಷ್ಟು ಮಾರಾಟ ಗಿಟ್ಟಿಸಿಕೊಂಡಿದ್ದರೆ ಪ್ರಸಕ್ತ ವರ್ಷಾರಂಭದಲ್ಲಿ 441 ಹಾಗೂ ಫೆಬ್ರವರಿ ತಿಂಗಳಲ್ಲಿ ಬರಿ 226 ಯುನಿಟ್ ಗಳಿಗಷ್ಟೇ ಸೀಮಿತಗೊಂಡಿತ್ತು.

ಎರ್ಟಿಗಾ ಕಮಾಲ್

ಎರ್ಟಿಗಾ ಕಮಾಲ್

ಇನ್ನೊಂದೆಡೆ ಹೋಂಡಾ ಅತಿ ದೊಡ್ಡ ಎದುರಾಳಿ ಮಾರುತಿ ಎರ್ಟಿಗಾ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವುದು ಮೊಬಿಲಿಯೊ ಹಿನ್ನೆಡೆಗೆ ಕಾರಣವಾಗಿದೆ.

 ಬೆಲೆ ದುಬಾರಿ

ಬೆಲೆ ದುಬಾರಿ

ಅತ್ಯುತ್ತಮ ಸ್ಥಳಾವಕಾಶ, ಎಂಜಿನ್ ಆಯ್ಕೆ, ಇಂಧನ ಕ್ಷಮತೆ ಮತ್ತು ನಿರ್ಮಾಣ ಗುಣಮಟ್ಟತೆಯನ್ನು ಕಾಯ್ದುಕೊಂಡರೂ ಬೆಲೆ ದುಬಾರಿಯಾಗಿದೆಯೆಂಬ ಕಪ್ಪು ಚುಕ್ಕೆ ಮೊಬಿಲಿಯೊಗೆ ಅಂಟಿಕೊಂಡಿತ್ತು.

ಹೋಂಡಾ ಬಿಆರ್‌ವಿಗೆ ಹಾದಿ ಬಿಟ್ಟು ಕೊಡಲಿರುವ ಮೊಬಿಲಿಯೊ

ಒಟ್ಟಿನಲ್ಲಿ ಎಸ್‌ಯುವಿ ವಿಭಾಗದಲ್ಲಿ ಹ್ಯುಂಡೈ ಕ್ರೆಟಾ, ರೆನೊ ಡಸ್ಟರ್ ಹಾಗೂ ಮಾರುತಿ ವಿಟಾರಾ ಬ್ರಿಝಾ ತನ್ನ ಸಾನಿಧ್ಯವನ್ನು ಭದ್ರಪಡಿಸುತ್ತಿರುವಂತೆಯೇ ಹೋಂಡಾ ಬಿಆರ್ ವಿ ಪ್ರವೇಶ ಅತ್ಯಗತ್ಯವೆನಿಸಿದೆ. ಈ ನಿಟ್ಟಿನಲ್ಲಿ ಮಾರಾಟ ತಂತ್ರಗಾರಿಕೆಯ ಭಾಗವಾಗಿ ಮೊಬಿಲಿಯೊ ನಿರ್ಮಾಣವನ್ನು ಸ್ಥಗಿತಗೊಳಿಸುವುದು ಎಲ್ಲ ಹಂತದಲ್ಲೂ ನಿಚ್ಚಳವೆನಿಸಿದೆ.

ಇವನ್ನೂ ಓದಿ

ಅತಿ ಶೀಘ್ರದಲ್ಲೇ ಹೋಂಡಾ ಬಿಆರ್‌ವಿ ಬಿಡುಗಡೆ

ಮಾರುತಿಗೆ ಟಕ್ಕರ್; ದೆಹಲಿಯಲ್ಲಿ ಅರಳಿದ ಹೋಂಡಾ ಬಿಆರ್‌ವಿ

Article Published On: Tuesday, March 22, 2016, 12:14 [IST]
English summary
Honda Likely To Suspend Production Of Mobilio
Read more on ಹೋಂಡಾ honda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+