ಭಾರತದಲ್ಲಿ ಕೈಗೆಟುಕುವ ಕಾರುಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ

ಭಾರತದಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಹೊಸ ಕಾರುಗಳನ್ನು ಬಿಡುಗಡೆ ಮಾಡಲು ಹ್ಯುಂಡೈ ಯೋಜನೆ ಇರಿಸಿಕೊಂಡಿದೆ.

By Nagaraja

ಸದ್ಯ ಪ್ರೀಮಿಯಂ ಕಾರುಗಳನ್ನು ಬಿಡುಗಡೆ ಮಾಡುವುದರಲ್ಲಿ ತಲ್ಲೀನವಾಗಿರುವ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ, ಮಗದೊಮ್ಮೆ ಕೈಗೆಟುಕುವ ದರಗಳಲ್ಲಿ ಶ್ರೇಷ್ಠ ಉತ್ಪನ್ನಗಳನ್ನು ನೀಡಲು ಯೋಜನೆ ಹಾಕಿಕೊಂಡಿದೆ.

ಭಾರತದಲ್ಲಿ ಕೈಗೆಟುಕುವ ಕಾರುಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ

ಮುಂದಿನ ಕೆಲವು ವರ್ಷಗಳಲ್ಲಿ ಹ್ಯುಂಡೈ ಮೋಟಾರು ಸಂಸ್ಥೆಯ ಜಾಗತಿಕ ಮಾರಾಟದಲ್ಲಿ ಶೇಕಡಾ 15ಕ್ಕಿಂತಲೂ ಹೆಚ್ಚು ಪಾಲುದಾರಿಕೆಯನ್ನು ನೀಡುವುದು ಹ್ಯುಂಡೈ ಇಂಡಿಯಾದ ಗುರಿಯಾಗಿದೆ.

ಭಾರತದಲ್ಲಿ ಕೈಗೆಟುಕುವ ಕಾರುಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ

2015ನೇ ಸಾಲಿನಲ್ಲಿ ದೇಶೀಯ ಹಾಗೂ ರಫ್ತು ಸೇರಿದಂತೆ ಒಟ್ಟು 6,43,270 ಯುನಿಟ್ ಗಳ ಮಾರಾಟ ದಾಖಲಿಸಿರುವ ಹ್ಯುಂಡೈ, ಯುರೋಪ್ ವಿಭಾಗವನ್ನು ಹಿಂದಿಕ್ಕುವ ಮೂಲಕ ದಕ್ಷಿಣ ಕೊರಿಯಾ ಸಂಸ್ಥೆಯ ಅಗ್ರ ಮೂರು ವಿದೇಶಿ ತಳಹದಿಯಾಗಿ ಹೊರಹೊಮ್ಮಿತ್ತು.

ಭಾರತದಲ್ಲಿ ಕೈಗೆಟುಕುವ ಕಾರುಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ

ಕಳೆದ ವರ್ಷ ಹ್ಯುಂಡೈ ಜಾಗತಿಕವಾಗಿ 49,64,837 ಯುನಿಟ್ ಗಳ ಮಾರಾಟವನ್ನು ದಾಖಲಿಸಿದ್ದರೆ, ಈ ಪೈಕಿ ಶೇಕಡಾ 13ರಷ್ಟು ಶೇರನ್ನು ಭಾರತ ನೀಡಿತ್ತು.

ಭಾರತದಲ್ಲಿ ಕೈಗೆಟುಕುವ ಕಾರುಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ

ಮುಂದಿನ ಎರಡು ಮೂರು ವರ್ಷಗಳಲ್ಲಿ ದೇಶದಲ್ಲಿನ ತನ್ನ ನೆಲೆಯನ್ನು ಮತ್ತಷ್ಟು ಭದ್ರಪಡಿಸುವ ಇರಾದೆಯಲ್ಲಿರುವ ಹ್ಯುಂಡೈ ಅತಿ ಹೆಚ್ಚು ಮಾರಾಟವಾಗುವ ಸಣ್ಣ ಕಾರು ವಿಭಾಗದತ್ತ ಗಮನ ಕೇಂದ್ರಿಕರಿಸಲಿದೆ.

