ಹ್ಯುಂಡೈ ಇಯಾನ್ ವೆರಿಯಂಟ್‌ಗಳ ವೃದ್ಧಿ; ಐ10 ಮ್ಯಾಗ್ನಾ ಆಟೋಮ್ಯಾಟಿಕ್ ರಸ್ತೆಗೆ
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಕ ಕಾರು ಸಂಸ್ಥೆ ಮಾರುತಿ ಸುಜುಕಿ, ತನ್ನ ಜನಪ್ರಿಯ ಮಾದರಿಗಳ ಮಾರಾಟವನ್ನು ಮತ್ತಷ್ಟು ವೃದ್ಧಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಹೊಸ ವೆರಿಯಂಟ್ ಗಳನ್ನು ಘೋಷಿಸಿದೆ.
ಹ್ಯುಂಡೈ ಸಣ್ಣ ಕಾರು ಇಯಾನ್ ಗೆ ಹೊಸ ವೆರಿಯಂಟ್ ಗಳ ಜೊತೆಗೆ ಐಚ್ಛಿಕ ಏರ್ ಬ್ಯಾಗ್ ಗಳು ಸೇರ್ಪಡೆಗೊಂಡಿದೆ. ಅದೇ ಹೊತ್ತಿಗೆ ಐ10 ಹ್ಯಾಚ್ ಬ್ಯಾಕ್ ಕಾರಿನ ಮ್ಯಾಗ್ನಾ ಆಟೋಮ್ಯಾಟಿಕ್ ವೆರಿಯಂಟ್ ಗಳನ್ನು ಸಹ ಪರಿಚಯಿಸಲಾಗಿದೆ.

ಹ್ಯುಂಡೈ ಇಯಾನ್ ಬೇಸ್ ಡಿ-ಲೈಟ್ ಹೊರತುಪಡಿಸಿ ಇತರೆಲ್ಲ ವೆರಿಯಂಟ್ ಗಳಲ್ಲಿ ಚಾಲಕ ಬದಿಯ ಐಚ್ಛಿಕ ಏರ್ ಬ್ಯಾಗ್ ಸೌಲಭ್ಯವು ಲಭ್ಯವಾಗಲಿದೆ.

ಅದೇ ಹೊತ್ತಿಗೆ ಇಯಾನ್ ವೆರಿಯಂಟ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಇದು ಡಿ ಲೈಟ್ ಜೊತೆಗೆ, ಡಿ ಲೈಟ್ ಪ್ಲಸ್, ಇರಾ ಪ್ಲಸ್, ಮ್ಯಾಗ್ನಾ ಪ್ಲಸ್, ಸ್ಪೋರ್ಟ್ಜ್ ಮತ್ತು ಮ್ಯಾಗ್ನಾ ಐಚ್ಛಿಕ ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ.

ಇದಕ್ಕೂ ಮೊದಲು ಸ್ಪೋರ್ಟ್ಜ್ ಮಾದರಿಯಲ್ಲಿ ಮಾತ್ರ ಐಚ್ಛಿಕ ಏರ್ ಬ್ಯಾಗ್ ಸೌಲಭ್ಯವನ್ನು ನೀಡಲಾಗುತ್ತಿತ್ತು. ಈಗ ಚಾಲಕ ಬದಿಯ ಐಚ್ಛಿಕ ಏರ್ ಬ್ಯಾಗ್ ಭದ್ರತೆಯನ್ನು ಬಯಸುವವರು ಹೆಚ್ಚುವರಿಯಾಗಿ 10,000 ರು.ಗಳನ್ನು ವ್ಯಯ ಮಾಡಬೇಕಾಗಿದೆ.

0.8 ಲೀಟರ್ ಮತ್ತು 1.0 ಲೀಟರ್ ಪೆಟ್ರಲ್ ಎಂಜಿನ್ ಗಳಲ್ಲಿ ಐಚ್ಛಿಕ ಚಾಲಕ ಬದಿಯ ಏರ್ ಬ್ಯಾಗ್ ಗಳನ್ನು ನೀಡಲಾಗುತ್ತದೆ. ದುರದೃಷ್ಟವಶಾತ್ 1.0 ಲೀಟರ್ ಆವೃತ್ತಿಯು ಮ್ಯಾಗ್ನಾ, ಮ್ಯಾಗ್ನಾ ಪ್ಲಸ್ ಮತ್ತು ಮ್ಯಾಗ್ನಾ ಪ್ಲಸ್ ವೆರಿಯಂಟ್ ಗಳಲ್ಲಿ ಮಾತರ್ ಲಭ್ಯವಾಗಲಿದೆ.

ಇನ್ನೊಂದೆಡೆ ಗ್ರಾಂಡ್ ಐ10 ಮಾದರಿಯ ಮ್ಯಾಗ್ನಾ ವೆರಿಯಂಟ್ ನಲ್ಲು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ನೀಡಲು ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆ ನಿರ್ಧರಿಸಿದೆ.

ನೂತನ ಗ್ರಾಂಡ್ ಐ10 ಮ್ಯಾಗ್ನಾ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆವೃತ್ತಿಯು ಮುಂಬೈ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ 6.21 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಅಚ್ಚರಿಯೆಂಬಂತೆ ಹ್ಯುಂಡೈ ತನ್ನ ಆಸ್ಟಾ ವೆರಿಯಂಟ್ ನಿಂದ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ನೀಡುವುದನ್ನು ಸ್ಥಗತಿಗೊಳಿಸಿದೆ.

ಇದರ 1.6 ಲೀಟರ್ ಪೆಟ್ರೋಲ್ ಎಂಜಿನ್ 114 ಎನ್ ಎಂ ತಿರುಗುಬಲದಲ್ಲಿ 81.86 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಹ ಪಡೆದಿದೆ.

ಭಾರತದಲ್ಲಿ 20ನೇ ವರ್ಷದ ಸಂಭ್ರಮದಲ್ಲಿರುವ ಹ್ಯುಂಡೈ, ಇತ್ತೀಚೆಗಷ್ಟೇ ಎಕ್ಸ್ ಸೆಂಟ್ ಮತ್ತು ಗ್ರಾಂಡ್ ಐ10 ವಿಶೇಷ ವಾರ್ಷಿಕ ಆವೃತ್ತಿಗಳನ್ನು ಬಿಡುಗಡೆಗೊಳಿಸಿತ್ತು.


Click it and Unblock the Notifications