ಮುಂದಿನ ವರ್ಷ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಬಿಡುಗಡೆ ಖಚಿತ

2017ನೇ ಸಾಲಿನಲ್ಲಿ ಮಾರುತಿ ಬಲೆನೊ ಆರ್ ಎಸ್ ಬಿಡುಗಡೆಯಾಗಲಿದೆ.

By Nagaraja

ಇಗ್ನಿಸ್ ತರಹನೇ ಪ್ರಸಕ್ತ ಹಬ್ಬದ ಆವೃತ್ತಿಯಲ್ಲಿ ನಡೆಯಬೇಕಾಗಿದ್ದ ಬಲೆನೊ ಆರ್ ಎಸ್ ಬಿಡುಗಡೆ ಮುಂದೂಡಲ್ಪಟ್ಟಿದೆ. ಬಲೆನೊ ಹ್ಯಾಚ್ ಬ್ಯಾಕ್ ಕಾರಿನ ಶಕ್ತಿಶಾಲಿ ಕಾರಾಗಿರುವ ಬಲೆನೊ ಆರ್ ಎಸ್ ಮಾದರಿಯು ಕ್ರೀಡಾ ವಾಹನ ಪ್ರೇಮಿಗಳಿಗೆ ಅತ್ಯುತ್ತಮ ಆಯ್ಕೆಯಾಗಿರಲಿದೆ.

ಮುಂದಿನ ವರ್ಷ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಬಿಡುಗಡೆ ಖಚಿತ

ನಿರ್ಮಾಣ ಸಂಬಂಧ ಎದ್ದು ಬಂದಿರುವ ಬಿಕ್ಕಿಟ್ಟಿನಿಂದಾಗಿ ಇಗ್ನಿಸ್ ತರಹನೇ ಮಾರುತಿ ಬಲೆನೊ ಆರ್ ಎಸ್ ಬಿಡುಗಡೆ ಪ್ರಕ್ರಿಯೆಯು ವಿಳಂಬವಾಗಿದೆ.

ಮುಂದಿನ ವರ್ಷ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಬಿಡುಗಡೆ ಖಚಿತ

ಈಗಗಾಲೇ ಮಾರಾಟದಲ್ಲಿರುವ ಬಲೆನೊ ಹ್ಯಾಚ್ ಬ್ಯಾಕ್ ಜೊತೆಗೆ ಮಾರುತಿ ವಿಟಾರ ಬ್ರಿಝಾಗೆ ಹೆಚ್ಚಿನ ಬೇಡಿಕೆ ದಾಖಲಾಗಿದೆ. ಇದರಿಂದಾಗಿ ಸಂಸ್ಥೆಯು ಈ ಎರಡು ಮಾದರಿಗಳನ್ನು ಹೆಚ್ಚೆಚ್ಚು ಉತ್ಪಾದಿಸುವಲ್ಲಿ ಕಾರ್ಯ ಮಗ್ನವಾಗಿದೆ.

ಮುಂದಿನ ವರ್ಷ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಬಿಡುಗಡೆ ಖಚಿತ

ಬಲೆನೊ ಶಕ್ತಿಶಾಲಿ ಆರ್ ಎಸ್ ಮಾದರಿಯು ಲೆಥರ್ ಹೋದಿಕೆಯ ಸೀಟು ಮತ್ತು ಆರ್ ಬ್ರಾಂಡಿಂಗ್ ಗಿಟ್ಟಿಸಿಕೊಳ್ಳಲಿದೆ. ಇದು ಸ್ಟ್ಯಾಂಡರ್ಡ್ ಬಲೆನೊಗಿಂತಲೂ ವಿಭಿನ್ನ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಲಿದೆ.

ಮುಂದಿನ ವರ್ಷ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಬಿಡುಗಡೆ ಖಚಿತ

ನೂತನ ಬಲೆನೊ ಆರ್ ಎಸ್ ಮಾದರಿಯು ಏಳು ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ, ರಿವರ್ಸ್ ಕ್ಯಾಮೆರಾ, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋ ಮತ್ತು ರೈನ್ ಸೆನ್ಸಿಂಗ್ ವೈಪರ್ ಗಳನ್ನು ಗಿಟ್ಟಿಸಿಕೊಳ್ಳಲಿದೆ.

