2016 ಹ್ಯುಂಡೈ ಎಲಂಟ್ರಾ ಭಾರತದಲ್ಲಿ ಭರ್ಜರಿ ಬಿಡುಗಡೆ

By Nagaraja

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಮೋಟಾರು ಇಂಡಿಯಾ ಸಂಸ್ಥೆಯು ಭಾರತದಲ್ಲಿ ಅತಿ ನೂತನ ಆರನೇ ತಲೆಮಾರಿನ 2016 ಎಲಂಟ್ರಾ ಸೆಡಾನ್ ಕಾರನ್ನು ಬಿಡುಗಡೆಗೊಳಿಸಿದೆ.

ಆರಂಭಿಕ ಬೆಲೆ ಮಾಹಿತಿ: 12.99 ಲಕ್ಷ ರು.

ಇದು 2016ನೇ ಸಾಲಿನಲ್ಲಿ ಹ್ಯುಂಡೈ ದೇಶದಲ್ಲಿ ಬಿಡುಗಡೆ ಮಾಡುತ್ತಿರುವ ಮೊದಲ ಕಾರಾಗಿದೆ. ಇದರ ಪ್ರಾರಂಭಿಕ ಪೆಟ್ರೋಲ್ ಆವೃತ್ತಿಯ ದೆಹಲಿ ಎಕ್ಸ್ ಶೋ ರೂಂ ಬೆಲೆಯು 12.99 ಲಕ್ಷ ರು.ಗಳಿಂದ ಆರಂಭವಾಗುತ್ತಿದ್ದು, ಟಾಪ್ ಎಂಡ್ ಡೀಸೆಲ್ ಆಟೋಮ್ಯಾಟಿಕ್ ಮಾದರಿಯು 19.19 ಲಕ್ಷ ರುಪಾಯಿಗಳಷ್ಟು ದುಬಾರಿಯೆನಿಸಲಿದೆ.

2016 ಹ್ಯುಂಡೈ ಎಲಂಟ್ರಾ


ವೆರಿಯಂಟ್ ಗಳು (ಪೆಟ್ರೋಲ್ ಹಾಗೂ ಡೀಸೆಲ್)
ಎಸ್, ಎಸ್ ಎಕ್ಸ್, ಎಸ್ ಎಕ್ಸ್ ಆಟೋಮ್ಯಾಟಿಕ್, ಎಸ್ ಎಕ್ಸ್ (ಐಚ್ಛಿಕ), ಎಸ್ ಎಕ್ಸ್ (ಐಚ್ಛಿಕ) ಆಟೋಮ್ಯಾಟಿಕ್.

ಪೆಟ್ರೋಲ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಎಸ್: 12.99 ಲಕ್ಷ ರು.
  • ಎಸ್ ಎಕ್ಸ್: 14.79 ಲಕ್ಷ ರು.
  • ಎಸ್ ಎಕ್ಸ್ ಆಟೋಮ್ಯಾಟಿಕ್: 15.89 ಲಕ್ಷ ರು.
  • ಎಸ್ ಎಕ್ಸ್ (ಐಚ್ಛಿಕ): 16.59 ಲಕ್ಷ ರು.
  • ಎಸ್ ಎಕ್ಸ್ (ಐಚ್ಛಿಕ) ಆಟೋಮ್ಯಾಟಿಕ್: 17.99 ಲಕ್ಷ ರು.

ಡೀಸೆಲ್ ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

  • ಎಸ್: 14.79 ಲಕ್ಷ ರು.
  • ಎಸ್ ಎಕ್ಸ್: 16.39 ಲಕ್ಷ ರು.
  • ಎಸ್ ಎಕ್ಸ್ (ಐಚ್ಛಿಕ): 17.69 ಲಕ್ಷ ರು.
  • ಎಸ್ ಎಕ್ಸ್ (ಐಚ್ಛಿಕ) ಆಟೋಮ್ಯಾಟಿಕ್: 19.19 ಲಕ್ಷ ರು.

ಹೊರಮೈ
ಹಿಂದಿನ ಮಾದರಿಗೆ ಹೋಲಿಸಿದಾಗ ಆಲ್ ನ್ಯೂ ಎಲಂಟ್ರಾ, ಸಂಪೂರ್ಣ ಬದಲಾವಣೆಗಳನ್ನು ಪಡೆದಿದೆ. ಇದಕ್ಕಾಗಿ ಹ್ಯುಂಡೈ ಸಂಸ್ಥೆಯು ಅನುಸರಿಸಿರುವ ನೂತನ ಫ್ಲೂಯಿಡಿಕ್ ಸ್ಕಲ್ಪ್ಚರ್ 2.0 ವಿನ್ಯಾಸ ತಂತ್ರಗಾರಿಕೆಗೆ ಧನ್ಯವಾದ ಹೇಳಬೇಕು. ಮುಂದುಗಡೆ ಹೆಕ್ಸಗನಲ್ ಜೊತೆ ಸಮತಲವಾದ ಗ್ರಿಲ್, ಎಲ್ ಇಡಿ ಪೊಸಿಷನ್ ಲೈಟ್ ಕಾರಿಗೆ ವಿಶಿಷ್ಟತೆ ಪ್ರದಾನ ಮಾಡುತ್ತದೆ. ಬದಿಯಲ್ಲಿ ಹಾದು ಹೋಗುವ ಗರಿ ಗರಿಯಾದ ರೇಖೆಯು ಮತ್ತಷ್ಟು ಆಕರ್ಷಣೆ ಕಾಪಾಡಿಕೊಂಡಿದೆ. ಹೊಸತಾದ ಅಲಾಯ್ ಚಕ್ರಗಳು ಮತ್ತು ಟೈಲ್ ಲ್ಯಾಂಪ್ ಗಳನ್ನು ಕಾಣಬಹುದಾಗಿದೆ.