ಭಾರತದಲ್ಲಿ ಕೈಗೆಟುಕುವ ಕಾರುಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ

ಪ್ರಸಕ್ತ ಸಾಲಿನಲ್ಲಿ ಎಲಂಟ್ರಾ ಹಾಗೂ ಟಕ್ಸನ್ ಗಳೆಂಬ ಎರಡು ಪ್ರೀಮಿಯಂ ಕಾರುಗಳನ್ನು ಹ್ಯುಂಡೈ ಬಿಡುಗಡೆಗೊಳಿಸಿತ್ತು. ಇದೀಗ ಕ್ಯೂಎಕ್ಸ್ ಐ ಎಂಬ ಕ್ರೀಡಾ ಬಳಕೆಯ ವಾಹನವನ್ನು ಪರಿಚಯಿಸುವ ಇರಾದೆಯಲ್ಲಿದೆ.

ಭಾರತದಲ್ಲಿ ಕೈಗೆಟುಕುವ ಕಾರುಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ

ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಹ್ಯುಂಡೈ ಸಂಸ್ಥೆಯು ಅತಿ ನೂತನ ಕಾರ್ಲಿನೊ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು ಅನಾವರಣಗೊಳಿಸಿತ್ತು. ಇದು 2018ರ ವೇಳೆಯಾಗುವಾಗ ದೇಶವನ್ನು ಪ್ರವೇಶಿಸಲಿದೆ.

ಭಾರತದಲ್ಲಿ ಕೈಗೆಟುಕುವ ಕಾರುಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ

ಹೈದರಾಬಾದ್ ನಲ್ಲಿ ಹ್ಯುಂಡೈ ಅಧ್ಯಯನ ಮತ್ತು ಅಭಿವೃದ್ಧಿ ಘಟಕವು ನೂತನ ಕಾರಿನ ವಿನ್ಯಾಸಗೊಳಿಸುತ್ತಿದ್ದು, ನಿಕಟ ಭವಿಷ್ಯದಲ್ಲಿ ಚೀನಾ ಮಾರುಕಟ್ಟೆಯಲ್ಲೂ ಬಿಡುಗಡೆಯಾಗಲಿದೆ.

ಭಾರತದಲ್ಲಿ ಕೈಗೆಟುಕುವ ಕಾರುಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ

ಇವೆಲ್ಲದರ ಹೊರತಾಗಿ 2018ರ ವೇಳೆಯಾಗುವಾಗ ಹೈಬ್ರಿಡ್ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆ ಹೊಂದಲಾಗಿದೆ. ಇದರಲ್ಲಿ ಮೈಲ್ಡ್ ಹೈಬ್ರಿಡ್ ತಂತ್ರಗಾರಿಕೆಯು ಪ್ರಮುಖವಾಗಿರಲಿದೆ.

ಭಾರತದಲ್ಲಿ ಕೈಗೆಟುಕುವ ಕಾರುಗಳನ್ನು ಬಿಡುಗಡೆ ಮಾಡಲಿರುವ ಹ್ಯುಂಡೈ

ಇನ್ನುಳಿದಂತೆ 2016ರ ಅಂತ್ಯದ ವೇಳೆಗೆ ದೇಶೀಯ ಮಾರಾಟವು 0.5 ಮಿಲಿಯನ್ ಮತ್ತು ಶೇಕಡಾ 25ರಷ್ಟು ರಫ್ತು ಗುರಿಯನ್ನು ತಲುಪುವ ನಿರೀಕ್ಷೆಯನ್ನು ಹೊಂದಿದೆ.

Article Published On: Thursday, December 15, 2016, 17:38 [IST]
English summary
Hyundai To Offer More Affordable Cars In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+