ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ ಬಿಡುಗಡೆ

By Nagaraja

ದೇಶದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ, ಅತಿ ನೂತನ ಬಿಗ್ ಬೊಲೆರೊ ಪಿಕಪ್ ಟ್ರಕ್ ಬಿಡುಗಡೆಗೊಳಿಸಿದೆ. ಇದು ಗ್ರಾಹಕರಿಗೆ ಹಣಕ್ಕೆ ತಕ್ಕ ಮೌಲ್ಯ ನೀಡಲಿದೆ ಎಂಬುದನ್ನು ಸಂಸ್ಥೆ ಖಚಿತಪಡಿಸಿದೆ.

ಸರಕು ಸಾಗಣೆಯ ವಾಣಿಜ್ಯ ವಿಭಾಗದಲ್ಲಿ ಗುರುತಿಸಿಕೊಳ್ಳಲಿರುವ ನೂತನ ಬಿಗ್ ಬೊಲೆರೊ ಪಿಕಪ್, 15,00 ಕೆ.ಜಿ ಭಾರವನ್ನು ಹೊತ್ತೆಯ್ಯುವ ಸಾಮರ್ಥ್ಯ ಹೊಂದಿರಲಿದೆ. ಅಲ್ಲದೆ ಅಷ್ಟೇ ಸ್ಟೈಲಿಷ್ ಮತ್ತು ಆರಾಮದಾಯಕ ಕ್ಯಾಬಿನ್ ಜಾಗ ಪಡೆದಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

  • ಬಿಗ್ ಬೊಲೆರೊ ಪಿಕಪ್ (BS-3): 6.15 ಲಕ್ಷ ರು.
  • ಬಿಗ್ ಬೊಲೆರೊ ಪಿಕಪ್ (BS-4): 6.30 ಲಕ್ಷ ರು.
  • ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ ಬಿಡುಗಡೆ

    2016 ಆರ್ಥಿಕ ಸಾಲಿನಲ್ಲಿ ಪಿಕಪ್ ವಿಭಾಗದಲ್ಲಿ ಶೇಕಡಾ 69 ಮಾರುಕಟ್ಟೆ ವಶಪಡಿಸಿಕೊಂಡಿರುವ ಮಹೀಂದ್ರ, ಸೆಗ್ಮೆಂಟ್ ಲೀಡರ್ ಎನಿಸಿಕೊಂಡಿದೆ. ಅಲ್ಲದೆ ನೂತನ ಬಿಗ್ ಬೊಲೆರೊ ಪಿಕಪ್ ಮುಖಾಂತರ ತನ್ನ ಸಾನಿಧ್ಯವನ್ನು ಮತ್ತಷ್ಟು ವಿಸ್ತರಿಸುವ ಇರಾದೆಯಲ್ಲಿದೆ.

    ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ ಬಿಡುಗಡೆ

    ಫೋರ್ ವೀಲ್ ಡ್ರೈವ್, ಸಿಬಿಸಿ (Cowl Body chassis) , ಮೈಕ್ರೊ ಹೈಬ್ರಿಡ್ ತಂತ್ರಜ್ಞಾನ, ಎಸಿ ಪಿಕಪ್, ಸಿಎನ್ ಜಿ ಪಿಕಪ್ ಮುಂತಾದ ನಾವೀನ್ಯ ತಂತ್ರಗಾರಿಕೆಗಳನ್ನು ಒದಗಿಸಿರುವ ಮಹೀಂದ್ರ ಈಗ ದೇಶದ ವ್ಯಾಪಾರಿಗಳಿಗೆ ಮಗದೊಂದು ಆಕರ್ಷಕ ಪಿಕಪ್ ಪರಿಚಯಿಸಿದೆ.

    ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ ಬಿಡುಗಡೆ

    ನೂತನ ಬಿಗ್ ಬೊಲೆರೊ ಪಿಕಪ್ ಎರಡು ವೆರಿಯಂಟ್ ಗಳಲ್ಲಿ ಲಭ್ಯವಾಗಲಿದೆ. ಅವುಗಳೆಂದರೆ 1250 ಕೆಜಿ ಮತ್ತು 1500 ಕೆ.ಜಿ ವಿಭಾಗದಲ್ಲಿ ದೊರಕಲಿದೆ.

    ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ ಬಿಡುಗಡೆ

    ನೂತನ ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್, ಎಂಡಿಐ ಟರ್ಬೊ ಚಾರ್ಜ್ಡ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, ಭಾರತ್ ಸ್ಟೇಜ್ 3 ಮತ್ತು ಭಾರತ್ ಸ್ಟೇಜ್ 4 ವೆರಿಯಂಟ್ ಗಳು ಅನುಕ್ರಮವಾಗಿ 63 ಮತ್ತು 70 ಅಶ್ವಶಕ್ತಿಗಳನ್ನು ಉತ್ಪಾದಿಸಲಿದೆ.

    ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ ಬಿಡುಗಡೆ

    ಅತ್ಯುನ್ನತ್ತ ನಿರ್ವಹಣೆ, ಸ್ಟೈಲಿಷ್ ಕ್ಯಾಬಿನ್, ಪವರ್ ಸ್ಟೀರಿಂಗ್ ಮತ್ತು ಕಡಿಮೆ ನಿರ್ವಹಣಾ ವೆಚ್ಚವು ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ ನ ಪ್ರಮುಖ ಆಕರ್ಷಣೆಯಾಗಿರಲಿದೆ.

    ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ ಬಿಡುಗಡೆ

    ಮುಂಬೈಯಲ್ಲಿರುವ ಮಹೀಂದ್ರದ ಕಂಡಿವಲಿ ಘಟಕದಲ್ಲಿ ನೂತನ ಬಿಗ್ ಬೊಲೆರೊ ಪಿಕಪ್ ಟ್ರಕ್ ನಿರ್ಮಾಣವಾಗಲಿದೆ. ಇದು ಒಂಬತ್ತು ಅಡಿ ಉದ್ದ ವಿಭಾಗದಲ್ಲಿ ಗುರುತಿಸಿಕೊಂಡಿದೆ.

    ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ ಬಿಡುಗಡೆ

    ಹೊರಮೈಯಲ್ಲಿ ಬಹು ಪ್ರತಿಫಲಕ ಹೆಡ್ ಲ್ಯಾಂಪ್, ಮಹೀಂದ್ರ ಸಿಗ್ನೇಚರ್ ಗ್ರಿಲ್, ಸ್ಟೈಲಿಷ್ ಮೆಟ್ಯಾಲಿಕ್ ಬಂಪರ್, ಮಾಚೊ ಲುಕ್, ತುಕ್ಕು ಹಿಡಿಯುವುದನ್ನು ತಡೆಯಬಹುದಾದ ಕ್ಯಾಥೋಡಿಕ್ ಎಳೆಕ್ಟ್ರೊ ಡಿಪೊಸಿಷನ್ ಬಣ್ಣ ತಂತ್ರಜ್ಞಾನ ಮುಂತಾದ ಸೌಲಭ್ಯಗಳನ್ನು ಒದಗಿಸಲಾಗಿದೆ.

    ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ ಬಿಡುಗಡೆ

    ಕಾರಿನೊಳಗೆ ಪವರ್ ಸ್ಟೀರಿಂಗ್, ಕಡಿಮೆ ಟರ್ನಿಂಗ್ ರೇಡಿಯಸ್, ಬಕೆಟ್ ಸೀಟು, ಹೆಡ್ ರೆಸ್ಟ್, ಮ್ಯಾಗಜಿನ್ ಪಾಕೆಟ್, ಮೊಬೈಲ್ ಹೋಲ್ಡರ್, ಚಾರ್ಜಿಂಗ್ ಪಾಯಿಂಟ್, ತೊಳೆಯಬಹುದಾದ ಫ್ಲೋರ್ ಮ್ಯಾಟ್ ಮತ್ತು ಎಳೆಕ್ಟ್ರಾನಿಕ್ ಲಾಕ್ ರಿಟ್ರ್ಯಾಕ್ಟರ್ ಮುಂತಾದ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ.

    ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ ಬಿಡುಗಡೆ

    ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ 195 ಎನ್ ಎಂ ತಿರುಗುಬಲವನ್ನು ನೀಡಲಿದ್ದು, ಪ್ರತಿ ಲೀಟರ್ ಗೆ 13 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರಲಿದೆ.

    ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ ಬಿಡುಗಡೆ

    ಖರೀದಿ ನಂತರದ ನಿರ್ವಹಣಾ ವೆಚ್ಚವು ಕಡಿಮೆಯಾಗಿದ್ದು, 10,000 ಕೀ.ಮೀ. ಬಳಿಕವಷ್ಟೇ ಒಯಿಲ್ ಮತ್ತು 40,000 ಕೀ.ಮೀ. ಬಳಿಕವಷ್ಟೇ ಗೇರ್ ಒಯಿಲ್ ಬದಲಾಯಿಸಿದರೆ ಸಾಕಾಗುತ್ತದೆ. ಅಲ್ಲದೆ ಮೂರು ವರ್ಷಗಳ ಅನಿಯಮಿತ ಕೀ.ಮೀ.ಗಳ ವಾರಂಟಿಯನ್ನು ನೀಡಲಾಗುತ್ತಿದೆ. ಬಿಡಿ ಭಾಗಗಳು ಸಹ ಮಾರುಕಟ್ಟೆಯಲ್ಲಿ ಹೇರಳವಾಗಿ ಲಭ್ಯವಿರುತ್ತದೆ.

    ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಟ್ರಕ್ ಬಿಡುಗಡೆ

    ಮಹೀಂದ್ರ ಬಿಗ್ ಬೊಲೆರೊ ಪಿಕಪ್ ಶ್ರೇಣಿಯು ಟು ವೀಲ್ ಫ್ಲ್ಯಾಟ್ ಬೆಡ್ ಮತ್ತು ಸಿಬಿಸಿ ಮಾಡೆಲ್ ಗಳಲ್ಲಿ ಲಭ್ಯವಿರುತ್ತದೆ. ಅಂತೆಯೇ ಫೋರ್ ವೀಲ್ ಡ್ರೈವ್ ವೆರಿಯಂಟ್ ನಿಕಟ ಭವಿಷ್ಯದಲ್ಲೇ ತಲುಪಲಿದೆ. ಇದು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಆಯ್ಕೆ ಮಾಡಲು ನೆರವಾಗಲಿದೆ.

More from DriveSpark

Article Published On: Thursday, April 28, 2016, 16:03 [IST]
English summary
Mahindra Launches All New Big Bolero Pickup; Priced At Rs. 6.30 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+