ಜೀಪ್ ಆಗಮನಕ್ಕೆ ಕಾಲ ಸನ್ನಿಹಿತ; ವೆಬ್‌ಸೈಟ್‌ ಲೈವ್, 3 ಮಾಡೆಲ್ ಪ್ರತ್ಯಕ್ಷ!

Written By:

ಕಳೆದ ಕೆಲವಾರು ವರ್ಷಗಳಿಂದ ಅತಿ ಹೆಚ್ಚು ಚರ್ಚೆಗೆ ಈಡಾಗಿರುವ ಐಕಾನಿಕ್ ಜೀಪ್ ಬ್ರ್ಯಾಂಡ್ ಭಾರತಕ್ಕೆ ಯಾವಾಗ ಪ್ರವೇಶವಾಗಲಿದೆ ಎಂಬುದಕ್ಕೆ ಕೊನೆಗೂ ಉತ್ತರ ಲಭ್ಯವಾಗತೊಡಗಿದೆ.

ಕಾಲ ಮಿಂಚಿ ಹೋಗಿಲ್ಲ. ಬಹುನಿರೀಕ್ಷಿತ ಜೀಪ್ ಬ್ರ್ಯಾಂಡ್ 2016ನೇ ಸಾಲಿನಲ್ಲೇ ಭಾರತದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಪೂರಕವೆಂಬಂತೆ ಜೀಪ್ ಇಂಡಿಯಾ ವೆಬ್ ಸೈಟ್ ಜೊತೆಗೆ ಮೂರು ಅತ್ಯಾಕರ್ಷಕ ಮಾಡೆಲ್ ಗಳು ಪ್ರತ್ಯಕ್ಷಗೊಂಡಿದೆ.

ಜೀಪ್ ಆಗಮನಕ್ಕೆ ಕಾಲ ಸನ್ನಿಹಿತ; ವೆಬ್‌ಸೈಟ್‌ ಲೈವ್, 3 ಮಾಡೆಲ್ ಪ್ರತ್ಯಕ್ಷ!

ಬಲ್ಲ ಮೂಲಗಳ ಪ್ರಕಾರ ಜೀಪ್ ಬ್ರ್ಯಾಂಡ್ 2016 ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಭಾರತಕ್ಕೆ ಭರ್ಜರಿ ಪ್ರವೇಶ ಪಡೆಯಲಿದೆ.

ಜೀಪ್ ಆಗಮನಕ್ಕೆ ಕಾಲ ಸನ್ನಿಹಿತ; ವೆಬ್‌ಸೈಟ್‌ ಲೈವ್, 3 ಮಾಡೆಲ್ ಪ್ರತ್ಯಕ್ಷ!

ಪ್ರಸ್ತುತ ಜೀಪ್ ಇಂಡಿಯಾ ವೆಬ್ ಸೈಟ್ ತೆರೆದುಕೊಂಡಿರುವ ಸಂಸ್ಥೆಯು ಗ್ರ್ಯಾಂಡ್ ಕೆರೊಕೆ, ಗ್ರ್ಯಾಂಡ್ ಕೆರೊಕೆ ಎಸ್‌ಆರ್‌ಟಿ ಮತ್ತು ವ್ರ್ಯಾಂಗ್ಲರ್ ಮಾದರಿಗಳ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಿದೆ.

ಜೀಪ್ ಆಗಮನಕ್ಕೆ ಕಾಲ ಸನ್ನಿಹಿತ; ವೆಬ್‌ಸೈಟ್‌ ಲೈವ್, 3 ಮಾಡೆಲ್ ಪ್ರತ್ಯಕ್ಷ!

