ಬರಲಿದೆ ಕೈಗೆಟುಕುವ ದರಗಳಲ್ಲಿ ಮಹೀಂದ್ರ ಎಲೆಕ್ಟ್ರಿಕ್ ಎಸ್‌ಯುವಿ
ಕ್ರೀಡಾ ಬಳಕೆಯ ವಾಹನ (ಎಸ್ ಯುವಿ) ವಿಭಾಗದಲ್ಲಿ ಪಾರುಪತ್ಯ ಸ್ಥಾಪಿಸಿರುವ ಭಾರತದ ನೆಚ್ಚಿನ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ಮಹತ್ತರ ಯೋಜನೆಗೆ ಮುಂದಾಗಿದ್ದು, ಜಗತ್ತಿನಲ್ಲೇ ಮೊದಲ ಬಾರಿಗೆ ಕೈಗೆಟುಕುವ ದರಗಳಲ್ಲಿ ಎಲೆಕ್ಟ್ರಿಕ್ ಎಸ್ ಯುವಿ ಬಿಡುಗಡೆ ಮಾಡುವ ಇರಾದೆ ವ್ಯಕ್ತಪಡಿಸಿದೆ.
ಮಹೀಂದ್ರ ಸಂಸ್ಥೆಯ ಭಾಗವಾಗಿರುವ ಮಹೀಂದ್ರ ರೇವಾ ಎಲೆಕ್ಟ್ರಿಕ್ ವಿಭಾಗವು ನೂತನ ಎಲೆಕ್ಟ್ರಿಕ್ ಕ್ರೀಡಾ ಬಳಕೆಯ ವಾಹನವನ್ನು ನಿರ್ಮಿಸಲಿದೆ. ಬಲ್ಲ ಮೂಲಗಳ ಪ್ರಕಾರ ಮಹೀಂದ್ರ ಎಲೆಕ್ಟ್ರಿಕ್ ಎಸ್ ಯುವಿ 'ಎಸ್107' ಎಂಬ ಕೋಡ್ ಪಡೆದಿದೆ.

ಇ2ಒ ಗಳಂತಹ ಸಣ್ಣ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿರುವ ಮಹೀಂದ್ರ ಹ್ಯಾಲೋ ಎಂಬ ಎಲೆಕ್ಟ್ರಿಕ್ ಕ್ರೀಡಾ ಕಾರು ಕಾನ್ಸೆಪ್ಟನ್ನು ಪ್ರದರ್ಶಿಸಿತ್ತು.

ಭವಿಷ್ಯದ ಪರ್ಯಾಯ ವಾಹಕದ ನಿಟ್ಟಿನಲ್ಲಿ ಎಲೆಕ್ಟ್ರಿಕ್ ಕಾರುಗಳು ನಿರ್ಣಾಯಕವೆನಿಸುತ್ತದೆ. ಇನ್ನೊಂದೆಡೆ ಎಲೆಕ್ಟ್ರಿಕ್ ಎಸ್ ಯುವಿ ಪ್ರವೇಶವಾದ್ದಲ್ಲಿ ನೈಜ ಚಾಲನಾ ಅನುಭವವನ್ನು ನೀಡಲಿದೆ.

ಕೆಲವು ಸಮಯಗಳ ಹಿಂದೆಯಷ್ಟೇ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಮಹೀಂದ್ರ ಕೆಯುವಿ100 ಎಲೆಕ್ಟ್ರಿಕ್ ಕ್ರೀಡಾ ಬಳಕೆಯ ವಾಹನವಾಗಲು ಸೂಕ್ತ ಆಯ್ಕೆಯಾಗಲಿದೆ. ಆದರೆ ಈ ಸಂಬಂಧ ಸಂಸ್ಥೆಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ.

ಎಲೆಕ್ಟ್ರಿಕ್ ವಿಭಾಗಕ್ಕೆ ಸಣ್ಣ ಎಸ್ ಯುವಿ ಪ್ರವೇಶದ ಕುರಿತು ಮಹೀಂದ್ರ ಖಚಿತ ಮಾಹಿತಿಯನ್ನು ನೀಡಿದೆ. ಗ್ರಾಹಕರಿಗೆ ಕೈಗೆಟುಕುವ ದರಗಳಲ್ಲಿ ಇದನ್ನು ತಲುಪಿಸುವುದು ಸಂಸ್ಥೆಯ ಗುರಿಯಾಗಿದೆ.

ಇ ವೆರಿಟೊ ದಂತಹ ವಾಹನಗಳು ಖರೀದಿಗಾರರ ವೈಯಕ್ತಿಕ ಬೇಡಿಕೆಗಳನ್ನು ಮನಗಂಡಿದೆ. ಈ ನಿಟ್ಟಿನಲ್ಲಿ ಹೆಚ್ಚೆಚ್ಚು ಎಲೆಕ್ಟ್ರಿಕ್ ವಾಹನಗಳ ನಿರ್ಮಾಣದತ್ತ ಮಹೀಂದ್ರ ವಾಲುತ್ತಿದೆ. ಇವೆಲ್ಲಕ್ಕೂ ಸರಕಾರದಿಂದಲೂ ಸೂಕ್ತ ಬೆಂಬಲವೂ ದೊರಕುವ ಅಗತ್ಯವಿದೆ.


Click it and Unblock the Notifications








