ಆಟೋ ಎಕ್ಸ್ ಪೋದಲ್ಲಿ ಕಣ್ಮರೆಯಾದ ಕ್ವಾಂಟೊ ಬಿಡುಗಡೆ ಯಾವಾಗ?

By Nagaraja

ನವದೆಹಲಿಯಲ್ಲಿ ಇತ್ತೀಚೆಗಷ್ಟೇ ಸಾಗಿದ ಭಾರತದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳ 2016 ಆಟೋ ಎಕ್ಸ್ ಪೋದಲ್ಲಿ ದೇಶದ ಮುಂಚೂಣಿಯ ವಾಹನ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ, ಅತಿ ನೂತನ ಕ್ವಾಂಟೊ ಪ್ರದರ್ಶಿಸುವ ಬಗ್ಗೆ ನಿರೀಕ್ಷೆಯನ್ನು ಹೊಂದಲಾಗಿತ್ತು.

2016 ಆಟೋ ಎಕ್ಸ್ ಪೋ ವಿಶೇಷ ಪುಟ

ಆದರೆ ಎಲ್ಲ ವಾಹನ ಪ್ರೇಮಿಗಳನ್ನು ಅಚ್ಚರಿಗೊಳಿಸಿರುವ ಕ್ವಾಂಟೊ ಪ್ರದರ್ಶನದಿಂದ ಬಿಟ್ಟು ನಿಂತಿತ್ತು. ಇದು ಈ ಉಪಯುಕ್ತ ವಾಹನದ ಭಾರತ ಪ್ರವೇಶದ ಬಗ್ಗೆ ಆತಂಕಗಳು ಮೂಡಿಸುವಲ್ಲಿ ಹೇತುವಾಗಿದೆ.

ಅತಿ ಶೀಘ್ರದಲ್ಲೇ ಪರಿಷ್ತೃತ ಕ್ವಾಂಟೊ ಬಿಡುಗಡೆ

ಬಲ್ಲ ಮೂಲಗಳ ಪ್ರಕಾರ 2016 ಆಟೋ ಎಕ್ಸ್ ಪೋದಿಂದ ಬಿಟ್ಟು ನಿಂತರೂ ಪರಿಷ್ಕೃತ ಕ್ವಾಂಟೊ ಅತಿ ಶೀಘ್ರದಲ್ಲೇ ಅಂದರೆ ಮಾರ್ಚ್ ವೇಳೆಯಾಗುವಾಗ ಬಿಡುಗಡೆ ಭಾಗ್ಯ ಕಾಣಲಿದೆ.

ಅತಿ ಶೀಘ್ರದಲ್ಲೇ ಪರಿಷ್ತೃತ ಕ್ವಾಂಟೊ ಬಿಡುಗಡೆ

ತನ್ನೆಲ್ಲ ಶ್ರೇಣಿಯ ವಾಹನಗಳನ್ನು ಒಂದರ ಬಳಿಕ ಒಂದರಂತೆ ಪರಿಷ್ಕೃತಗೊಳಿಸುವ ಇರಾದೆಯಲ್ಲಿರುವ ಮಹೀಂದ್ರ ಸಂಸ್ಥೆಯೀಗ ಕ್ವಾಂಟೊದತ್ತ ಗಮನ ಕೇಂದ್ರಿಕರಿಸಿದೆ.

ಅತಿ ಶೀಘ್ರದಲ್ಲೇ ಪರಿಷ್ತೃತ ಕ್ವಾಂಟೊ ಬಿಡುಗಡೆ

ಮಾರುಕಟ್ಟೆ ಪರಿಸ್ಥಿತಿ ಅವಲೋಕಿಸಿದಾಗ ಕ್ವಾಂಟೊ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನಕ್ಕೆ ಬದಲಾವಣೆ ಅವಶ್ಯಕವೆನಿಸಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಹೆಚ್ಚಿನ ಮಾರಾಟವನ್ನು ಗುರಿಯಿರಿಸಿಕೊಂಡಿರುವ ಸಂಸ್ಥೆಯು ಬಹುಬೇಗನೇ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಲಿದೆ.

ಅತಿ ಶೀಘ್ರದಲ್ಲೇ ಪರಿಷ್ತೃತ ಕ್ವಾಂಟೊ ಬಿಡುಗಡೆ

ಇದರಂತೆ ಈಗಾಗಲೇ ಟೆಸ್ಟಿಂಗ್ ವೇಳೆ ಹಲವಾರು ಬಾರಿ ಕ್ಯಾಮೆರಾಗಳ ರಹಸ್ಯ ಕಣ್ಣುಗಳಿಗೆ ಸೆರೆ ಸಿಕ್ಕಿವೆ. ಇದರೊಂದಿಗೂ ನಿರೀಕ್ಷೆಯೂ ಹೆಚ್ಚಾಗಿದೆ.

ಅತಿ ಶೀಘ್ರದಲ್ಲೇ ಪರಿಷ್ತೃತ ಕ್ವಾಂಟೊ ಬಿಡುಗಡೆ

ನೂತನ ಕ್ವಾಂಟೊದಲ್ಲಿ ಎಂಹಾಕ್80 ಎಂಜಿನ್ ಬಳಕೆಯಾಗಲಿದೆ. ಇದರ 1.3 ಲೀಟರ್ ಡೀಸೆಲ್ ತ್ರಿ ಸಿಲಿಂಡರ್ ಎಂಜಿನ್ 230 ಎನ್ ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ 5 ಸ್ಪೀಡ್ ಜೊತೆಗೆ ಎಎಂಟಿ ಗೇರ್ ಬಾಕ್ಸ್ ಇರಲಿದೆ.

ಅತಿ ಶೀಘ್ರದಲ್ಲೇ ಪರಿಷ್ತೃತ ಕ್ವಾಂಟೊ ಬಿಡುಗಡೆ

ಇನ್ನು ವಿನ್ಯಾಸದ ಬಗ್ಗೆ ಮಾತನಾಡುವುದಾದ್ದಲ್ಲಿ ಕಳೆದ ಕೆಲವು ಸಮಯಗಳಲ್ಲಿ ಬಿಡುಗಡೆಯಾಗಿರುವ ಟಿಯುವಿ300 ಮತ್ತು ಕೆಯುವಿ100 ಮಾದರಿಯಿಂದಲೂ ವಿನ್ಯಾಸ ಆಮದು ಮಾಡಿಕೊಳ್ಳಲಾಗುವುದು. ಇದು ತಾಜಾತನ ಕಾಪಾಡಿಕೊಳ್ಳಲು ನೆರವಾಗಲಿದೆ.

ಅತಿ ಶೀಘ್ರದಲ್ಲೇ ಪರಿಷ್ತೃತ ಕ್ವಾಂಟೊ ಬಿಡುಗಡೆ

ಹೊಸ ಮಹೀಂದ್ರ ಕ್ವಾಂಟೊ ಪುನರಾಗಮನಕ್ಕೆ ರೆಡಿ

Most Read Articles

Kannada
English summary
Mahindra Quanto Facelift Could Launch By March 2016 In India
Story first published: Wednesday, February 24, 2016, 18:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X