ಇನ್ನೋವಾ ಮಟ್ಟ ಹಾಕಲು ಬರುತ್ತಿದೆ ಮಹೀಂದ್ರ ಹೊಸ ಕಾರು

By Nagaraja

ಕಳೆದ ಅನೇಕ ವರ್ಷಗಳಿಂದ ಮಾರುಕಟ್ಟೆಯಲ್ಲಿ ರಾರಾಜಿಸುತ್ತಿರುವ ಟೊಯೊಟಾ ಇನ್ನೋವಾ ಮಟ್ಟ ಹಾಕಲು ಪ್ರತಿಸ್ಪರ್ಧಿಗಳು ಏನೇ ರಣತಂತ್ರ ರೂಪಿಸಿದರೂ ಯಶಸ್ಸು ಕಂಡಿರಲಿಲ್ಲ. ಪರಿಣಾಮ ಒಂದನೇ ತಲೆಮಾರಿನ ಇನ್ನೋವಾ ಬಳಿಕ ಟೊಯೊಟಾ ಸಂಸ್ಥೆಯೀಗ ಹೊಚ್ಚ ಹೊಸ ಇನ್ನೋವಾ ಕ್ರೈಸ್ಟಾ ಮಾದರಿಯನ್ನು ಪರಿಚಯಿಸಿದೆ.

ಅತ್ತ ಉಪಯುಕ್ತ ವಾಹನ ವಿಭಾಗದಲ್ಲಿ ಅತ್ಯುತ್ತಮ ಮಾರಾಟವನ್ನು ಕಾಪಾಡಿಕೊಂಡಿರುವ ದೇಶದ ನಂ.1 ಎಸ್‌ಯುವಿ ನಿರ್ಮಾಣ ಸಂಸ್ಥೆ ಮಹೀಂದ್ರ ಆಂಡ್ ಮಹೀಂದ್ರ, ಇನ್ನೋವಾಗೆ ಪ್ರತಿಸ್ಪರ್ಧಿಯೊಂದನ್ನು ರೂಪಿಸುತ್ತಿದೆ. ಇದರಂತೆ ತೆರೆಮರೆಯಲ್ಲಿ ಸಂಪೂರ್ಣ ಮರೆಮಾಚಿದ ಕಾರಿನ ಪ್ರಾಯೋಗಿಕ ಸಂಚಾರ ಪರೀಕ್ಷೆಯು ಬಹಳ ಜೋರಾಗಿ ನಡೆಯುತ್ತಿದೆ.

ಇನ್ನೋವಾ ಮಟ್ಟ ಹಾಕಲು ಬರುತ್ತಿದೆ ಮಹೀಂದ್ರ ಹೊಸ ಕಾರು

ಮಹೀಂದ್ರ ಬಿಡುಗಡೆ ಮಾಡಲಿರುವ ನೂತನ ಬಹು ಬಳಕೆಯ ವಾಹನವು 'ಟಿಯುವಿ500' ಎಂದು ಹೆಸರಿಸಿಕೊಳ್ಳುವ ಸಾಧ್ಯತೆಯಿದೆ. ಈ ಮೂಲಕ ಟಿಯುವಿ ಸರಣಿಯ ನಾಮಕರಣವನ್ನು ಸಂಸ್ಥೆಯುಮುಂದುವರಿಸಲಿದೆ.

ಇನ್ನೋವಾ ಮಟ್ಟ ಹಾಕಲು ಬರುತ್ತಿದೆ ಮಹೀಂದ್ರ ಹೊಸ ಕಾರು

ಮೊದಲ ನೋಟದಲ್ಲಿ ಎಕ್ಸ್‌ಯುವಿ500 ಕ್ರೀಡಾ ಬಳಕೆಯ ವಾಹನಕ್ಕೆ ಸಾಮತ್ಯೆಯನ್ನು ಹೊಂದಿದ್ದರೂ ಸಹ ನೂತನ ಟಿಯುವಿ500 ತನ್ನದೇ ಆದ ಆಕ್ರಮಣಕಾರಿ ವಿನ್ಯಾಸವನ್ನು ಕಾಪಾಡಿಕೊಂಡಿದೆ.

