ಹ್ಯುಂಡೈ 20ರ ಸಂಭ್ರಮ; ಐ10 ವಿಶೇಷ ಆವೃತ್ತಿ ಬಿಡುಗಡೆ

Written By:

ಭಾರತೀಯ ಮಾರುಕಟ್ಟೆಗೆ ಪ್ರವೇಶಿಸಿ ಎರಡು ಯಶಸ್ವಿ ದಶಕಗಳನ್ನು ಪೂರ್ಣಗೊಳಿಸಿರುವ ಹ್ಯುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ (ಎಚ್‌ಎಂಐಎಲ್) ಸಂಸ್ಥೆಯು ದೇಶದ ನಿವಾಸಿಗಳಿಗಾಗಿ ತನ್ನ ಜನಪ್ರಿಯ ಐ10 ವಿಶೇಷ ಆವೃತ್ತಿಯನ್ನು ಕೊಡುಗೆಯಾಗಿ ನೀಡಿದೆ.

ಕಳೆದ 20 ವರ್ಷಗಳ ಅವಧಿಯಲ್ಲಿ ಭಾರತೀಯರ ನಂಬಿಕೆಯನ್ನು ಗಿಟ್ಟಿಸಿಕೊಂಡಿರುವ ಹ್ಯುಂಡೈ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರೆಂಬ ಪಟ್ಟವನ್ನು ಉಳಿಸಿಕೊಂಡಿದೆ. ಈಗ ಸಂಸ್ಥೆಯು ಗ್ರಾಂಡ್ ಐ10 ಮುಖಾಂತರ ತನ್ನ ಸಂತಸವನ್ನು ಗ್ರಾಹಕರ ಜೊತೆಗೆ ಹಂಚಿಕೊಳ್ಳಲು ನಿರ್ಧರಿಸಿದೆ.

ಹ್ಯುಂಡೈ 20ರ ಸಂಭ್ರಮ; ಐ10 ವಿಶೇಷ ಆವೃತ್ತಿ ಬಿಡುಗಡೆ

2014ರಲ್ಲಿ ಭಾರತೀಯ ವರ್ಷದ ಕಾರು ಪ್ರಶಸ್ತಿಗೆ ಪಾತ್ರವಾಗಿರುವ ಹ್ಯುಂಡೈ ಗ್ರಾಂಡ್ ಐ10 ಇದುವರೆಗೆ 3,08,000 ಸಂತೃಪ್ತ ಗ್ರಾಹಕರನ್ನು ಪಡೆದಿದೆ.

ಹ್ಯುಂಡೈ 20ರ ಸಂಭ್ರಮ; ಐ10 ವಿಶೇಷ ಆವೃತ್ತಿ ಬಿಡುಗಡೆ

ಸ್ಟೈಲ್ ನಿಂದ ನಿರ್ವಹಣೆಯ ವರೆಗೂ ಕಂಪ್ಲೀಟ್ ಪ್ಯಾಕೇಜ್ ನೀಡುತ್ತಿರುವ ಹ್ಯುಂಡೈ ಗ್ರಾಂಡ್ ಐ10 ವಿಶೇಷ ಆವೃತ್ತಿಯು ಈಗ ಹ್ಯುಂಡೈ ಬ್ರಾಂಡ್ ಮೌಲ್ಯವನ್ನು ವೃದ್ಧಿಸಲು ನೆರವಾಗಲಿದೆ.

ಹ್ಯುಂಡೈ 20ರ ಸಂಭ್ರಮ; ಐ10 ವಿಶೇಷ ಆವೃತ್ತಿ ಬಿಡುಗಡೆ

ಹ್ಯುಂಡೈ ಗ್ರಾಂಡ್ ಐ10 ವಿಶೇಷ ಆವೃತ್ತಿಯು, ರಿಯರ್ ಸ್ಪಾಯ್ಲರ್, ಸ್ಟೈಲಿಷ್ ಬಾಡಿ ಗ್ರಾಫಿಕ್ಸ್ ಮತ್ತು ಕಪ್ಪು ವರ್ಣದ ಬಿ ಪಿಲ್ಲರ್ ಗಳು ಕ್ರೀಡಾತ್ಮಕ ಲುಕ್ ಪ್ರದಾನ ಮಾಡಲಿದೆ.

ಹ್ಯುಂಡೈ 20ರ ಸಂಭ್ರಮ; ಐ10 ವಿಶೇಷ ಆವೃತ್ತಿ ಬಿಡುಗಡೆ

ಅದೇ ರೀತಿ ಕಾರಿನೊಳಗೆ 6.2 ಇಂಚುಗಳ ಟಚ್ ಸ್ಕ್ರೀನ್ ಆಡಿಯೋ ವಿಡಿಯೋ ಸಿಸ್ಟಂ ಮತ್ತು ಕಪ್ಪು ಮತ್ತು ಕೆಂಪು ವರ್ಣದ ಒಳಾಂಗಣ ತಾಜಾ ಮತ್ತು ಪ್ರೀಮಿಯಂ ಅನುಭವ ತುಂಬಲಿದೆ.

