ಕ್ರೆಟಾ ವಾರ್ಷಿಕ ಆವೃತ್ತಿ ನೀಡಿ ಸೈನಾ ನೆಹ್ವಾಲ್ ಗೌರವಿಸಿದ ಹ್ಯುಂಡೈ

By Nagaraja

'ಭಾರತದ ವರ್ಷದ ಕಾರು 2016' ಪ್ರಶಸ್ತಿಗೆ ಭಾಜನವಾಗಿರುವ ಹ್ಯುಂಡೈ ಕ್ರೆಟಾದ ಮೊದಲ ವಾರ್ಷಿಕೋತ್ಸವದ ಆವೃತ್ತಿಯ ಕಾರನ್ನು ಭಾರತದ ಹೆಸರಾಂತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರಿಗೆ ನೀಡಿ ಹ್ಯುಂಡೈ ಸಂಸ್ಥೆಯು ಗೌರವಿಸಿದೆ.

ಇದೇ ಸಂದರ್ಭದಲ್ಲಿ ಕ್ರೆಟಾ ಕ್ರೀಡಾ ಬಳಕೆಯ ವಾಹನದ ಒಂದನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಕ್ಷಿಣ ಕೊರಿಯಾ ಮೂಲದ ಈ ಸಂಸ್ಥೆಯು ವಿಶೇಷ ಆವೃತ್ತಿಯ ಬಿಡುಗಡೆಯ ಘೋಷಣೆಯನ್ನು ಮಾಡಿದೆ.

ಕ್ರೆಟಾ ವಾರ್ಷಿಕ ಆವೃತ್ತಿ ನೀಡಿ ಸೈನಾ ನೆಹ್ವಾಲ್ ಗೌರವಿಸಿದ ಹ್ಯುಂಡೈ

ಆಸ್ಟ್ರೇಲಿಯಾ ಓಪನ್ ಚಾಂಪಿಯನ್ ನಲ್ಲಿ ಗೆಲುವಿನ ಆಚರಣೆಯ ಸಂಭ್ರಮದಲ್ಲಿರುವ 26ರ ಹರೆಯದ ಸೈನಾ ನೆಹ್ವಾಲ್ ಸಂಭ್ರಮವನ್ನು ಹ್ಯುಂಡೈ ಕ್ರೆಟಾ ಇಮ್ಮಡಿಗೊಳಿಸಿದೆ.

ಕ್ರೆಟಾ ವಾರ್ಷಿಕ ಆವೃತ್ತಿ ನೀಡಿ ಸೈನಾ ನೆಹ್ವಾಲ್ ಗೌರವಿಸಿದ ಹ್ಯುಂಡೈ

ಅರ್ಜುನ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ, ಪದ್ಮ ಶ್ರೀ ಮತ್ತು ಪದ್ಮ ಭೂಷಣ್ ಪ್ರಶಸ್ತಿಗಳಿಗೆ ಭಾಜನವಾಗಿರುವ ಸೈನಾ ನೆಹ್ವಾಲ್ 2012 ಲಂಡನ್ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕಕ್ಕೆ ಅರ್ಹವಾಗಿದ್ದರು.

ಕ್ರೆಟಾ ವಾರ್ಷಿಕ ಆವೃತ್ತಿ ನೀಡಿ ಸೈನಾ ನೆಹ್ವಾಲ್ ಗೌರವಿಸಿದ ಹ್ಯುಂಡೈ

ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ಹ್ಯುಂಡೈ ಮೋಟಾರು ಇಂಡಿಯಾ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ವೈ.ಕೆ ಕೂ, ಸೈನಾ ನೆಹ್ವಾಲ್ ಭಾರತೀಯ ಬ್ಯಾಡ್ಮಿಂಟನ್ ತಾರೆಯಾಗಿದ್ದು, ಸ್ಥಿರತೆಯ ಪ್ರದರ್ಶನ ನೀಡುವ ಮುಖಾಂತರ ಜಾಗತಿಕವಾಗಿ ಹೆಸರು ಮಾಡಿರುವುದಾಗಿ ತಿಳಿಸಿದ್ದಾರೆ. ಇನ್ನೊಂದೆಡೆ ಶಕ್ತಿಯುತ ದೇಹ ರಚನೆಯನ್ನು ಹೊಂದಿರುವ ಕ್ರೆಟಾ ಜಾಗತಿಕ ಗ್ರಾಹಕರಿಗೆ ಪರಿಪೂರ್ಣ ಎಸ್ ಯುವಿ ಎನಿಸಿಕೊಳ್ಳಲಿದೆ ಎಂದಿದ್ದಾರೆ.

