ಭಾರತಕ್ಕೆ ವಿಶಿಷ್ಟ ಕೊಡುಗೆ ನೀಡಿತೇ ಹೋಂಡಾ ?
ನಿಧಾನವಾಗಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿರುವ ಜಪಾನ್ ಮೂಲದ ದೈತ್ಯ ವಾಹನ ಸಂಸ್ಥೆ ಹೋಂಡಾ ಭಾರತಕ್ಕೆ ವಿಶೇಷವಾದ ಕೊಡುಗೆಯೊಂದನ್ನು ನೀಡುವ ಇರಾದೆಯಲ್ಲಿದೆ. ಎಲ್ಲವೂ ಅಂದುಕೊಂಡಂತೆ ನಡೆದ್ದಲ್ಲಿ ನಿಕಟ ಭವಿಷ್ಯದಲ್ಲೇ ಹೋಂಡಾ ಏಳು ಸೀಟುಗಳ ಎಚ್ ಆರ್-ವಿ ಕ್ರೀಡಾ ಬಳಕೆಯ ವಾಹನವು ಭಾರತಕ್ಕೆ ಕಾಲಿಡಲಿದೆ.
ಪಿಲಿಫೈನ್ಸ್ ಅಂತರಾಷ್ಟ್ರೀಯ ಮೋಟಾರು ಶೋದಲ್ಲಿ ಪಾದಾರ್ಪಣೆಗೈಯಲಿರುವ ಹೋಂಡಾ ಎಚ್ ಆರ್-ವಿ ಕಾರನ್ನು ಸಂಸ್ಥೆಯ ಥಾಯ್ಲೆಂಡ್ ಘಟಕದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ಎಚ್ ಆರ್- ವಿ ಮುಖಾಂತರ ಭಾರತ ಸೇರಿದಂತೆ ಏಷ್ಯಾ ಮಾರುಕಟ್ಟೆಯನ್ನು ಹೋಂಡಾ ಗುರಿ ಮಾಡುತ್ತಿದ್ದು, ಈಗ ಮಾರುಕಟ್ಟೆಯಲ್ಲಿರುವ ಬಿಆರ್-ವಿಗಿಂತಲೂ ಸಣ್ಣದಾಗಿರಲಿದೆ.

ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ಮೂಲಕ ಹೋಂಡಾ ಎಚ್ ಆರ್ ವಿ ಮಿನಿ ಎಸ್ ಯುವಿ ಭಾರತದಲ್ಲಿ ಗರಿಷ್ಟ ಮಾರಾಟವನ್ನು ಗುರಿ ಮಾಡಲಿದೆ. ಇನ್ನು ಗರಿಷ್ಠ ಸುರಕ್ಷತೆಯನ್ನು ಹೊಂದಿರಲಿದೆ.

ಸ್ಟೈಲಿಷ್ ವಿನ್ಯಾಸ, ಗಮನಾರ್ಹ ವೈಶಿಷ್ಟ್ಯಗಳು ಹಾಗೂ ಎಂಜಿನ್ ನಿರ್ವಹಣೆ ಹೀಗೆ ಎಲ್ಲ ಹಂತದಲ್ಲೂ ಹೋಂಡಾ ಮೇಲುಗೈಯನ್ನು ಸಾಧಿಸಲಿದೆ. ಭಾರತದಲ್ಲಿ ಎಸ್ ಯುವಿ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿರುವುದರಿಂದ ಎಚ್ ಆರ್ ವಿ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಸದ್ಯ ಭಾರತದ ಮಾರುಕಟ್ಟೆಯಲ್ಲಿ ಹೋಂಡಾ ಬಿಆರ್-ವಿ ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾದರೆ ನೂತನ ಎಚ್ ಆರ್ ವಿ ಪ್ರಮುಖವಾಗಿಯೂ ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಫೋರ್ಡ್ ಇಕೊಸ್ಪೋರ್ಟ್ ಮತ್ತು ಮಹೀಂದ್ರ ಟಿಯುವಿ300 ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಒಟ್ಟಿನಲ್ಲಿ ಬೆಳೆದು ಬರುತ್ತಿರುವ ಭಾರತ ಮಾರುಕಟ್ಟೆಯಲ್ಲಿ ನಿರಂತರ ಅಂತರಾಳದಲ್ಲಿ ಹೊಸ ಹೊಸ ಮಾದರಿಗಳ ಪ್ರವೇಶವಾಗುತ್ತಿದ್ದು, ಅತ್ಯುತ್ತಮ ಬೆಳವಣಿಗೆಯನ್ನು ಸೂಚಿಸುತ್ತದೆ.
ವಿ.ಸೂ: ಮೇಲಿನ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳ ಬಳಕೆ


Click it and Unblock the Notifications








