ಜಾದೂ ಮಾಡಿದ ಕ್ರೆಟಾ; 8 ತಿಂಗಳಲ್ಲೇ 1 ಲಕ್ಷ ಬುಕ್ಕಿಂಗ್ಸ್

By Nagaraja

ಭಾರತದ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ವಿಭಾಗದಲ್ಲಿ ಜಾದೂ ಮಾಡಿರುವ ಹ್ಯುಂಡೈ ಕ್ರೆಟಾ ಬಿಡುಗಡೆಯಾದ ಎಂಟು ತಿಂಗಳೊಳಗೆ ಒಂದು ಲಕ್ಷಕ್ಕೂ ಹೆಚ್ಚು ಮುಂಗಡ ಬುಕ್ಕಿಂಗ್ಸ್ ದಾಖಲಿಸಿದೆ.

ಈ ನಡುವೆ ಭಾರಿ ಪ್ರಮಾಣದಲ್ಲಿ ದಾಖಲಾಗುತ್ತಿರುವ ಬುಕ್ಕಿಂಗ್ ಪ್ರಕ್ರಿಯೆಯಿಂದಾಗಿ ಬೇಡಿಕೆಯನ್ನು ಈಡೇರಿಸಲು ಹ್ಯುಂಡೈ ಕ್ರೆಟಾ ನಿರ್ಮಾಣ ಸಾಮರ್ಥ್ಯವನ್ನು ಶೇಕಡಾ 30ರಷ್ಟು ಅಂದರೆ ಪ್ರತಿ ತಿಂಗಳಲ್ಲಿ 13,000 ಯುನಿಟ್ ಗಳ ವರೆಗೆ ಹೆಚ್ಚಿಸಲು ನಿರ್ಧರಿಸಿದೆ.

ಜಾದೂ ಮಾಡಿದ ಕ್ರೆಟಾ; 8 ತಿಂಗಳಲ್ಲೇ 1 ಲಕ್ಷ ಬುಕ್ಕಿಂಗ್ಸ್

ಕಳೆದ ವರ್ಷ ಬಿಡುಗಡೆಯಾದ ಹ್ಯುಂಡೈ ಕ್ರೆಟಾ ಕಾರನ್ನು ಖರೀದಿಸಲು ಐದು ಲಕ್ಷಕ್ಕೂ ಹೆಚ್ಚು ಮಂದಿ ಉತ್ಸುಕತೆ ತೋರಿದ್ದಾರೆ. ಅಲ್ಲದೆ ಬುಕ್ಕಿಂಗ್ ಸಂಖ್ಯೆ ಒಂದು ಲಕ್ಷ ದಾಟಿದ್ದು, 56,000 ಯುನಿಟ್ ಗಳನ್ನು ಗ್ರಾಹಕರಿಗೆ ಹಂಚಿಕೊಳ್ಳಲಾಗಿದೆ.

ಜಾದೂ ಮಾಡಿದ ಕ್ರೆಟಾ; 8 ತಿಂಗಳಲ್ಲೇ 1 ಲಕ್ಷ ಬುಕ್ಕಿಂಗ್ಸ್

ಹ್ಯುಂಡೈ ಯೋಜನೆಯಂತೆ ಪ್ರತಿ ತಿಂಗಳು 10,000 ಯುನಿಟ್ ಗಳನ್ನು ದೇಶೀಯ ಮಾರುಕಟ್ಟೆಗೂ ಹಾಗೂ 3,000 ಯುನಿಟ್ ಗಳನ್ನು ರಫ್ತು ಮಾಡಲಾಗುವುದು. ಜಾಗತಿಕ ಮಾರುಕಟ್ಟೆಯಿಂದ 28,000 ಯುನಿಟ್ ಗಿಂತಲೂ ಹೆಚ್ಚು ಬುಕ್ಕಿಂಗ್ಸ್ ದಾಖಲಾಗಿದೆ.

ಜಾದೂ ಮಾಡಿದ ಕ್ರೆಟಾ; 8 ತಿಂಗಳಲ್ಲೇ 1 ಲಕ್ಷ ಬುಕ್ಕಿಂಗ್ಸ್

ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಕ್ರೆಟಾ ಮೂರು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. 1.6 ಲೀಟರ್ ಪೆಟ್ರೋಲ್ ಗಮ್ಮಾ ಡ್ಯುಯಲ್ ವಿಟಿವಿಟಿ, 1.4 ಲೀಟರ್ ಯು2 ಸಿಆರ್ ಡಿಐ ಮತ್ತು 1.6 ಲೀಟರ್ ಯು2 ಸಿಆರ್ ಡಿಐ ಡೀಸೆಲ್ ಎಂಜಿನ್ ಜೊತೆಗೆ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಹೊಂದಿರುತ್ತದೆ.

