ಹ್ಯುಂಡೈ ಕ್ರೆಟಾ ಎಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಬಿಡುಗಡೆ

By Nagaraja

ದೇಶದ ರಸ್ತೆಗಳಲ್ಲಿ ಹ್ಯುಂಡೈ ಕ್ರೆಟಾ ಕ್ರೀಡಾ ಬಳಕೆಯ ವಾಹನದ ಸದ್ದು ಭಾರಿ ಜೋರಾಗಿ ನಡೆಯುತ್ತಿದೆ. ಇದನ್ನೇ ಅರಿತುಕೊಂಡಿರುವ ದಕ್ಷಿಣ ಕೊರಿಯಾ ಮೂಲದ ಸಂಸ್ಥೆಯು ಕ್ರೆಟಾ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯ ಮಗದೊಂದು ವೆರಿಯಂಟನ್ನು ಪರಿಚಯಿಸಿದೆ.

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ, ಕ್ರೆಟಾ ಎಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಬಿಡುಗಡೆ ಮಾಡಿದೆ. ಇದು ಟಾಪ್ ಎಂಡ್ ಎಸ್‌ಎಕ್ಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಗಿಂತಲೂ ಕೆಳದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ.

ಹ್ಯುಂಡೈ ಕ್ರೆಟಾ ಎಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಬಿಡುಗಡೆ

ನೂತನ ಹ್ಯುಂಡೈ ಕ್ರೆಟಾ ಎಸ್ ಪ್ಲಾಸ್ ಡೀಸೆಲ್ ಆಟೋಮ್ಯಾಟಿಕ್ ಕಾರು ನಮ್ಮ ಬೆಂಗಳೂರಿನಲ್ಲಿ ಎಕ್ಸ್ ಶೋ ರೂಂ ಬೆಲೆ 13.76 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ. ಅಂತೆಯೇ ದೆಹಲಿಯಲ್ಲಿ 13.56 ಲಕ್ಷ ರು.ಗಳ ಎಕ್ಸ್ ಶೋ ರೂಂ ಬೆಲೆ ನಿಗದಿಗೊಂಡಿದೆ.

ಹ್ಯುಂಡೈ ಕ್ರೆಟಾ ಎಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಬಿಡುಗಡೆ

ಇದರಲ್ಲಿರುವ 1.6 ಲೀಟರ್ ಫೋರ್ ಸಿಲಿಂಡರ್ ಎಂಜಿನ್ 256 ಎನ್ ಎಂ ತಿರುಗುಬಲದಲ್ಲಿ 126 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

ಹ್ಯುಂಡೈ ಕ್ರೆಟಾ ಎಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಬಿಡುಗಡೆ

ಟಾಪ್ ಎಂಡ್ ಎಸ್ ಎಕ್ಸ್ ಮಾದರಿಗೆ ಹೋಲಿಸಿದಾಗ ಇದರಲ್ಲಿ ಕ್ರೂಸ್ ಕಂಟ್ರೋಲ್, ಟಚ್ ಸ್ಕ್ರೀನ್ ಸಿಸ್ಟಂ, ಲೆಥರ್ ಸೀಟು ಮತ್ತು ವಾಯ್ಸ್ ನಿಯಂತ್ರಿತ ನೇವಿಗೇಷನ್ ಕಂಟ್ರೋಲ್ ವ್ಯವಸ್ಥೆಯ ಕೊರತೆಯಿರಲಿದೆ.

ಹ್ಯುಂಡೈ ಕ್ರೆಟಾ ಎಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಬಿಡುಗಡೆ

ಮಾರುಕಟ್ಟೆಯಲ್ಲಿ ಕ್ರೆಟಾ ಆಟೋಮ್ಯಾಟಿಕ್ ಆವೃತ್ತಿಗಾಗಿ ಎರಡು ತಿಂಗಳುಗಷ್ಟು ಹೆಚ್ಚು ಕಾಲ ಕಾಯಬೇಕಾಗಿದೆ. ಅಲ್ಲದೆ ಆಸಕ್ತ ಗ್ರಾಹಕರು ಹತ್ತಿರದ ಹ್ಯುಂಡೈ ಅಧಿಕೃತ ಡೀಲರುಗಳ ಬಳಿ ತೆರಳಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಹ್ಯುಂಡೈ ಕ್ರೆಟಾ ಎಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಬಿಡುಗಡೆ

ಕಾರಿನ ಭದ್ರತೆಯ ವಿಚಾರವನ್ನು ಗಮನಕ್ಕೆ ತೆಗೆದುಕೊಂಡಾಗ ಡ್ಯುಯಲ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್, ರಿಯರ್ ಪಾರ್ಕಿಂಗ್ ಸೆನ್ಸಾರ್ ಜೊತೆ ಕ್ಯಾಮೆರಾ ಇತ್ಯಾದಿ ವ್ಯವಸ್ಥೆಗಳಿರಲಿದೆ.

ಹ್ಯುಂಡೈ ಕ್ರೆಟಾ ಎಸ್ ಪ್ಲಸ್ ಡೀಸೆಲ್ ಆಟೋಮ್ಯಾಟಿಕ್ ಬಿಡುಗಡೆ

ಹ್ಯುಂಡೈ ಕ್ರೆಟಾ ಆಯೋಮ್ಯಾಟಿಕ್ ಆವೃತ್ತಿಯ ಪ್ರತಿಸ್ಪರ್ಧಿಯಾಗಿರುವ ರೆನೊ ಡಸ್ಟರ್ 110 ಅಶ್ವಶಕ್ತಿ ಎಎಂಟಿ ಆವೃತ್ತಿಯು ನವದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 13.13 ಲಕ್ಷ ರು.ಗಳಷ್ಟು ದುಬಾರಿಯೆನಿಸಿದೆ.

Article Published On: Monday, July 25, 2016, 9:51 [IST]
English summary
Hyundai Creta S+ Diesel Variant Now In AT; Priced At Rs. 13.56 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+