ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಸಾಹಸ ಉಪಯುಕ್ತ ವಾಹನ ಬಿಡುಗಡೆ

By Nagaraja

ಜಪಾನ್ ಮೂಲದ ಹೆಸರಾಂತ ಸಂಸ್ಥೆ ಇಸುಝು ಅತಿ ನೂತನ ಡಿ ಮ್ಯಾಕ್ಸ್ ವಿ ಕ್ರಾಸ್ ಸಾಹಸ ಉಪಯುಕ್ತ ವಾಹನವನ್ನು (Adventure Utility Vehicle) ಭಾರತದಲ್ಲಿ ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 12.49 ಲಕ್ಷ ರು. (ಎಕ್ಸ್ ಶೋ ರೂಂ ಚೆನ್ನೈ)

ಆಂಧ್ರ ಪ್ರದೇಶದಲ್ಲಿರುವ ಸಂಸ್ಥೆಯ ಶ್ರೀ ಸಿಟಿ ಘಟಕದಲ್ಲಿ ಸ್ಥಳೀಯವಾಗಿ ನಿರ್ಮಾಣವಾಗಲಿರುವ ಇಸುಝು ಜುಲೈ ತಿಂಗಳಿಂದ ವಿತರಣೆ ಆರಂಭವಾಗಲಿದೆ. ಇದರಂತೆ ಮುಂಗಡ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಸಾಹಸ ಉಪಯುಕ್ತ ವಾಹನ ಬಿಡುಗಡೆ

ನಿಮ್ಮ ಮಾಹಿತಿಗಾಗಿ ಇಸುಝು ಡಿ ಮ್ಯಾಕ್ಸ್ ವಿ ಕ್ರಾಸ್ ಅಡ್ವೆಂಚರ್ ಯುಟಿಲಿಟಿ ವಾಹನವನ್ನು ಮೊದಲ ಬಾರಿಗೆ ವರ್ಷಾರಂಭದಲ್ಲಿ ನಡೆದ 2016 ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳಿಸಲಾಗಿತ್ತು.

ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಸಾಹಸ ಉಪಯುಕ್ತ ವಾಹನ ಬಿಡುಗಡೆ

ಸಾಹಸ ಯಾತ್ರೆಯನ್ನು ಬಯಸುವ ಭಾರತೀಯ ವಾಹನ ಉತ್ಸಾಹಿಗಳಿಗೆ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಪರಿಪೂರ್ಣ ಆಯ್ಕೆಯಾಗಿರಲಿದೆ. ಇದು ಲೈಫ್ ಸ್ಟೈಲ್ ಗಾಡಿಯ ಕೊರತೆಯನ್ನು ನೀಗಿಸಲಿದೆ.

ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಸಾಹಸ ಉಪಯುಕ್ತ ವಾಹನ ಬಿಡುಗಡೆ

ಏಕಕಾಲಕ್ಕೆ ಆಫರ್ ರೋಡ್ ಸಾಮರ್ಥ್ಯ ಮತ್ತು ಪ್ರಯಾಣಿಕ ಕಾರಿನ ಆರಾಮದಾಯಕೆಯನ್ನು ಕಾಪಾಡಿಕೊಳ್ಳುತ್ತಿರುವ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ದೈನಂದಿನ ಬಳಕೆಗೂ ಸೂಕ್ತವೆನಿಸಲಿದೆ.

ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಸಾಹಸ ಉಪಯುಕ್ತ ವಾಹನ ಬಿಡುಗಡೆ

ಆಕ್ರಮಣಕಾರಿ ವಿನ್ಯಾಸ ನೀತಿಯನ್ನು ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ವಾಹನದಲ್ಲಿ ಅನುಸರಿಸಲಾಗಿದೆ. ಇದರ ಚಾಸೀಯನ್ನು ಸಂಸ್ಥೆಯ ಐಗ್ರಿಪ್ ತಂತ್ರಜ್ಞಾನದ (Isuzu Gravity Response Intelligent Platform) ತಳಹದಿಯಲ್ಲಿ ನಿರ್ಮಿಸಲಾಗಿದ್ದು, ಕಡಿದಾದ ತಿರುವುಗಳಲ್ಲೂ ಅತ್ಯುತ್ತಮ ಸ್ಥಿರತೆ ಪ್ರದಾನ ಮಾಡಲಿದೆ.

ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಸಾಹಸ ಉಪಯುಕ್ತ ವಾಹನ ಬಿಡುಗಡೆ

ವಾಹನದೊಳಗೆ ಏಳು ಇಂಚುಗಳ ಮಾಹಿತಿ ಮನರಂಜನಾ ವ್ಯವಸ್ಥೆ ಜೊತೆ ಯುಎಸ್‌ಬಿ, ಡಿವಿಡಿ, ಆಕ್ಸ್, ಐಪೊಡ್, ಬ್ಲೂಟೂತ್ ಕನೆಕ್ಟಿವಿಟಿ, ಸ್ಟೀರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಆಟೋಮ್ಯಾಟಿಕ್ ಎಸಿ, ಹೊಂದಾಣಿಸಬಹುದಾದ ಸ್ಟೀರಿಂಗ್ ಮತ್ತು ಬಹು ಮಾಹಿತಿ ಪರದೆಯೊಂದಿಗೆ ಎಲೆಕ್ಟ್ರೊ ಲ್ಯೂಮಿನ್ಸೆಂಟ್ ಮೀಟರ್ ವ್ಯವಸ್ಥೆಗಳಿರಲಿದೆ.

ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಸಾಹಸ ಉಪಯುಕ್ತ ವಾಹನ ಬಿಡುಗಡೆ

ಗ್ರಾಹಕರಿಗೆ ತಮ್ಮ ಬೇಡಿಕೆಗಳಂತೆ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ವಾಹನವನ್ನು ಮಾರ್ಪಾಡುಗೊಳಿಸುವ ಅವಕಾಶವನ್ನು ನೀಡಲಾಗಿದೆ.

ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಸಾಹಸ ಉಪಯುಕ್ತ ವಾಹನ ಬಿಡುಗಡೆ

ಇನ್ನು ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, ಎಬಿಎಸ್, ಇಬಿಡಿ, ಬ್ರೇಕ್ ಅಸಿಸ್ಟ್ ಮುಂತಾದ ಸೇವೆಗಳಿರಲಿದೆ.

ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ ಸಾಹಸ ಉಪಯುಕ್ತ ವಾಹನ ಬಿಡುಗಡೆ

ಅಂದ ಹಾಗೆ 2.5 ಲೀಟರ್ ವಿಜಿಎಸ್ ಟರ್ಬೊ ಇಂಟರ್ ಕೂಲ್ಡ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಇಸುಝು ಡಿ-ಮ್ಯಾಕ್ಸ್ ವಿ-ಕ್ರಾಸ್ 320 ಎನ್ ಎಂ ತಿರುಗುಬಲದಲ್ಲಿ 134 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಡ್ಯುಯಲ್ ಟೈಪ್ ಫೋರ್ ವೀಲ್ ಡ್ರೈವ್ (ಶಿಫ್ಟ್-ಆನ್-ಫ್ಲೈ) ಮೋಡ್ ನೊಂದಿಗೆ ಐದು ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಳವಡಿಸಲಾಗಿದೆ.

Most Read Articles

Kannada
Read more on ಇಸುಝು isuzu
English summary
Isuzu Launches D-Max V-Cross At Introductory Price Of Rs. 12.49 Lakh
Story first published: Tuesday, May 10, 2016, 17:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X