ಐಷಾರಾಮಿ 2016 ಜಾಗ್ವಾರ್ ಎಕ್ಸ್‌ಜೆ ಭಾರತಕ್ಕೆ ಎಂಟ್ರಿ
ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಬ್ರಿಟನ್ ಮೂಲದ ಐಕಾನಿಕ್ ಜಾಗ್ವಾರ್ ಸಂಸ್ಥೆಯು ಭಾರತ ಮಾರುಕಟ್ಟೆಯಲ್ಲಿ ಅತಿ ನೂತನ 2016 ಎಕ್ಸ್‌ಜೆ ಕಾರನ್ನು ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 98.03 ಲಕ್ಷ ರು. (ಎಕ್ಸ್ ಶೋ ರೂಂ ಮುಂಬೈ)
ಹಿಂದಿನ ಮಾದರಿಗೆ ಹೋಲಿಸಿದಾಗ ಹೊಸ 2016 ಜಾಗ್ವಾರ್ ಎಕ್ಸ್‌ಜೆ ಮಾದರಿಯು ಹಲವಾರು ನಾವೀನ್ಯ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ.

ನೂತನ 2016 ಜಾಗ್ವಾರ್ ಎಕ್ಸ್‌ಜೆ ಐಷಾರಾಮಿ ಸೆಡಾನ್ ಕಾರು ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇದರ ಫೋರ್ ಸಿಲಿಂಡರ್ ಪೆಟ್ರೋಲ್ ಎಂಜಿನ್ 236.71 ಅಶ್ವಶಕ್ತಿ (340 ಎನ್‌ಎಂ ತಿರುಗುಬಲ) ಉತ್ಪಾದಿಸಲಿದ್ದು, ಗಂಟೆಗೆ ಗರಿಷ್ಠ 241 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.
ಅದೇ ರೀತಿ 3.0 ಲೀಟರ್ ವಿ6 ಡೀಸೆಲ್ ಎಂಜಿನ್ 700 ಎನ್‌ಎಂ ತಿರುಗುಬಲದಲ್ಲಿ 295.89 ಅಶ್ವಶಕ್ತಿಯನ್ನು ಉತ್ಪಾದಿಸಲಿದ್ದು, ಗಂಟೆಗೆ 250 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ.
ಇನ್ನುಳಿದಂತೆ ಹೊಸತಾದ ಟಿಎಫ್‌ಟಿ ಇನ್ಸ್ರುಮೆಂಟ್ ಪ್ಯಾನೆಲ್ ನಲ್ಲಿ ಇಂಧನ, ತಾಪಮಾನ, ವೇಗ ಜೊತೆಗೆ ಇನ್ನಿತರ ಎಂಜಿನ್ ಗೆ ಸಂಬಂಧಪಟ್ಟ ಮಾಹಿತಿಯನ್ನು ಚಾಲನೆ ವೇಳೆಯಲ್ಲಿ ಕಲೆ ಹಾಕಬಹುದಾಗಿದೆ. ಇವೆಲ್ಲದರ ಜೊತೆಗೆ ಇನ್ ಕಂಟ್ರೋಲ್ ಟಚ್ ಪ್ರೊ ಇನ್ಪೋಟೈನ್ಮೆಂಟ್ ಸಿಸ್ಟಂ ಇರಲಿದೆ.
ಅಂತೆಯೇ ಕಾರಿನೊಳಗೆ ಲೆಥರ್ ಹೋದಿಕೆ ಸೀಟುಗಳನ್ನು ಲಗತ್ತಿಸಲಾಗಿದೆ. ಸುರಕ್ಷತೆಗೂ ಹೆಚ್ಚಿನ ಪ್ರಾಧಾನ್ಯತೆ ಕೊಡಲಾಗಿದ್ದು, ಸರ್ಫೆಸ್ ಪ್ರೊಗ್ರೊಸ್ ಕಂಟ್ರೋಲ್, ಪಾರ್ಕಿಂಗ್ ಅಸಿಸ್ಟನ್ಸ್, ಅಡಾಪ್ಟಿವ್ ಡೈನಾಮಿಕ್ ಸಿಸ್ಟಂ ಹಾಗೂ 360 ಡಿಗ್ರಿ ಪಾರ್ಕ್ ಡಿಸ್ಟಾನ್ಸ್ ಕಂಟ್ರೋಲ್ ಸೇವೆಗಳಿರಲಿದೆ.


Click it and Unblock the Notifications


