ಕ್ರೆಟಾ ವಾರ್ಷಿಕ ಆವೃತ್ತಿ ನೀಡಿ ಸೈನಾ ನೆಹ್ವಾಲ್ ಗೌರವಿಸಿದ ಹ್ಯುಂಡೈ

ಸೈನಾ ನೆಹ್ವಾಲ್ ಸಹ ಈ ಅದ್ಭುತ ಅನುಭವಕ್ಕಾಗಿ ಹ್ಯುಂಡೈ ಸಂಸ್ಥೆಗೆ ಧನ್ಯವಾದ ಹೇಳಲಿಚ್ಛಿಸಿದ್ದಾರೆ. ತಮ್ಮ ಕಠಿಣ ಪರಿಶ್ರಮವನ್ನು ಗುರುತಿಸಿಕೊಂಡು ಮನ್ನಣೆಯನ್ನು ನೀಡುವುದು ಪ್ರತಿಯೊಬ್ಬ ಕ್ರೀಡಾಪಟುವಿಗೆ ಸ್ಪೂರ್ತಿ ತುಂಬಲಿದೆ ಎಂದಿದ್ದಾರೆ. ಮುಂಬರುವ ಟೂರ್ನಿಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಹೆಮ್ಮೆಯಾಗಲಿದ್ದೇನೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಕ್ರೆಟಾ ವಾರ್ಷಿಕ ಆವೃತ್ತಿ ನೀಡಿ ಸೈನಾ ನೆಹ್ವಾಲ್ ಗೌರವಿಸಿದ ಹ್ಯುಂಡೈ

ಕ್ರೀಡೆಯ ಜೊತೆ ಸದಾ ಬಾಂಧವ್ಯ ಬೆಳೆಸಿರುವ ಹ್ಯುಂಡೈ, ಫಿಫಾ ವಿಶ್ವಕಪ್, ಯುಇಎಫ್‌ಎ ಚಾಂಪಿಯನ್ ಸಿಪ್, ಗಾಲ್ಪ್, ವರ್ಲ್ಡ್ ರಾಲಿ ಚಾಂಪಿಯನ್ ಶಿಪ್ ಮತ್ತು ಐಸಿಸಿ ಕ್ರಿಕೆಟ್ ಚಾಂಪಿಯನ್ ಗಳಂತಹ ಜಾಗತಿಕ ಕ್ರೀಡಾಕೂಟಗಳಲ್ಲಿ ತನ್ನ ಸಾನಿಧ್ಯವನ್ನು ತೋರಿದೆ.

ಕ್ರೆಟಾ ವಾರ್ಷಿಕ ಆವೃತ್ತಿ ನೀಡಿ ಸೈನಾ ನೆಹ್ವಾಲ್ ಗೌರವಿಸಿದ ಹ್ಯುಂಡೈ

ಅಷ್ಟೇ ಯಾಕೆ ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೊತೆ ಕೈಜೋಡಿಸಿಕೊಂಡಿರುವ ಹ್ಯುಂಡೈ, ಮುಂದಿನ ನಾಲ್ಕು ವರ್ಷಗಳಿಗೆ ಟೆಸ್ಟ್, ಏಕದಿನ ಮತ್ತು ಟ್ವೆಂಟಿ-20ಗಳಲ್ಲಿ ಪಾಲುದಾರಿಕೆಯನ್ನು ಹೊಂದಿರಲಿದೆ.

ವಿಶೇಷತೆಗಳು

ವಿಶೇಷತೆಗಳು

ಕಾರಿನ ಹೊರಗಡೆಯಲ್ಲಿ ವಾರ್ಷಿಕ 1 ಎಡಿಷನ್ ಸ್ಟಿಕ್ಕರ್, ಬದಿಯಲ್ಲಿ ವಿಶೇಷ ದೇಹ ಚಿತ್ರಗಳು, ಬ್ಲ್ಯಾಕ್ ರೂಫ್, ಕೆಂಪು ಮಿರರ್ ಕ್ಯಾಪ್ ಇತ್ಯಾದಿ ವೈಶಿಷ್ಟ್ಯಗಳು ಕಾಣಸಿಗಲಿದೆ.

ವಿಶೇಷತೆಗಳು

ವಿಶೇಷತೆಗಳು

ಕಾರಿನೊಳಗೆ ಹೊಸತಾದ ಸೀಟು ಕವರ್, ಫ್ಲೋರ್ ಮ್ಯಾಟ್, ಡೋರ್ ಸಿಲ್, ಅಲ್ಯೂಮಿನಿಯಂ ಪೆಡಲ್ ಇತ್ಯಾದಿ ವಿಶಿಷ್ಟತೆಗಳು ಇರಲಿದೆ.

 ವಿಶೇಷತೆಗಳು

ವಿಶೇಷತೆಗಳು

ಕಳೆದೊಂದು ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಹ್ಯುಂಡೈ ಕ್ರೆಟಾ, ಕ್ರೀಡಾ ಬಳಕೆಯ ವಾಹನ ವಿಭಾಗದಲ್ಲಿ ಗರಿಷ್ಠ ಬೇಡಿಕೆಯನ್ನು ಕಾಪಾಡಿಕೊಂಡಿದೆ.

ಕ್ರೆಟಾ ವಾರ್ಷಿಕ ಆವೃತ್ತಿ ನೀಡಿ ಸೈನಾ ನೆಹ್ವಾಲ್ ಗೌರವಿಸಿದ ಹ್ಯುಂಡೈ

ನೂತನ ಕ್ರೆಟಾ 1.4 ಹಾಗೂ 1.6 ಲೀಟರ್ ಸಿಆರ್ ಡಿಐ ಡೀಸೆಲ್ ಮತ್ತು 1.6 ಲೀಟರ್ ವಿಟಿವಿಟಿ ಪೆಟ್ರೋಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಅಂತೆಯೇ ಆರು ಸ್ಪೀಡ್ ಮ್ಯಾನುವಲ್ ಮತ್ತು ಆರು ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

Article Published On: Thursday, July 7, 2016, 15:49 [IST]
English summary
Hyundai Honors Saina Nehwal With The 1st Anniversary Edition Creta
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+