ತೆರೆಮರೆಯಲ್ಲಿ ಸಿದ್ಧವಾಗುತ್ತಿದೆ ಮಗದೊಂದು ಮಹೀಂದ್ರ ಕಾರು

By Nagaraja

ಇತ್ತೀಚೆಗಿನ ಕೆಲವು ತಿಂಗಳಲ್ಲಿ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯಿಂದ ಎರಡು ಆಕರ್ಷಕ ಕಾರುಗಳು ಮಾರುಕಟ್ಟೆ ಪ್ರವೇಶಿಸಿವೆ. ಅವುಗಳೆಂದರೆ,

ಮಹೀಂದ್ರ ಟಿಯುವಿ300 ಮತ್ತು ಕೆಯುವಿ100

ಈ ಪೈಕಿ ಮಹೀಂದ್ರ ಟಿಯುವಿ100 ಕಳೆದ ವರ್ಷಾಂತ್ಯದಲ್ಲಿ ಮಾರುಕಟ್ಟೆ ಪ್ರವೇಶಿಸಿದ್ದಲ್ಲಿ ಕೆಯುವಿ100 ಹೊಸ ವರ್ಷದ ಕೊಡುಗೆಯಾಗಿ ಮಾರುಕಟ್ಟೆಯನ್ನು ತಲುಪಿತ್ತು. ಈ ನಡುವೆ ತೆರೆಮರೆಯಲ್ಲಿ ಮಗದೊಂದು ಆಕರ್ಷಕ ಕಾರಿನ ನಿರ್ಮಾಣದಲ್ಲಿ ಮಹೀಂದ್ರ ತೊಡಗಿಸಿಕೊಂಡಿದೆ. ಅದು ಯಾವುದೆಂಬುದು ಗೊತ್ತೇ? ಮಾಹಿತಿಗಾಗಿ ನಮ್ಮ ಚಿತ್ರಪುಟದತ್ತ ಮುಂದುವರಿಯಿರಿ.

ಪರಿಷ್ಕೃತ ಮಹೀಂದ್ರ ಕ್ವಾಂಟೊ ಟೆಸ್ಟಿಂಗ್ ವೇಳೆ ಪತ್ತೆ

ಈ ಬಾರಿ ಮಹೀಂದ್ರ ಸಂಸ್ಥೆಯು ಪರಿಷ್ಕೃತ ಕ್ವಾಂಟೊ ಬಿಡುಗಡೆ ಮಾಡುವ ತಯಾರಿಯಲ್ಲಿದೆ. ಇದರ ಸಿದ್ಧತೆಯು ಭರದಿಂದ ಸಾಗುತ್ತಿದ್ದು, ಪುಣೆಯಲ್ಲಿ ಟೆಸ್ಟಿಂಗ್ ವೇಳೆ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.

ಚಿತ್ರಕೃಪೆ: OVERDRIVE.in
ಪರಿಷ್ಕೃತ ಮಹೀಂದ್ರ ಕ್ವಾಂಟೊ ಟೆಸ್ಟಿಂಗ್ ವೇಳೆ ಪತ್ತೆ

ಇಲ್ಲಿ ಗಮನಾರ್ಹ ಅಂಶವೆಂದರೆ ಪರಿಷ್ಕೃತ ಕ್ವಾಂಟೊ ಹೊಸ ನಾಮಕರಣವನ್ನು ಪಡೆಯಲಿದೆ. ಅಂದರೆ ಮಹೀಂದ್ರ ಕ್ಯಾಂಟೊ ಅಥವಾ ಕ್ರೆಸ್ಟೊ ಎಂದು (Mahindra Canto or the Mahindra Cresto) ಹೆಸರಿಸಿಕೊಳ್ಳಲಿದೆ.

ಚಿತ್ರಕೃಪೆ: OVERDRIVE.in
ಪರಿಷ್ಕೃತ ಮಹೀಂದ್ರ ಕ್ವಾಂಟೊ ಟೆಸ್ಟಿಂಗ್ ವೇಳೆ ಪತ್ತೆ

ಮುಂದಿನ ತಿಂಗಳಾರಂಭದಲ್ಲಿ ನವದೆಹಲಿಯಲ್ಲಿ ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ನೂತನ ಕ್ವಾಂಟೊ ಪ್ರದರ್ಶನಗೊಳ್ಳುವ ಸಾಧ್ಯತೆಗಳಿವೆ.

ಚಿತ್ರಕೃಪೆ: OVERDRIVE.in
ಪರಿಷ್ಕೃತ ಮಹೀಂದ್ರ ಕ್ವಾಂಟೊ ಟೆಸ್ಟಿಂಗ್ ವೇಳೆ ಪತ್ತೆ

ಪರಿಷ್ಕೃತ ಫ್ರಂಟ್ ಗ್ರಿಲ್, ಎಸ್‌ಯುವಿ ತರಹದ ರಸ್ತೆ ಸಾನಿಧ್ಯ, ಪರಿಷ್ಕೃತ ಹೆಡ್ ಲೈಟ್ ಜೊತೆಗೆ ಕಾರಿನೊಳಗೆ ಬದಲಾವಣೆಗಳನ್ನು ಪಡೆದುಕೊಳ್ಳಲಿದೆ.

ಚಿತ್ರಕೃಪೆ: OVERDRIVE.in

ಪರಿಷ್ಕೃತ ಮಹೀಂದ್ರ ಕ್ವಾಂಟೊ ಟೆಸ್ಟಿಂಗ್ ವೇಳೆ ಪತ್ತೆ

ಇನ್ನು ಮಹೀಂದ್ರ ಟಿಯುವಿ300 ಕಾರಿನಲ್ಲಿ ಕಾಣಿಸಿರುವುದಕ್ಕೆ ಸಮಾನವಾದ 1.5 ಲೀಟರ್ ಎಂಹಾಕ್80 ಡೀಸೆಲ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದೆ. ಇದು 230 ಎನ್‌ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಇವೆಲ್ಲದಕ್ಕೂ ಮಿಗಿಲಾಗಿ ಎಎಂಟಿ ಆವೃತ್ತಿಯು ರಸ್ತೆ ಪ್ರವೇಶ ಪಡೆಯಲಿದೆ.

ಚಿತ್ರಕೃಪೆ: OVERDRIVE.in
ಇವನ್ನೂ ಓದಿ

ಸಂಕ್ರಾಂತಿ ಕೊಡುಗೆ; ಮಹೀಂದ್ರ ಕೆಯುವಿ100 ಭರ್ಜರಿ ಬಿಡುಗಡೆ

More from DriveSpark

Article Published On: Monday, January 18, 2016, 9:26 [IST]
English summary
Mahindra Quanto Facelift Spied Testing Under Heavy Camoflauge - Images
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+