ಇನ್ನೋವಾ ಮಟ್ಟ ಹಾಕಲು ಬರುತ್ತಿದೆ ಮಹೀಂದ್ರ ಹೊಸ ಕಾರು

ಬದಿಯಿಂದಲೂ ವೀಕ್ಷಿಸಿದಾಗ ದೊಡ್ಡದಾದ ಕಾರಿನಂತೆ ಭಾಸವಾಗುತ್ತಿದೆ. ಹಾಗೆಯೇ ಕಾರಿನ ಒಳಮೈಯಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ಪಡೆದಿದೆ.

ಇನ್ನೋವಾ ಮಟ್ಟ ಹಾಕಲು ಬರುತ್ತಿದೆ ಮಹೀಂದ್ರ ಹೊಸ ಕಾರು

ಸದ್ಯ ಲಭ್ಯವಿರುವ ಮಾಹಿತಿಗಳ ಪ್ರಕಾರ ಎಕ್ಸ್ ಯುವಿ500 ಕಾರಿನಲ್ಲಿರುವುದಕ್ಕೆ ಸಮಾನವಾದ 2.2 ಡೀಸೆಲ್ ಎಂಜಿನ್ ಗಿಟ್ಟಿಸಿಕೊಳ್ಳುವ ಸಾಧ್ಯತೆಯಿದೆ. ಇದು 330 ಎನ್ ಎಂ ತಿರುಗುಬಲದಲ್ಲಿ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಇನ್ನೋವಾ ಮಟ್ಟ ಹಾಕಲು ಬರುತ್ತಿದೆ ಮಹೀಂದ್ರ ಹೊಸ ಕಾರು

ಇನ್ನುಳಿದಂತೆ ಆಲ್ ವೀಲ್ ಡ್ರೈವ್ ವ್ಯವಸ್ಥೆಯೊಂದಿಗೆ ಸಿಕ್ಸ್ ಸ್ಪೀಡ್ ಮ್ಯಾನುವಲ್ ಹಾಗೂ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ನಿರೀಕ್ಷೆ ಮಾಡಬಹುದಾಗಿದೆ.

ಇನ್ನೋವಾ ಮಟ್ಟ ಹಾಕಲು ಬರುತ್ತಿದೆ ಮಹೀಂದ್ರ ಹೊಸ ಕಾರು

ದೆಹಲಿ ಮತ್ತು ಕೇರಳದಲ್ಲಿ 2 ಲೀಟರ್ ಗಿಂತಲೂ ಮೇಲ್ಪಟ್ಟ ಡೀಸೆಲ್ ಎಂಜಿನ್ ಕಾರುಗಳನ್ನು ನಿಷೇಧಿಸಿರುವ ಹಿನ್ನಲೆಯಲ್ಲಿ ಆಯ್ದ ರಾಜ್ಯಗಳಲ್ಲಿ ಮಾತ್ರ ಇತ್ತೀಚೆಗಷ್ಟೇ ಪರಿಚಯಿಸಿರುವ ಸಂಸ್ಥೆಯ ನೂತನ 1.99 ಲೀಟರ್ ಎಂ ಹಾಕ್ ಡೀಸೆಲ್ ಎಂಜಿನ್ ಆಳವಡಿಸುವ ಸಾಧ್ಯತೆಯಿದೆ. ಇದು 320 ಎನ್ ಎಂ ತಿರುಗುಬಲದಲ್ಲಿ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಇನ್ನೋವಾ ಮಟ್ಟ ಹಾಕಲು ಬರುತ್ತಿದೆ ಮಹೀಂದ್ರ ಹೊಸ ಕಾರು

ಇನ್ನೋವಾಗಿಂತಲೂ ಕಡಿಮೆ ಬೆಲೆಗಳಲ್ಲಿ ಮಾರುಕಟ್ಟೆ ತಲುಪಲಿರುವ ಮಹೀಂದ್ರ ಎಕ್ಸ್ ಯುವಿ500 ಎಂಪಿವಿ, ಟ್ಯಾಕ್ಸಿ ಮಾರುಕಟ್ಟೆಯನ್ನು ಗುರಿ ಮಾಡಲಿದೆ.

ಚಿತ್ರ ಕೃಪೆ: gaadiwaadi

More from DriveSpark

Article Published On: Thursday, July 14, 2016, 12:49 [IST]
English summary
Mahindra TUV500 MPV Spotted Camouflaged In Chennai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+