ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

2018ನೇ ಸಾಲಿನಲ್ಲಿ ಹ್ಯುಂಡೈ ಸ್ಯಾಂಟ್ರೊ ಭಾರತೀಯ ಮಾರುಕಟ್ಟೆಗೆ ಭರ್ಜರಿ ಕಮ್ ಬ್ಯಾಕ್ ಮಾಡಿಕೊಳ್ಳಲಿದೆ.

By Nagaraja

ಗತಕಾಲದ ವೈಭವ ಮರುಕಳಿಸಲು ಹೊರಟಿರುವ ಹ್ಯುಂಡೈ ಸ್ಯಾಂಟ್ರೊ ಸಣ್ಣ ಹ್ಯಾಚ್ ಬ್ಯಾಕ್ ಕಾರು ಭಾರತೀಯ ಮಾರುಕಟ್ಟೆಗೆ ಭರ್ಜರಿ ಪುನರಾಗಮನ ಮಾಡಿಕೊಳ್ಳಲು ಸಜ್ಜಾಗುತ್ತಿದೆ. ಭಾರತದಲ್ಲಿ ಹ್ಯುಂಡೈ ಯಶಸ್ಸಿನಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಿರುವ ಈ ಟಾಲ್ ಬಾಯ್ ಖ್ಯಾತಿಯ ಸ್ಯಾಂಟ್ರೊ ಕಾರು ಎಂಟ್ರಿ ಲೆವೆಲ್ ವಿಭಾಗದಲ್ಲಿ ಅದ್ವಿತೀಯ ಸಾಧನೆ ಮಾಡಿದೆ.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

ಸಣ್ಣ ಕಾರು ವಿಭಾಗದಲ್ಲಿ ಮಾರುತಿ ಸುಜುಕಿ 800 ಅಧಿಪತ್ಯವನ್ನು ಸಾಧಿಸಿದರೂ ತನ್ನದೇ ಆದ ಗುಣ ವೈಶಿಷ್ಟ್ಯಗಳಿಂದ ಜನ ಮನ ಗೆಲ್ಲುವಲ್ಲಿ ಹ್ಯುಂಡೈ ಸ್ಯಾಂಟ್ರೊ ಯಶಸ್ವಿಯಾಗಿತ್ತು.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

16 ವರ್ಷಗಳಷ್ಟು ಸುದೀರ್ಘ ಕಾಲ ಯಶಸ್ವಿ ಮಾರಾಟವನ್ನು ಕಂಡಿರುವ ಸ್ಯಾಂಟ್ರೊ ಒಟ್ಟು 1.9 ದಶಲಕ್ಷಗಳಷ್ಟು ಯುನಿಟ್ ಗಳಷ್ಟು ಮಾರಾಟಗೊಂಡಿದೆ. ಕೊನೆಗೆ ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಮಾರಾಟಕ್ಕೆ ಬ್ರೇಕ್ ಹಾಕಲಾಗಿತ್ತು.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

ಮಾರುಕಟ್ಟೆಯಲ್ಲಿ ಮಾರುತಿ ಗೆಲ್ಲುವ ಕುದುರೆ ಓಟದ ನಡುವೆ ಯಾವುದೇ ಭರವಸೆಗಳಿಲ್ಲದೆ ಸ್ಯಾಂಟ್ರೊ ಪ್ರವೇಶ ಪಡೆದಿತ್ತು. ವಾಹನ ವಿಶ್ಲೇಷ್ಯಕರು ಸಹ ಸ್ಯಾಂಟ್ರೊ ಇಷ್ಟೊಂದು ದೊಡ್ಡ ಮಟ್ಟಿನ ಯಶ ಸಾಧಿಸಲಿದೆಯೆಂದು ಭಾವಿಸಿಯೇ ಇರಲಿಲ್ಲ.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

ಆದರೆ ಮೂರು ಲಕ್ಷ ರುಪಾಯಿಗಳ ಬೆಲೆ ಪರಿಧಿಯಲ್ಲಿ ಬಿಡುಗಡೆಗೊಂಡ ಸ್ಯಾಂಟ್ರೊ ದೊಡ್ಡ ಬದಲಾವಣೆಯನ್ನು ಸೃಷ್ಟಿ ಮಾಡಿತ್ತು. ಹ್ಯುಂಡೈ ಮಾರಾಟ ನಿಲುಗಡೆಯ ವರೆಗೂ ತಿಂಗಳಲ್ಲಿ ಸರಾಸರಿ 2,000 ಗಳಷ್ಟು ಕಾರುಗಳು ಮಾರಾಟವಾಗುತಿದ್ದವು ಎಂಬುದು ಸ್ಯಾಂಟ್ರೊ ಯಶಸ್ಸಿಗೆ ಕೈಗನ್ನಡಿಯಾಗಿದೆ.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

ಈಗ ದಕ್ಷಿಣ ಕೊರಿಯಾದ ಈ ಚೊಕ್ಕದಾದ ಕಾರು ಭರ್ಜರಿ ಪುನರಾಗಮನವನ್ನು ಎದುರು ನೋಡುತ್ತಿದೆ. ಈ ನಿಟ್ಟಿನಲ್ಲಿ ಕೆಲವೊಂದು ಗಮನಾರ್ಹ ಅಂಶಗಳ ಬಗ್ಗೆ ಬೊಟ್ಟು ಮಾಡಿ ತೋರಿಸಲಿದ್ದೇವೆ.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

1998ನೇ ಇಸವಿಯಲ್ಲಿ ಮೊದಲ ಬಾರಿಗೆ ಬಿಡುಗಡೆಗೊಂಡ ಹ್ಯುಂಡೈ ಸ್ಯಾಂಟ್ರೊ ಹಣಕ್ಕೆ ತಕ್ಕ ಮೌಲ್ಯವನ್ನು ನೀಡುವಲ್ಲಿ ಯಶಸ್ವಿಯಾಗಿತ್ತು. ಈ ಬೆಲೆ ಪರಿಧಿಯಲ್ಲಿ ಹ್ಯುಂಡೈ ಗುಣಮಟ್ಟದ ವೈಶಿಷ್ಟ್ಯಗಳನ್ನು ಮೈಗೂಡಿಸಿಕೊಂಡು ಬಂದಿತ್ತು.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

ಸ್ಯಾಂಟ್ರೊ ಬದಲಾವಣೆ ರೂಪದಲ್ಲಿ ಹೊರಬಂದಿರುವ ಇಯಾನ್ ಮಾರುಕಟ್ಟೆಯಲ್ಲಿ ಅಷ್ಟೇನೂ ಸದ್ದು ಮಾಡುತ್ತಿಲ್ಲ. ಇದು ತನ್ನ ಪ್ರತಿಸ್ಪರ್ಧಿಗಳ ವಿರುದ್ಧದ ಪೈಪೋಟಿಯಲ್ಲಿ ಹಿಂದೆ ಬಿದ್ದಿದೆ.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

ಇನ್ನೊಂದೆಡೆ ಸ್ವಲ್ಪ ಹೆಚ್ಚಿನ ವೈಶಿಷ್ಟ್ಯಗಳನ್ನು ಹೊಂದಿರುವ ಗ್ರಾಂಡ್ ಐ10 ಅತ್ಯುತ್ತಮ ಮಾರಾಟವನ್ನು ಕಾಪಾಡಿಕೊಂಡಿದೆ. ಇದರೊಂದಿಗೆ ಸಣ್ಣ ಕಾರು ವಿಭಾಗದಲ್ಲಿ ಸ್ಯಾಂಟ್ರೊ ಪುನರಾಗಮನ ಅನಿವಾರ್ಯವೆನಿಸಿದೆ.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

ಮೊದಲ ಬಾರಿ ಕಾರು ಖರೀದಿ ಮಾಡುವ ಗ್ರಾಹಕರಿಗೆ ಸ್ಯಾಂಟ್ರೊ ಉತ್ತಮ ಆಯ್ಕೆಯೆನಿಸಲಿದೆ. ಇದು ಅತ್ಯುತ್ತಮ ಹ್ಯಾಂಡ್ಲಿಂಗ್ ಜೊತೆಗೆ ನಿರ್ದಿಷ್ಟ ಬೆಲೆ ಪರಿಧಿಯಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುತ್ತಿದೆ.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

ಆಗಲೇ ಟಾಲ್ ಬಾಯ್ ವಿನ್ಯಾಸ ಮೈಗೂಡಿಸಿರುವುದರಿಂದ ಭಾರತದಲ್ಲಿ ಹೆಚ್ಚು ಜನಪ್ರಿಯತೆಯಲ್ಲಿರುವ ಕ್ರೀಡಾ ಬಳಕೆಯ ವಾಹನದ ವಿನ್ಯಾಸದತ್ತ ಬದಲಾಯಿಸಿಕೊಳ್ಳಲು ಸ್ಯಾಂಟ್ರೊಗೆ ಹೆಚ್ಚಿನ ಸಮಸ್ಯೆ ಬಾರದು.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

ಹಾಗಾಗಿ ಮುಂದಿನ ಸ್ಯಾಂಟ್ರೊ ಎಸ್ ಯುವಿ ಶೈಲಿಯ ವಿನ್ಯಾಸವನ್ನು ಕಾಪಾಡಿಕೊಂಡ್ಡಲ್ಲಿ ದೇಶದ ಮಾರುಕಟ್ಟೆಯಲ್ಲಿ ಯಶಸ್ಸು ಗ್ಯಾರಂಟಿ. ತನ್ಮೂಲಕ ರೆನೊ ಕ್ವಿಡ್ ಸವಾಲನ್ನು ಎದುರಿಸಲು ಸಾಧ್ಯವಾಗಲಿದೆ.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

ಬೆಲೆ, ನಿರ್ವಹಣೆ, ಮೈಲೇಜ್ ವಿಚಾರವು ದೇಶದ ಕಾರು ಖರೀದಿಗಾರರ ಪಾಲಿಗೆ ಅತ್ಯಂತ ನಿರ್ಣಾಯಕವೆನಿಸುತ್ತದೆ. ಈ ಎಲ್ಲ ಅಂಶಗಳೊಂದಿಗೆ ಸೆಗ್ಮೆಂಟ್ ಫಸ್ಟ್ ವೈಶಿಷ್ಟ್ಯಗಳು ಸೇರಿದಾಗ ಸ್ಯಾಂಟ್ರೊ ಯಶಸ್ಸನ್ನು ಯಾರಿಂದಲೂ ತಡೆಯಲಾಗದು.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ನೂತನ ಸ್ಯಾಂಟ್ರೊ 2018ನೇ ಸಾಲಿನಲ್ಲಿ ಬಿಡುಗಡೆಯಾಗಲಿದ್ದು, ಐ10 ಹ್ಯಾಚ್ ಬ್ಯಾಕ್ ಕಾರಿನ ಸ್ಥಾನವನ್ನು ತುಂಬಲಿದೆ.

ಹ್ಯುಂಡೈ ಸ್ಯಾಂಟ್ರೊ ಕಮ್ ಬ್ಯಾಕ್; ಕಾರಣಗಳನ್ನು ಬಲ್ಲೀರಾ?

ಅಷ್ಟೇ ಯಾಕೆ ಸಂಸ್ಥೆಯ ನೂತನ ಫ್ಯೂಯಿಡಿಕ್ 2.0 ಡಿಸೈನ್ ತಂತ್ರಗಾರಿಕೆಯಲ್ಲಿ ನೂತನ ಸ್ಯಾಂಟ್ರೊ ಕಾರು ನಿರ್ಮಾಣವಾಗಲಿದೆ. ಈಗ ಹೊಸ ಸ್ಯಾಂಟ್ರೊ ಕಾರಿಗೆ ನೀವೂ ಕೂಡಾ ವಿಷ್ ಮಾಡಲು ಮರೆಯದಿರಿ.

Most Read Articles

Kannada
English summary
Why Should Hyundai Bring Back The Santro To India? Here Are The Reasons
Story first published: Thursday, November 24, 2016, 9:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X