ಕ್ವಿಡ್ ಪ್ರಭಾವ; ಬದಲಾಗುತ್ತಿದೆ ಆಲ್ಟೊ, ಬದಲಾಗಲೇಬೇಕು!
ಸಣ್ಣ ಕಾರು ಮಾರುಕಟ್ಟೆಯಲ್ಲಿ ಪೈಪೋಟಿ ತಾರಕಕ್ಕೇರುತ್ತಿದೆ. ವರ್ಷಗಳಿಂದಲೂ ಗರಿಷ್ಠ ಮಾರಾಟ ಗಿಟ್ಟಿಸಿಕೊಳ್ಳುತ್ತಿದ್ದ ಮಾರುತಿ ಆಲ್ಟೊಗೆ ಅತಿ ನೂತನ ರೆನೊ ಕ್ವಿಡ್ ನಿಕಟ ಪ್ರತಿಸ್ಪರ್ಧೆ ಒಡ್ಡುತ್ತಿದೆ. ಇವೆಲ್ಲದರಿಂದ ಎಚ್ಚೆತ್ತುಕೊಂಡಿರುವ ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ, ಮುಂದಿನ ತಲೆಮಾರಿನ ಕ್ವಿಡ್ ಕಾರಿನ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ.
ಇದನ್ನು ಮಾರುತಿ ಸುಜುಕಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿರುವ ಕಿನೆಚಿ ಅಯುಕವಾ ಸ್ಪಷ್ಟಪಡಿಸಿದ್ದು, ಸಂಸ್ಥೆಯು ನೆಕ್ಸ್ಟ್ ಜನರೇಷನ್ ಆಲ್ಟೊ ಕಾರಿನ ನಿರ್ಮಾಣದಲ್ಲಿದೆ ಎಂಬುದನ್ನು ತಿಳಿಸಿದ್ದಾರೆ.

200ನೇ ಇಸವಿಯಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಮಾರುತಿ ಕ್ವಿಡ್ ಇದುವರೆಗೆ ಮೂರು ದಶಲಕ್ಷಕ್ಕೂ ಹೆಚ್ಚು ಯುನಿಟ್ ಗಳು ಮಾರಾಟವಾಗಿದೆ.

ವರ್ಷಗಳಿಂದ ಸಂಸ್ಥೆ ಅನುಸರಿಸಿ ಬಂದಿರುವ ಜನಪ್ರಿಯ ವಿನ್ಯಾಸ ನೀತಿಯೇ ಮಾರುತಿ ಆಲ್ಟೊ ಯಶಸ್ಸಿಗೆ ಪೂರಕವೆನಿಸಿದೆ. ಅಲ್ಲದೆ ಕಾಲ ಕಾಲಕ್ಕೆ ಆಧುನಿಕ ಸ್ಪರ್ಶವನ್ನು ತುಂಬಿದೆ.

ಕಳೆದ ಕೆಲವು ಸಮಯಗಳಿಂದ ಮಾರುತಿ ಸಣ್ಣ ಕಾರು ವಿಭಾಗದಲ್ಲಿ ಹಿನ್ನಡೆ ಅನುಭವಿಸುತ್ತಿದೆ. ಪ್ರತಿಸ್ಪರ್ಧಿಗಳ ಪ್ರವೇಶ ಹಾಗೂ ನೂತನ ವಾಹನ ಖರೀದಿ ಮಾಡುವ ಗ್ರಾಹಕರು ನೇರವಾಗಿ ಹೆಚ್ಚು ಎಂಜಿನ್ ಸಾಮರ್ಥ್ಯದ ದೊಡ್ಡದಾದ ಕಾರುಗಳತ್ತ ವಾಲುತ್ತಿರುವುದು ಕಂಡುಬಂದಿದೆ.

ಇವೆಲ್ಲದರಿಂದ ಕಳೆದ ವರ್ಷಕ್ಕೆ ಹೋಲಿಸಿದಾಗ ಸಣ್ಣ ಕಾರು ವಿಭಾಗದಲ್ಲಿ ಮಾರುತಿ ಶೇಕಡಾ 10.4 ರಷ್ಟು ಮಾರಾಟ ಕುಸಿತ ಅನುಭವಿಸಿದೆ.

ಅತ್ತ ಕ್ರಾಸೋವರ್ ಶೈಲಿಯ ರೆನೊ ಕ್ವಿಡ್ ಮಾರಾಟ ಏರುಗತಿಯನ್ನು ಸಾಧಿಸುತ್ತಿದ್ದು, ವರ್ಷಾಂತ್ಯದ ವೇಳೆಯಾಗುವುದಾಗ 1,25,000 ಯುನಿಟ್ ಗಳ ಮಾರಾಟವನ್ನು ತಲುಪಲಿದೆ. ಇನ್ನೊಂದೆಡೆ ಆಲ್ಟೊ ಕೆ10 ಮಾದರಿಗೂ ರೆನೊ ಕ್ವಿಡ್ ಪ್ರತಿಸ್ಪರ್ಧಿಯನ್ನು ರಂಗಕ್ಕಿಳಿಸಿದೆ.

ಒಟ್ಟಿನಲ್ಲಿ ಆಲ್ಟೊಗೆ ಬದಲಾಗುವ ಸಮಯ ಹತ್ತಿರ ಬಂದಿದೆ. ಆದರೂ 0.8 ಹಾಗೂ 1.0 ಲೀಟರ್ ಪೆಟ್ರೋಲ್ ಎಂಜಿನ್ ಗಳಲ್ಲಿ ಬದಲಾವಣೆ ಬರುವ ಸಂಭವ ಕಡಿಮೆಯಾಗಿದೆ. ಆದರೂ ಸುಧಾರಿತ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

ಮುಂದಿನ ತಲೆಮಾರಿನ ಆಲ್ಟೊದಲ್ಲೂ ಆಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ ಮುಂದುವರಿಯಲಿದೆ. ಇನ್ನು ಡೀಸೆಲ್ ಆವೃತ್ತಿಯನ್ನು ಅಲ್ಲಗಳೆಯುವಂತಿಲ್ಲ.


Click it and Unblock the Notifications








