ಭಾರತದ ಮಾಲಿನ್ಯ ಸಮಸ್ಯೆಗೆ ಪರಿಹಾರವಾದಿತೇ ಐಯೊನಿಕ್?

By Nagaraja

ದಕ್ಷಿಣ ಕೊರಿಯಾ ಮೂಲದ ಐಕಾನಿಕ್ ಹಾಗೂ ಭಾರತದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಹ್ಯುಂಡೈ, ಅತಿ ನೂತನ ಐಯೊನಿಕ್ ಹೈಬ್ರಿಡ್ ಕಾರನ್ನು ಅನಾವರಣಗೊಳಿಸಿದೆ.

ಇಡೀ ವಾಹನೋದ್ಯಮ ಪರಿಸರ ಸ್ನೇಹಿ ವಾಹನಗಳನ್ನು ಉತ್ಪಾದಿಸಲು ಉತ್ಸುಕವಾಗಿರುವಂತೆಯೇ ಹ್ಯುಂಡೈನ ಈ ಪ್ರಯತ್ನವನ್ನು ಮೆಚ್ಚಲೇಬೇಕಾಗಿದೆ. ಇದು ಮಾಲಿನ್ಯ ಸಮಸ್ಯೆಯನ್ನು ಎದುರಿಸುತ್ತಿರುವ ಭಾರತಕ್ಕೆ ಪರಿಹಾರವಾಗಲಿದೆಯೇ ಎಂಬುದು ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.

ಹ್ಯುಂಡೈ ಐಯೊನಿಕ್ ಹೈಬ್ರಿಡ್ ಕಾರು

ನೂತನ ಐಯೊನಿಕ್ ಹೈಬ್ರಿಡ್ ಕಾರು ಈಗಾಗಲೇ ಮಾರುಕಟ್ಟೆಯಲ್ಲಿ ನೆಲೆಯೂರಿರುವ ಟೊಯೊಟಾದ ಪ್ರತಿಷ್ಠಿತ ಪ್ರಯಾಸ್ ಕಾರಿಗೆ ಪ್ರತಿಸ್ಪರ್ಧಿಯಾಗಲಿದೆ.

ಹ್ಯುಂಡೈ ಐಯೊನಿಕ್ ಹೈಬ್ರಿಡ್ ಕಾರು

ಇದರಲ್ಲಿ ಪೆಟ್ರೋಲ್ ಎಂಜಿನ್ ಜೊತೆಗೆ ಸಂಪೂರ್ಣವಾಗಿ ಕಾರ್ಯ ನಿರತ ಎಲೆಕ್ಟ್ರಿಕ್ ಮೋಟಾರು ಆಳವಡಿಸಲಾಗಿದ್ದು, ಪ್ಲಗ್ ಇನ್ ಹೈಬ್ರಿಡ್ ತಂತ್ರಗಾರಿಕೆಯನ್ನು ಪೂರ್ಣಗೊಳಿಸಲಿದೆ.

ಹ್ಯುಂಡೈ ಐಯೊನಿಕ್ ಹೈಬ್ರಿಡ್ ಕಾರು

ಭಾರ ಕಡಿತಗೊಳಿಸಲು ಮುಂದುವರಿದ ಗರಿಷ್ಠ ಶಕ್ತಿಯ ಸ್ಟೀಲ್ (ಎಎಚ್‌ಎಸ್‌ಎಸ್) ಮತ್ತು ಹಗುರ ಭಾರದ ಅಲ್ಯೂಮಿನಿಯಂ ಬಳಕೆ ಮಾಡಲಾಗಿದೆ.

ಹ್ಯುಂಡೈ ಐಯೊನಿಕ್ ಹೈಬ್ರಿಡ್ ಕಾರು

ಇನ್ನು ಅತ್ಯುತ್ತಮ ಹ್ಯಾಂಡ್ಲಿಂಗ್‌ಗಾಗಿ ವಿಶಿಷ್ಟ ಸಸ್ಪೆಷನ್ ಸಿಸ್ಟಂ ಬಳಕೆ ಮಾಡಲಾಗಿದೆ.

ಹ್ಯುಂಡೈ ಐಯೊನಿಕ್ ಹೈಬ್ರಿಡ್ ಕಾರು

ಇದರಲ್ಲಿ 1.6 ಲೀಟರ್ ಜಿಡಿಐ ಎಂಜಿನ್ ಇರಲಿದ್ದು 146 ಎನ್‌ಎಂ ತಿರುಗುಬಲದಲ್ಲಿ 103 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇದರಲ್ಲಿರುವ ಎಲೆಕ್ಟ್ರಿಕ್ ಮೋಟಾರು ಮತ್ತಷ್ಟು 43 ಅಶ್ವಶಕ್ತಿ ಉತ್ಪಾದಿಸಲು ಸಹಕಾರಿಯಾಗಲಿದೆ. ಅಲ್ಲದೆ ಡ್ಯುಯಲ್ ಕ್ಲಚ್ ಟ್ರಾನ್ಸ್ ಮಿಷನ್ ಮುಖಾಂತರ ಪವರ್ ವಿತರಣೆಯಾಗಲಿದೆ.

More from DriveSpark

Article Published On: Friday, January 8, 2016, 17:56 [IST]
English summary
Hyundai unveils IoniQ Hybrid
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+