2016 ಆಟೋ ಎಕ್ಸ್ ಪೋದಲ್ಲಿ ತನ್ನೆಲ್ಲ ಶ್ರೇಣಿಯ ಮಾಡೆಲ್ ಗಳನ್ನು ಅನಾವರಣಗೊಳಿಸುವುದು ಇರಾದೆಯಾಗಿದೆ. ಭಾರತದ ಜೀಪ್ ಬ್ರ್ಯಾಂಡ್ ವೆಬ್ ಸೈಟ್ ಗೆ ಇಲ್ಲಿ ಕ್ಲಿಕ್ಕಿಸುವ ಮೂಲಕ ತೆರಳಬಹುದಾಗಿದೆ.

ಜೀಪ್ ಆಗಮನಕ್ಕೆ ಕಾಲ ಸನ್ನಿಹಿತ; ವೆಬ್‌ಸೈಟ್‌ ಲೈವ್, 3 ಮಾಡೆಲ್ ಪ್ರತ್ಯಕ್ಷ!

ಇದೇ ಸಂದರ್ಭದಲ್ಲಿ ತನ್ನ ಸಾಮಾಜಿಕ ಸಾನಿಧ್ಯವನ್ನು ಗಟ್ಟಿ ಪಡಿಸಲು ಹೊರಟಿರುವ ಜೀಪ್ ಫೇಸ್ ಬುಕ್ ಹಾಗೂ ಟ್ವಿಟರ್ ಜೊತೆಗೆ ಇನ್‌ಸ್ಟಾಗ್ರಾಂ ಪುಟಗಳನ್ನು ತೆರೆದುಕೊಂಡಿದೆ.

ಜೀಪ್ ಆಗಮನಕ್ಕೆ ಕಾಲ ಸನ್ನಿಹಿತ; ವೆಬ್‌ಸೈಟ್‌ ಲೈವ್, 3 ಮಾಡೆಲ್ ಪ್ರತ್ಯಕ್ಷ!

ಫಿಯೆಟ್ ಕ್ರೈಸ್ಲರ್ ಭಾಗವಾಗಿರುವ ಜೀಪ್ ಭಾರತಕ್ಕೆ ಕಂಪ್ಲೀಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಪ್ರವೇಶವಾಗಲಿದೆ. ಬಳಿಕ ನಿಕಟ ಭವಿಷ್ಯದಲ್ಲೇ ಭಾರತದಲ್ಲೇ ಸ್ಥಳೀಯವಾಗಿ ಜೋಡಣೆ ಮಾಡುವ ಯೋಜನೆಯನ್ನು ಹೊಂದಿದೆ.

ಜೀಪ್ ಆಗಮನಕ್ಕೆ ಕಾಲ ಸನ್ನಿಹಿತ; ವೆಬ್‌ಸೈಟ್‌ ಲೈವ್, 3 ಮಾಡೆಲ್ ಪ್ರತ್ಯಕ್ಷ!

ಇದಕ್ಕಾಗಿ ಪುಣೆ ಸಮೀಪದ ರಂಜನ್ ಗಾಂವ್ ಘಟಕಕ್ಕೆ ಬರೋಬ್ಬರಿ 280 ಮಿಲಿಯನ್ ಅಮೆರಿಕನ್ ಡಾಲರ್ ಹೂಡಿಕೆ ಮಾಡಲಿದೆ. ಪ್ರಸ್ತುತ ಘಟಕವು 2017ನೇ ಸಾಲಿನಲ್ಲಿ ತೆರೆದುಕೊಳ್ಳಲಿದೆ. ಅಲ್ಲದೆ ತನ್ನೆಲ್ಲ ಜೀಪ್ ಶ್ರೇಣಿಯ ಮಾದರಿಗಳ ಮಾರಾಟಕ್ಕೆ ಪ್ರತ್ಯೇಕ ಡೀಲರ್ ಶಿಪ್ ಜಾಲವನ್ನು ಸಂಸ್ಥೆಯು ತೆರೆದುಕೊಳ್ಳಲಿದೆ.

Read more on ಜೀಪ್ jeep
English summary
Jeep Launches Official Website Prior To India Entry
Story first published: Friday, January 1, 2016, 14:38 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark