ಹ್ಯುಂಡೈ ಕ್ರೆಟಾ ವಾರ್ಷಿಕ ಆವೃತ್ತಿ ಬೆಲೆ ಎಷ್ಟು ಗೊತ್ತಾ?

Written By:

ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ಹ್ಯುಂಡೈ ಕ್ರೆಟಾ ವಾರ್ಷಿಕ ಆವೃತ್ತಿಯು ಅತಿ ಶೀಘ್ರದಲ್ಲೇ ಮಾರುಕಟ್ಟೆಯನ್ನು ತಲುಪಲಿದೆ. ಈ ಸಂಬಂಧ ಬೆಲೆ ವೈಶಿಷ್ಟ್ಯಗಳಿಗೆ ಸಂಬಂಧಪಟ್ಟಂತೆ ಎಕ್ಸ್ ಕ್ಲೂಸಿವ್ ವಿವರಗಳು ಡೀಲರ್ ವೊಂದರಲ್ಲಿ ಪತ್ತೆಯಾಗಿದೆ.

ಕಳೆದ ತಿಂಗಳಾರಂಭದಲ್ಲಷ್ಟೇ ನೂತನ ಕ್ರೆಟಾ ವಾರ್ಷಿಕ ವಿಶೇಷ ಆವೃತ್ತಿಯನ್ನು ಹ್ಯುಂಡೈ ಅನಾವರಣಗೊಳಿಸಿತ್ತು. ಇದೇ ಸಂದರ್ಭದಲ್ಲಿ ಜನಪ್ರಿಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರಿಗೆ ಕಾರು ಕೊಡುಗೆಯಾಗಿ ನೀಡುವ ಮೂಲಕ ಗೌರವಿಸಿತ್ತು.

ಬೆಲೆ

ಬೆಲೆ

ಹ್ಯುಂಡೈ ಕ್ರೆಟಾ ಎಸ್ ಎಕ್ಸ್ ಪ್ಲಸ್ ವಾರ್ಷಿಕ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳು ಅನುಕ್ರಮವಾಗಿ ಸೂರತ್ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 12.50 ಹಾಗೂ 14.06 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಸ್ವಲ್ಪ ದುಬಾರಿ

ಸ್ವಲ್ಪ ದುಬಾರಿ

ಅಂದರೆ ಕ್ರೆಟಾ ವಿಶೇಷ ಆವೃತ್ತಿಯು ಸ್ಟ್ಯಾಂಡರ್ಡ್ ಕ್ರೆಟಾ ಎಸ್ ಎಕ್ಸ್ ಪ್ಲಸ್ ಮಾದರಿಗಿಂತಲೂ ಸರಿ ಸುಮಾರು 39,000 ರು.ಗಳಷ್ಟು ದುಬಾರಿಯೆನಿಸಲಿದೆ.

ಹ್ಯುಂಡೈ ಕ್ರೆಟಾ ವಾರ್ಷಿಕ ಆವೃತ್ತಿ ಬೆಲೆ, ವೈಶಿಷ್ಟ್ಯಗಳು

ಎಂಜಿನ್ ತಾಂತ್ರಿಕತೆಯಲ್ಲಿ ಯಾವುದೇ ಬದಲಾವಣೆಗಳು ಕಂಡುಬರುವುದಿಲ್ಲ. ಇದು 1.6 ಲೀಟರ್ ಸಿಆರ್ ಡಿಐ ಡೀಸೆಲ್ ಮತ್ತು 1.6 ಲೀಟರ್ ವಿಟಿವಿಟಿ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಅಂತೆಯೇ ಆರು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ವಿಶೇಷತೆಗಳು

ವಿಶೇಷತೆಗಳು

ಕಾರಿನ ಹೊರಗಡೆಯಲ್ಲಿ ವಾರ್ಷಿಕ 1 ಎಡಿಷನ್ ಸ್ಟಿಕ್ಕರ್, ಬಾಡಿ ಗ್ರಾಫಿಕ್ಸ್, ಬ್ಲ್ಯಾಕ್ ರೂಫ್, ಕೆಂಪು ಮಿರರ್ ಕ್ಯಾಪ್, ಸಿ ಪಿಲ್ಲರ್, 17 ಇಂಚುಗಳ ಅಲಾಯ್ ವೀಲ್, ಸಿಲ್ವರ್ ಸ್ಕಿಡ್ ಪ್ಲೇಟ್ ಇತ್ಯಾದಿ ವೈಶಿಷ್ಟ್ಯಗಳು ಕಾಣಸಿಗಲಿದೆ.

ವಿಶೇಷತೆಗಳು

ವಿಶೇಷತೆಗಳು

ಕಾರಿನೊಳಗೆ ಬ್ಲ್ಯಾಕ್ ಥೀಮ್ ಡ್ಯಾಶ್ ಬೋರ್ಡ್ ಜೊತೆ ರೆಡ್ ಪಟ್ಟಿ, ಹೊಸತಾದ ಸೀಟು ಕವರ್, ಫ್ಲೋರ್ ಮ್ಯಾಟ್, ಡೋರ್ ಸಿಲ್, ಅಲ್ಯೂಮಿನಿಯಂ ಪೆಡಲ್, ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್ ಇತ್ಯಾದಿ ವಿಶಿಷ್ಟತೆಗಳು ಕಂಡುಬರಲಿದೆ.

ಹ್ಯುಂಡೈ ಕ್ರೆಟಾ ವಾರ್ಷಿಕ ಆವೃತ್ತಿ ಬೆಲೆ, ವೈಶಿಷ್ಟ್ಯಗಳು

ಅಂದ ಹಾಗೆ 'ಪೋಲರ್ ವೈಟ್' ಎಂಬ ಏಕಮಾತ್ರ ವಿಶಿಷ್ಟ ಬಣ್ಣದ ಆಯ್ಕೆಯಲ್ಲಿ ಮಾತ್ರ ಹ್ಯುಂಡೈ ಕ್ರೆಟಾ ವಿಶೇಷ ಆವೃತ್ತಿಯು ಲಭ್ಯವಾಗಲಿದೆ.

ಹ್ಯುಂಡೈ ಕ್ರೆಟಾ ವಾರ್ಷಿಕ ಆವೃತ್ತಿ ಬೆಲೆ, ವೈಶಿಷ್ಟ್ಯಗಳು

ಕಳೆದೊಂದು ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಹ್ಯುಂಡೈ ಕ್ರೆಟಾ, ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಗರಿಷ್ಠ ಬೇಡಿಕೆಯನ್ನು ಕಾಪಾಡಿಕೊಂಡಿದೆ.

English summary
Hyundai Creta '1st Anniversary Edition' Price Revealed
Story first published: Wednesday, August 3, 2016, 10:07 [IST]
Please Wait while comments are loading...

Latest Photos