ಅಂತೂ ಇಂತೂ ಹ್ಯುಂಡೈ ಟಕ್ಸನ್ ಆಗಮನಕ್ಕೆ ಮುಹೂರ್ತ ಫಿಕ್ಸ್

Written By:

ಬಹುನಿರೀಕ್ಷಿತ ಹ್ಯುಂಡೈ ಟಕ್ಸನ್ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಆಗಮನಕ್ಕೆ ಕೊನೆಗೂ ಕಾಲ ನಿಗದಿಯಾಗಿದ್ದು, ಮುಂಬರುವ 2016 ನವೆಂಬರ್ 14ರಂದು ಬಿಡುಗಡೆಯಾಗಲಿದೆ. ಇದಕ್ಕೂ ಮೊದಲು ಅಕ್ಟೋಬರ್ 24ರಂದು ಬಿಡುಗಡೆಯಾಗುವುದಾಗಿ ಘೋಷಿಸಿದ್ದರೂ ಬಳಿಕ ಅನಿವಾರ್ಯ ಕಾರಣಗಳಿಂದಾಗಿ ಬಿಡುಗಡೆ ಪ್ರಕ್ರಿಕೆಯನ್ನು ದಕ್ಷಿಣ ಕೊರಿಯಾ ಮೂಲದ ಈ ಸಂಸ್ಥೆಯು ಮುಂದೂಡಿತ್ತು.

ಅಂತೂ ಇಂತೂ ಹ್ಯುಂಡೈ ಟಕ್ಸನ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಹೋಂಡಾ ಸಿಆರ್ ವಿ ಹಾಗೂ ಸ್ಕೋಡಾ ಯೆಟಿ ಮುಂತಾದ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿರುವ ಹ್ಯುಂಡೈ ಟಕ್ಸನ್ ಮುಂಗಡ ಬುಕ್ಕಿಂಗ್ ಪ್ರಕ್ರಿಯೆಯನ್ನು ಸಂಸ್ಥೆಯು ಆರಂಭಿಸಿದೆ.

ಅಂತೂ ಇಂತೂ ಹ್ಯುಂಡೈ ಟಕ್ಸನ್ ಆಗಮನಕ್ಕೆ ಮುಹೂರ್ತ ಫಿಕ್ಸ್

2016 ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಂಡಿರುವ ಹ್ಯುಂಡೈ ಟಕ್ಸನ್ ಪ್ರಸಕ್ತ ಸಾಲಿನಲ್ಲಿ ಹ್ಯುಂಡೈನಿಂದ ಬಿಡುಗಡೆಯಾಗುತ್ತಿರುವ ಎರಡನೇ ಉತ್ಪನ್ನವಾಗಿರಲಿದೆ. ಇದಕ್ಕೂ ಮೊದಲು ಆಗಸ್ಟ್ ತಿಂಗಳಲ್ಲಿ ನೆಕ್ಸ್ಟ್ ಜನರೇಷನ್ ಎಲಂಟ್ರಾ ಕಾರನ್ನು ಹ್ಯುಂಡೈ ಬಿಡುಗಡೆಗೊಳಿಸಿತ್ತು.

ಅಂತೂ ಇಂತೂ ಹ್ಯುಂಡೈ ಟಕ್ಸನ್ ಆಗಮನಕ್ಕೆ ಮುಹೂರ್ತ ಫಿಕ್ಸ್

ವಿಸ್ತಾರವಾಗಿ ಹರಡಿರುವ ಭಾರತ ಮಾರುಕಟ್ಟೆಯಲ್ಲಿ ತನ್ನ ಬದ್ಧತೆಯನ್ನು ಪ್ರದರ್ಶಿಸುತ್ತಿರುವ ಹ್ಯುಂಡೈ, ಹೊಸ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವುದರಲ್ಲಿ ಗಮನ ಕೇಂದ್ರಿತವಾಗಿದೆ.

ಅಂತೂ ಇಂತೂ ಹ್ಯುಂಡೈ ಟಕ್ಸನ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಕ್ರೆಟಾ ಮತ್ತು ಸಾಂಫಾಟೆ ಫೆ ನಡುವಣ ಅಂತರವನ್ನು ತಗ್ಗಿಸಲಿರುವ ಟಕ್ಸನ್ ಇವೆರಡು ಜನಪ್ರಿಯ ಎಸ್ ಯುವಿಗಳ ನಡುವೆ ಗುರುತಿಸಿಕೊಳ್ಳಲಿದೆ.