ಹ್ಯುಂಡೈ 20ರ ಸಂಭ್ರಮ; ಐ10 ವಿಶೇಷ ಆವೃತ್ತಿ ಬಿಡುಗಡೆ

ಹ್ಯುಂಡೈ ಗ್ರಾಂಡ್ ಐ10 ವಿಶೇಷ ಆವೃತ್ತಿಯಲ್ಲಿ ವಿಶೇಷ ಗ್ರಾಫಿಕ್ಸ್ ಸಹ ಲಭ್ಯವಾಗಲಿದೆ. ಅಂತೆಯೇ ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಲ್ಲೂ ದೊರಕಲಿದೆ.

ಹ್ಯುಂಡೈ 20ರ ಸಂಭ್ರಮ; ಐ10 ವಿಶೇಷ ಆವೃತ್ತಿ ಬಿಡುಗಡೆ

ಹ್ಯುಂಡೈ ಗ್ರಾಂಡ್ ಐ10 ಪೆಟ್ರೋಲ್ ಮಾದರಿಯು 1.2 ಲೀಟರ್ ಕಪ್ಪ ಡ್ಯುಯಲ್ ವಿಟಿವಿಟಿ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 116 ಎನ್ ಎಂ ತಿರುಗುಬಲದಲ್ಲಿ 83 ಅಶ್ವಶಕ್ತಿಯನ್ನು ಉತ್ಪಾದಿಸುತ್ತದೆ.

ಹ್ಯುಂಡೈ 20ರ ಸಂಭ್ರಮ; ಐ10 ವಿಶೇಷ ಆವೃತ್ತಿ ಬಿಡುಗಡೆ

ಇದರ ಐದು ಸ್ಪೀಡ್ ಮ್ಯಾನುವಲ್ ಮತ್ತು 4 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆವೃತ್ತಿಗಳು ಅನುಕ್ರಮವಾಗಿ ಪ್ರತಿ ಲೀಟರ್ ಗೆ 18.9 ಮತ್ತು 16.95 ಕೀ.ಮೀ. ಮೈಲೇಜ್ ನೀಡಲಿದೆ.

ಹ್ಯುಂಡೈ 20ರ ಸಂಭ್ರಮ; ಐ10 ವಿಶೇಷ ಆವೃತ್ತಿ ಬಿಡುಗಡೆ

ಅಂತೆಯೇ ಎರಡನೇ ತಲೆಮಾರಿನ 1.1 ಯು2 ಸಿಆರ್ ಡಿಐ ಡೀಸೆಲ್ ಎಂಜಿನ್ 160 ಎನ್ ಎಂ ತಿರುಗುಬಲದಲ್ಲಿ 71 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರ 5 ಸ್ಪೀಡ್ ಮ್ಯಾನುವಲ್ ಆವೃತ್ತಿಯು ಪ್ರತಿ ಲೀಟರ್ ಗೆ 24 ಕೀ.ಮೀ. ಇಂಧನ ಕ್ಷಮತೆಯನ್ನು ನೀಡಲಿದೆ.

ಬೆಲೆ ಮಾಹಿತಿ

ಬೆಲೆ ಮಾಹಿತಿ

ಪೆಟ್ರೋಲ್

ಸಾಲಿಡ್: 568,606 ಲಕ್ಷ ರು.

ಸಾಲಿಡ್ ಮೆಟ್ಯಾಲಿಕ್: 572,289 ಲಕ್ಷ ರು.

 ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ದೆಹಲಿ)

ಡೀಸೆಲ್

ಸಾಲಿಡ್: 660,062 ಲಕ್ಷ ರು.

ಸಾಲಿಡ್ ಮೆಟ್ಯಾಲಿಕ್: 663,793 ಲಕ್ಷ ರು.

ಹ್ಯುಂಡೈ 20ರ ಸಂಭ್ರಮ; ಐ10 ವಿಶೇಷ ಆವೃತ್ತಿ ಬಿಡುಗಡೆ

ಇದಕ್ಕೂ ಮೊದಲು ಹ್ಯುಂಡೈ ಎಕ್ಸೆಸೆಂಟ್ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡುವ ಮೂಲಕ 20 ವರ್ಷಗಳ ಸಂಭ್ರಮಕ್ಕೆ ಹ್ಯುಂಡೈ ಮುನ್ನುಡಿ ಬರೆದಿತ್ತು.

English summary
Hyundai launches 20th Anniversary Special Edition - Grand i10
Story first published: Wednesday, May 25, 2016, 16:54 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark