ಕೊನೆಗೂ ಐಕಾನಿಕ್ ಜೀಪ್ ಬ್ರಾಂಡ್ ಭಾರತಕ್ಕೆ

By Nagaraja

ಬಹಳ ವರ್ಷಗಳ ಕಾಯುವಿಕೆಯ ಬಳಿಕ ಕೊನೆಗೂ ಇಟಲಿಯ ಪ್ರತಿಷ್ಠಿತ ಫಿಯೆಟ್ ಕ್ರೈಸ್ಲರ್ ಅಧೀನತೆಯಲ್ಲಿರುವ ಐಕಾನಿಕ್ ಜೀಪ್ ಬ್ರಾಂಡ್ ಭಾರತಕ್ಕೆ ಕಾಲಿರಿಸುತ್ತಿದೆ.

ದೇಶದಲ್ಲಿ ನಡೆಯಲಿರುವ ಅತಿ ದೊಡ್ಡ ವಾಹನ ಪ್ರದರ್ಶನ ಮೇಳ 2016 ಆಟೋ ಎಕ್ಸ್ ಪೋದಲ್ಲಿ ಜೀಪ್ ಐಷಾರಾಮಿ ಕ್ರೀಡಾ ಬಳಕೆಯ ವಾಹನಗಳು (ಎಸ್‌ಯುವಿ) ಭರ್ಜರಿ ಪಾದಾರ್ಪಣೆ ಮಾಡಲಿದೆ.

ಜೀಪ್


ಜೀಪ್ ಶ್ರೇಣಿಯ ಎಲ್ಲ ವಾಹನಗಳು ಇಂಡಿಯನ್ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಳ್ಳಲಿದೆ. ಇವುಗಳಲ್ಲಿ ಜೀಪ್ ಗ್ರಾಂಡ್ ಕೆರೊಕಿ ಹಾಗೂ ವ್ರ್ಯಾಂಗ್ಲರ್ ಪ್ರಮುಖ ಮಾದರಿಗಳಾಗಿದೆ.

ಆರಂಭದಲ್ಲಿ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಸಿದ್ಧಾಂತದ ಮುಖಾಂತರ ಭಾರತವನ್ನು ತಲುಪಲಿರುವ ಜೀಪ್ ಬ್ರಾಂಡ್ ತದಾ ಬಳಿಕ ದೇಶದಲ್ಲೇ ಸ್ಥಳೀಯವಾಗಿ ಜೋಡಣೆಯಾಗಲಿದೆ. ಅಲ್ಲದೆ ನಿಕಟ ಭವಿಷ್ಯದಲ್ಲೇ ಮತ್ತಷ್ಟು ದೃಢಕಾಯದ ವಾಹನಗಳನ್ನು ಜೀಪ್ ಪರಿಚಯಿಸಲಿದೆ.


ಇತ್ತೀಚೆಗಷ್ಟೇ ಜೀಪ್ ಮಾದರಿಗಳನ್ನು ಬೆಂಗಳೂರಿನಲ್ಲಿ ವಿಶೇಷ ಪ್ರದರ್ಶನ ನಡೆಸಿತ್ತಲ್ಲದೆ ಗ್ರಾಹಕರಿಗೆ ಹತ್ತಿರದಿಂದ ಅರಿಯುವ ಪ್ರಯತನ್ನ ಮಾಡಲಾಗಿತ್ತು. ಒಟ್ಟಾರೆಯಾಗಿ ವಾಹನ ಪ್ರೇಮಿಗಳ ದೀರ್ಘ ಕಾಲದ ಕಾಯುವಿಕೆಗೆ ಕೊನೆಗೂ ವಿರಾಮ ದೊರಕುವಂತಾಗಿದೆ.

More from DriveSpark

Article Published On: Saturday, January 23, 2016, 11:54 [IST]
English summary
Jeep Brand Introduction In India On February 3, 2016
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+