ಅಂತೂ ಇಂತೂ ಹ್ಯುಂಡೈ ಟಕ್ಸನ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಹ್ಯುಂಡೈನ ಫ್ಯೂಯಿಡಿಕ್ 2.0 ಡಿಸೈನ್ ತತ್ವಶಾಸ್ತ್ರದಲ್ಲಿ ನೂತನ ಟಕ್ಸನ್ ನಿರ್ಮಾಣವಾಗಲಿದೆ. ಅಲ್ಲದೆ ಅನೇಕ ನಾವೀನ್ಯ ತಂತ್ರಗಾರಿಕೆಗಳಿಗೆ ಮನೆ ಮಾಡಲಾಗಿದೆ.

ಅಂತೂ ಇಂತೂ ಹ್ಯುಂಡೈ ಟಕ್ಸನ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಹೆಕ್ಸಾಗನಲ್ ಗ್ರಿಲ್, ಕ್ರೋಮ್ ಸ್ಪರ್ಶ, ಎಲ್ ಇಡಿ ಟೈಲ್ ಲೈಟ್, ಕ್ರೀಡಾತ್ಮಕ ಬಂಪರ್, ಹೆಡ್ ಲ್ಯಾಂಪ್, ರೂಫ್ ಲೈನ್ ಇತ್ಯಾದಿ ಗಮನಾರ್ಹ ವಿನ್ಯಾಸ ವೈಶಿಷ್ಟ್ಯಗಳನ್ನು ಪಡೆಯಲಿದೆ.

ಅಂತೂ ಇಂತೂ ಹ್ಯುಂಡೈ ಟಕ್ಸನ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಲೆಥರ್ ಹೋದಿಕೆಯ ಸೀಟು, ಇನ್ಸ್ಟ್ರುಮೆಂಟ್ ಪ್ಯಾನೆಲ್, ಸ್ಟೀರಿಂಗ್ ವೀಲ್, ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ಆಕ್ಸ್, ಯುಎಸ್ ಬಿ, ಬ್ಲೂಟೂತ್ ಕನೆಕ್ಟಿವಿಟಿ, ಹೈ ಎಂಡ್ ಆಡಿಯೋ ಸಿಸ್ಟಂ ಜೊತೆ ಎಂಟು ಸ್ಪೀಕರ್, ಐಚ್ಛಿಕ ಪ್ಯಾನರಾಮಿಕ್ ಸನ್ ರೂಫ್, ಎಲೆಕ್ಟ್ರಿಕ್ ಲಿಫ್ಟ್ ಗೇಟ್ ಇತ್ಯಾದಿ ಸೌಲಭ್ಯಗಳಿರಲಿದೆ.

ಅಂತೂ ಇಂತೂ ಹ್ಯುಂಡೈ ಟಕ್ಸನ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಹಾಗಿದ್ದರೂ ಎಂಜಿನ್ ಮಾನದಂಡಗಳ ಬಗ್ಗೆ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ. ಇದರಲ್ಲಿರುವ 2.0 ಲೀಟರ್ ಡೀಸೆಲ್ ಎಂಜಿನ್ 134 ಹಾಗೂ 181 ಅಶ್ವಶಕ್ತಿಗಳನ್ನು ಉತ್ಪಾದಿಸುವ ಸಾದ್ಯತೆಯಿದೆ. ಇದು ಆರು ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ಅಂತೂ ಇಂತೂ ಹ್ಯುಂಡೈ ಟಕ್ಸನ್ ಆಗಮನಕ್ಕೆ ಮುಹೂರ್ತ ಫಿಕ್ಸ್

ಅಂದ ಹಾಗೆ ನೂತನ ಹ್ಯುಂಡೈ ಟಕ್ಸನ್ 15 ಲಕ್ಷ ರು.ಗಳಿಂದ 20 ಲಕ್ಷ ರು.ಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಅಂತೂ ಇಂತೂ ಹ್ಯುಂಡೈ ಟಕ್ಸನ್ ಆಗಮನಕ್ಕೆ ಮುಹೂರ್ತ ಫಿಕ್ಸ್

2004ರಲ್ಲಿ ಜಾಗತಿಕ ಪ್ರವೇಶದ ಬಳಿಕ 2005ರಲ್ಲಿ ಈ ಮೊದಲನೇ ತಲೆಮಾರಿನ ಕಾರು ಭಾರತವನ್ನು ಹಿಂಬಾಲಿಸಿತ್ತು. ತದಾ ನಂತರ ಕಳಪೆ ಮಾರಾಟದ ಹಿನ್ನಲೆಯಲ್ಲಿ ಹಿಂಪಡೆಯಲಾಗಿತ್ತು.

English summary
Hyundai India Now Confirms Launch Date For Its All-New Tucson
Story first published: Thursday, October 20, 2016, 17:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark