ಮಹೀಂದ್ರ ಎಕ್ಸ್‌ಯುವಿ500 5ನೇ ವಾರ್ಷಿಕೋತ್ಸವ ಸಂಭ್ರಮ; ಭಾರಿ ಆಫರ್
ಐದನೇ ವಾರ್ಷಿಕೋತ್ಸವದ ಆಫರ್ ನೀಡುವ ಮೂಲಕ ಮಹೀಂದ್ರ ಎಕ್ಸ್ ಯುವಿ500 ದೀಪಾವಳಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ.
ಐದನೇ ವಾರ್ಷಿಕೋತ್ಸದ ಸಂಭ್ರಮಾಚರಣೆಯಲ್ಲಿರುವ ಮಹೀಂದ್ರ ಎಕ್ಸ್ ಯುವಿ500 ಕ್ರೀಡಾ ಬಳಕೆಯ ವಾಹನಕ್ಕೆ ಭಾರಿ ಆಫರ್ ನೀಡಲಾಗುತ್ತಿದೆ. ಇದು ಈ ಬಾರಿಯ ದೀಪಾವಳಿಯ ಹಬ್ಬದ ಸಂಭ್ರಮದ ವೇಳೆಯಲ್ಲಿ ಕಾರು ಖರೀದಿಸಲು ಬಯಸುವ ನೂತನ ಗ್ರಾಹಕರಿಗೆ ಅತ್ಯುತ್ತಮ ಅವಕಾಶವಾಗಿರಲಿದೆ.

ನೂತನ ಮಹೀಂದ್ರ ಎಕ್ಸ್ ಯುವಿ500 ಖರೀದಿ ವೇಳೆಯಲ್ಲಿ 22,000 ರು.ಗಳಿಂದ ಗರಿಷ್ಠ 66,000 ರು.ಗಳ ವರೆಗೆ ಆಫರ್ ನೀಡಲಾಗುತ್ತಿದೆ.

ಪ್ರಸ್ತುತ ಆಫರ್ 2016 ಅಕ್ಟೋಬರ್ 31ರ ವರೆಗೆ ಮಾತ್ರ ಲಭ್ಯವಾಗಲಿದ್ದು, ಆಸಕ್ತ ಗ್ರಾಹಕರು ಹತ್ತಿರದ ಮಹೀಂದ್ರ ಅಧಿಕೃತ ಡೀಲರುಗಳನ್ನು ಸಂಪರ್ಕಿಸಬಹುದಾಗಿದೆ.

2011 ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿರುವ ಮಹೀಂದ್ರ ಎಕ್ಸ್ ಯುವಿ500 ಸವಾರಿ ಅಷ್ಟೊಂದು ಸಿಹಿಯಾಗಿರಿಲಿಲ್ಲ. ಆರಂಭದಲ್ಲೇ ಬೇಡಿಕೆ ಕುಸಿತದ ಹಿನ್ನಲೆಯಲ್ಲಿ ಬುಕ್ಕಿಂಗ್ ಸ್ಥಗಿತಗೊಳಿಸಬೇಕಾಗಿ ಬಂದಿತ್ತು.

ಕ್ರಮೇಣ ಮಾರಾಟದಲ್ಲಿ ಚೇತರಿಸಿಕೊಂಡ ಮಹೀಂದ್ರ ಎಕ್ಸ್ ಯುವಿ500 ತನ್ನದೇ ಆದ ವಿಶಿಷ್ಟ ಹೊರಮೈ, ಒಳಮೈ ವೈಶಿಷ್ಟ್ಯಗಳೊಂದಿಗೆ ವಾಹನ ಪ್ರೇಮಿಗಳ ಗಮನ ಸೆಳೆದಿತ್ತು.

ಕಳೆದೈದು ವರ್ಷದ ಅವಧಿಯಲ್ಲಿ ಮಹೀಂದ್ರ ಎಕ್ಸ್ ಯುವಿ500, 1.5 ಲಕ್ಷಕ್ಕೂ ಹೆಚ್ಚು ಯುನಿಟ್ ಗಳು ಮಾರಾಟಗೊಂಡಿದೆ.

ಇದರಲ್ಲಿ ಜೋಡಣೆ ಮಾಡಲಾಗಿರುವ 2.2 ಲೀಟರ್ ಎಂಹಾಕ್ ಡೀಸೆಲ್ ಎಂಜಿನ್ 330 ಎನ್ ಎಂ ತಿರುಗುಬಲದಲ್ಲಿ 140 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಆರು ಸ್ಪೀಡ್ ಮ್ಯಾನುವಲ್ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಗಳಲ್ಲಿ ಲಭ್ಯವಾಗಲಿದೆ.

ಚಿರತೆಯಿಂದ ಸ್ಪೂರ್ತಿ ಪಡೆದಿರುವ ಮಹೀಂದ್ರ ಎಕ್ಸ್ ಯುವಿ500 ಟಾಪ್ ಎಂಡ್ ವೆರಿಯಂಟ್ 18 ಲಕ್ಷ ರು.ಗಳಷ್ಟು ಬೆಲೆ ಬಾಳುತ್ತದೆ.

ಇನ್ನು ಟಾಪ್ ಎಂಡ್ ಡಬ್ಲ್ಯು8 ಮತ್ತು ಡಬ್ಲ್ಯು10 ವೆರಿಯಂಟ್ ಗಳಲ್ಲಿ ಆಲ್ ವೀಲ್ ಚಾಲನಾ ವ್ಯವಸ್ಥೆಯ ಸೌಲಭ್ಯವನ್ನು ನೀಡಲಾಗುತ್ತದೆ.


Click it and Unblock the Notifications