ಸಾಲಲ್ಲಿ ನಿಂತಿರುವ ಹ್ಯುಂಡೈ ಫ್ಯೂಯಲ್ ಸೆಲ್ ಗಾಡಿಗಳು
ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆಯಾಗಿರುವ ಹ್ಯುಂಡೈ ಮೋಟಾರ್ಸ್ ಪರಿಸರ ಸ್ನೇಹಿ ವಾಹನ ನಿರ್ಮಾಣದತ್ತ ಹೆಚ್ಚಿನ ಒಲವು ತೋರುತ್ತಿದೆ. ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರುಗಳು ಇದಕ್ಕೊಂದು ನಿದರ್ಶನವಾಗಲಿದೆ.
ಮುಂದಿನ ದಿನಗಳಲ್ಲಿ ದಕ್ಷಿಣ ಕೊರಿಯಾ ಮೂಲದ ಈ ಕಾರು ಸಂಸ್ಥೆಯು ಹೈಡ್ರೋಜನ್ ಫ್ಯೂಯಲ್ ಸೆಲ್ ನಿಯಂತ್ರಿತ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆ ಮಾಡಲಿದೆ. ಈ ಮೂಖಾಂತರ ಹೈಬ್ರಿಡ್ ವಾಹನಗಳಿಗೆ ಹೆಚ್ಚಿನ ಆದ್ಯತೆ ಕೊಡಲಿದೆ.

ಐಎಕ್ಸ್35 ಹ್ಯುಂಡೈಯಿಂದ ಜಾಗತಿಕ ಮಾರುಕಟ್ಟೆಗೆ ಪರಿಚಯವಾಗಿರುವ ಮೊದಲ ಫ್ಯೂಯಲ್ ಸೆಲ್ ವಾಹನವಾಗಿದೆ. ಪ್ರಸ್ತುತ ಬೆಳೆದು ಬರುತ್ತಿರುವ ಮಾರುಕಟ್ಟೆಗಳಲ್ಲೂ ಈ ನೂತನ ತಂತ್ರಜ್ಞಾನವನ್ನು ಪರಿಚಯಿಸುವ ಯೋಜನೆ ಹೊಂದಿದೆ.
ಒಟ್ಟಿನಲ್ಲಿ 2020ರ ವೇಳೆಯಷ್ಟೇ ಹ್ಯುಂಡೈನ ಈ ಕನಸು ನನಸಾಗುವ ಸಾಧ್ಯತೆಯಿದೆ. ಇದಕ್ಕೆ ಸಂಬಂಧಪಟ್ಟಂತೆ ಎಂಜಿನಿಯರ್‌ಗಳು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದಾರೆ.


Click it and Unblock the Notifications