ಮುಂದಿನ ವರ್ಷ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಬಿಡುಗಡೆ ಖಚಿತ

ಬಲೆನೊ ಆರ್ ಎಲ್ ರಸ್ತೆಯಲ್ಲೂ ಹೆಚ್ಚು ಸುರಕ್ಷಿತವಾಗಲಿದ್ದು, ಎಲ್ಲ ನಾಲ್ಕು ಚಕ್ರಗಳಲ್ಲೂ ಡಿಸ್ಕ್ ಬ್ರೇಕ್ ಗಳು ಜೋಡಣೆಯಾಗಲಿದೆ. ಫಿಯೆಟ್ ಅಬಾರ್ತ್ ಪುಂಟೊ ಮಾತ್ರ ಈ ಸೌಲಭ್ಯವನ್ನು ಹೊಂದಿರುವ ದೇಶದ ಮಗದೊಂದು ಕಾರಾಗಿದೆ.

ಮುಂದಿನ ವರ್ಷ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಬಿಡುಗಡೆ ಖಚಿತ

ಅತ್ತ ಡ್ಯುಯಲ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ ವ್ಯವಸ್ಥೆಯನ್ನು ಸ್ಟ್ಯಾಂಡರ್ಡ್ ಆಗಿ ಗಿಟ್ಟಿಸಿಕೊಳ್ಳಲಿದೆ.

ಮುಂದಿನ ವರ್ಷ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಬಿಡುಗಡೆ ಖಚಿತ

ಇಷ್ಟೆಲ್ಲ ಆದರೂ ಕಾರಿನಡಿಯಲ್ಲಿರುವ ಬೂಸ್ಟರ್ ಜೆಟ್ ಎಂಜಿನ್ ಪ್ರಮುಖ ಆಕರ್ಷಣೆಯಾಗಲಿದೆ. ಇದು ನಿರ್ವಹಣೆಯಲ್ಲಿ ಯಾವುದೇ ರಾಜಿಗೂ ತಯಾರಾಗಿಲ್ಲ.

ಮುಂದಿನ ವರ್ಷ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಬಿಡುಗಡೆ ಖಚಿತ

ಮಾರುತಿ ಮೊದಲ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಇದಾಗಿದ್ದು, 170 ಎನ್ ಎಂ ತಿರುಗುಬಲದಲ್ಲಿ 110 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಹಾಗೆಯೇ ಐದು ಸ್ಪೀಡ್ ಮ್ಯಾನುವಲ್ ಹಾಗೂ ಆರ್ ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಜೊತೆಗೆ ಪೆಡಲ್ ಶಿಫ್ಟರ್ ಗಳನ್ನು ನಿರೀಕ್ಷೆ ಮಾಡಬಹುದಾಗಿದೆ.

ಮುಂದಿನ ವರ್ಷ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಬಿಡುಗಡೆ ಖಚಿತ

ಕ್ರೀಡಾತ್ಮಕ ವಿನ್ಯಾಸದೊಂದಿಗೆ ಬೈ ಕ್ಸನನ್ ಹೆಡ್ ಲ್ಯಾಂಪ್ ಮತ್ತು ಎಲ್ ಇಡಿ ಡೇಟೈಮ್ ರನ್ನಿಂಗ್ ಬೆಳಕಿನ ಸೇವೆಯು ಇದರಲ್ಲಿರಲಿದೆ.

ಮುಂದಿನ ವರ್ಷ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಬಿಡುಗಡೆ ಖಚಿತ

ಒಮ್ಮೆ ಬಿಡುಗಡೆಯಾದ್ದಲ್ಲಿ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಕಾರು ಫಿಯೆಟ್ ಅಬಾರ್ತ್ ಪುಂಟೊ, ಫೋರ್ಡ್ ಫಿಗೊ ಮತ್ತು ಫೋಕ್ಸ್ ವ್ಯಾಗನ್ ಪೊಲೊ ಜಿಟಿ ಮಾದರಿಗಳಿಗೆ ಪೈಪೋಟಿ ಒಡ್ಡಲಿದೆ.

ಮುಂದಿನ ವರ್ಷ ಮಾರುತಿ ಸುಜುಕಿ ಬಲೆನೊ ಆರ್ ಎಸ್ ಬಿಡುಗಡೆ ಖಚಿತ

ಅಂದ ಹಾಗೆ ನೂತನ ಬಲೆನೊ ಆರ್ ಎಸ್ ಕೂಡಾ ಪ್ರೀಮಿಯಂ ನೆಕ್ಸಾ ಡೀಲರ್ ಶಿಪ್ ಗಳ ಮುಖಾಂತರ ಮಾರಾಟವಾಗಲಿದೆ.

More from DriveSpark

Article Published On: Wednesday, November 23, 2016, 13:26 [IST]
English summary
Maruti Suzuki Baleno RS To Sport Premium Interior — Launch In Early 2017
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+