ಹೊಸ ತಳಹದಿಯಲ್ಲಿ ನಿರ್ಮಾಣವಾಗಿರುವ ಆರನೇ ತಲೆಮಾರಿನ ಹ್ಯುಂಡೈ ಎಲಂಟ್ರಾ, ಹಿಂದಿನ ಮಾದರಿಗಿಂತಲೂ ಹೆಚ್ಚು ಉದ್ದಗಲವನ್ನು ಕಾಪಾಡಿಕೊಂಡಿದೆ. ಅಂದರೆ ಹಿಂದಿನ ಮಾದರಿಗಿಂತಲೂ 20 ಎಂಎಂ ಉದ್ದ ಹಾಗೂ 25 ಎಂಎಂ ಹೆಚ್ಚು ಅಗಲವನ್ನು ಪಡೆದಿದೆ.

ಆಯಾಮ (ಎಂಎಂ)

  • ಉದ್ದ: 4610
  • ಅಗಲ: 1800
  • ಎತ್ತರ: 1450
  • ಚಕ್ರಾಂತರ: 2700

ಒಳಮೈ
ಇನ್ನು ಕಾರಿನೊಳಗೆ ಪ್ಲಶ್ ಲೆಥರ್ ಹೋದಿಕೆ, ಎಂಟು ಇಂಚುಗಳ ಇನ್ಪೋಟೈನ್ಮೆಂಟ್ ಸಿಸ್ಟಂ ಜೊತೆ ಯುಎಸ್ ಬಿ, ಆಕ್ಸ್ ಇನ್, ಬ್ಲೂಟೂತ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಕೀಲೆಸ್ ಎಂಟ್ರಿ, ಸ್ಮಾರ್ಟ್ ಕೀ, ಆರ್ಮ್ ರೆಸ್ಟ್, ಆಟೋ ಕ್ರೂಸ್ ಕಂಟ್ರೋಲ್, ಚಾಲನಾ ವಿಧ ಆಯ್ಕೆ, ಆರ್ಮ್ ರೆಸ್ಟ್, ಎಲೆಕ್ಟ್ರಿಕ್ ಸೀಟು ಜೊತೆ ಮುಂಭಾಗದಲ್ಲಿ ವೆಂಟಿಲೇಷನ್ ಸೇವೆಯೂ ಇರುತ್ತದೆ.

ನೂತನ ಎಲಂಟ್ರಾದಲ್ಲಿರುವ 2.0 ಲೀಟರ್ ಪೆಟ್ರೋಲ್ ಎಂಜಿನ್ 186.32 ಎನ್ ಎಂ ತಿರುಗುಬಲದಲ್ಲಿ 152 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ 1.6 ಲೀಟರ್ ಡೀಸೆಲ್ ಎಂಜಿನ್ 260 ಎನ್ ಎಂ ತಿರುಗುಬಲದಲ್ಲಿ 128 ಅಶ್ವಶಕ್ತಿ ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಹಾಗೂ ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಇರುತ್ತದೆ.

ಪ್ರತಿಸ್ಪರ್ಧಿಗಳು:
ಡಿ ವಿಭಾಗದಲ್ಲಿ ಷೆವರ್ಲೆ ಕ್ರೂಜ್, ಫೋಕ್ಸ್ ವ್ಯಾಗನ್ ಜೆಟ್ಟಾ, ಸ್ಕೋಡಾ ಒಕ್ಟಾವಿಯಾ, ಟೊಯೊಟಾ ಕರೊಲ್ಲಾ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

ಶೇಕಡಾ 53ರಷ್ಟು ಹೆಚ್ಚು ಶಕ್ತಿಶಾಲಿ ಸುಧಾರಿತ ಹೆಚ್ಚು ಸಾಮರ್ಥ್ಯದ ಸ್ಟೀಲ್ ನಿಂದ (Advanced High Strength Steel) ನಿರ್ಮಿಸಲಾಗಿದ್ದು, ಹೆಚ್ಚು ಬಿಗಿತದ ರಚನೆಯೊಂದಿಗೆ ಆರಾಮದಾಯಕ ಚಾಲನೆ ಹಾಗೂ ಹ್ಯಾಂಡ್ಲಿಂಗ್ ಪ್ರದಾನ ಮಾಡಲಿದೆ.

ಬಣ್ಣಗಳು: ಮರಿನಾ ಬ್ಲೂ, ಪೋಲರ್ ವೈಟ್, ಸ್ಲೀಕ್ ಸಿಲ್ವರ್, ಫಾಟಂ ಬ್ಲ್ಯಾಕ್, ಪ್ಯಾಶನ್ ರೆಡ್.

ಸುರಕ್ಷತೆ

  • ಸನ್ ರೂಫ್,
  • ಬದಿ ಮತ್ತು ಕರ್ಟೈನ್ ಏರ್ ಬ್ಯಾಗ್,
  • ಮುಂಭಾಗದಲ್ಲಿ ವೆಂಟಿಲೇಟಡ್ ಸೀಟು,
  • ಸ್ಪೀಡ್ ಸೆನ್ಸಿಂಗ್ ಆಟೋ ಡೋರ್ ಲಾಕ್,
  • ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್,
  • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್,
  • ಹಿಲ್ ಸ್ಟ್ಯಾರ್ಟ್ ಅಸಿಸ್ಟ್,
  • ಪಾರ್ಕಿಂಗ್ ಸೆನ್ಸಾರ್

More from DriveSpark

Article Published On: Tuesday, August 23, 2016, 16:04 [IST]
English summary
Hyundai Elantra Launched In India, Prices Start At Rs. 12.99 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+