ವಿನ್ಯಾಸ ಸ್ಪೂರ್ತಿ

ವಿನ್ಯಾಸ ಸ್ಪೂರ್ತಿ

ಹ್ಯುಂಡೈ ಫ್ಲೂಯಿಡಿಕ್ 2.0 ಡಿಸೈನ್ ತಂತ್ರಗಾರಿಕೆಯಿಂದ ಸ್ಪೂರ್ತಿ ಪಡೆದಿರುವ ಹ್ಯುಂಡೈ ಕ್ರೆಟಾ, ದೇಶದ ಅತ್ಯಂತ ಜನಪ್ರಿಯ ಐ20 ಹ್ಯಾಚ್ ಬ್ಯಾಕ್ ಕಾರಿನ ತಳಹದಿಯಲ್ಲಿ ನಿರ್ಮಾಣವಾಗಿದೆ.

ಆಯಾಮ

ಆಯಾಮ

4270 ಎಂಎಂ ಉದ್ದ, 1780 ಎಂಎಂ ಅಗಲ, 1630 ಎಂಎಂ ಎತ್ತರ ಹಾಗೂ 2590 ಎಂಎಂ ಚಕ್ರಾಂತರವನ್ನು ಹೊಂದಿರುವ ಹ್ಯುಂಡೈ ಕ್ರೆಟಾ, ರೆನೊ ಡಸ್ಟರ್ ಹಾಗೂ ನಿಸ್ಸಾನ್ ಟೆರನೊಗಿಂತಲೂ ಹೆಚ್ಚು ಸ್ಥಳಾವಕಾಶವನ್ನು ಪಡೆದುಕೊಂಡಿದೆ.

ಸುರಕ್ಷತೆ

ಸುರಕ್ಷತೆ

  • ಡ್ಯುಯಲ್ ಏರ್ ಬ್ಯಾಗ್,
  • ಬದಿ ಮತ್ತು ಕರ್ಟೈನ್ ಏರ್ ಬ್ಯಾಗ್,
  • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ (ಎಬಿಎಸ್),
  • ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ,
  • ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ (ಇಎಸ್‌ಸಿ),
  • ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ ಮೆಂಟ್ (ವಿಎಸ್ಎಂ),
  • ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ಕಂಟ್ರೋಲ್ (ಎಚ್ಎಸಿ)
  • ಮೈಲೇಜ್:

    ಮೈಲೇಜ್:

    ಕ್ರೆಟಾ ಪೆಟ್ರೋಲ್ 1.6: 15.29 km/l

    ಕ್ರೆಟಾ ಡೀಸೆಲ್ 1.4: 21.38 km/l

    ಕ್ರೆಟಾ ಡೀಸೆಲ್ 1.6 ಮ್ಯಾನುವಲ್: 19.67 km/l

    ಕ್ರೆಟಾ ಡೀಸೆಲ್ 1.6 ಆಟೋಮ್ಯಾಟಿಕ್: 17.01 km/l

    ವಿಶಿಷ್ಟತೆ, ಅನುಕೂಲತೆ

    ವಿಶಿಷ್ಟತೆ, ಅನುಕೂಲತೆ

    • ಎಫ್‌ಎಟಿಸಿ (FATC) ಜೊತೆ ಕ್ಲಸ್ಟರ್ ಐಯನೈಜರ್ (Cluster ionizer),
    • ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್,
    • ಹಿಂದುಗಡೆಯೂ ಎಸಿ ವೆಂಟ್ಸ್,
    • ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್,
    • ಆಡಿಯೋ ವಿಡಿಯೋ ನೇವಿಗೇಷನ್ ಸಿಸ್ಟಂ (ಎವಿಎನ್),
    • 5 ಇಂಚಿನ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ,
    • ಸೂಪರ್ ವಿಷನ್ ಕ್ಲಸ್ಟರ್,
    • ಸ್ಮಾರ್ಟ್ ಕೀ ಜೊತೆ ಪುಶ್ ಬಟನ್ ಸ್ಟ್ಯಾರ್ಟ್, 1
    • 7 ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್,
    • ಪ್ರೊಜೆಕ್ಟರ್ ಹೆಡ್ ಲ್ಯಾಂಪ್,
    • ಎಲ್‌ಇಡಿ ಸ್ಥಾನಿಕ ಲ್ಯಾಂಪ್,
    • ಲೆಥರ್ ಸೀಟು

Article Published On: Wednesday, March 16, 2016, 11:38 [IST]
English summary
Hyundai Creta Compact SUV Records Over 1 Lakh Bookings
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+