ಮಾರುತಿ ಕಾರು ಖರೀದಿಸಲು ಇದೇ ಸಕಾಲ; 70,000 ರು.ಗಳ ವರೆಗೆ ಆಫರ್!
ಈ ಹಬ್ಬದ ಸಂಭ್ರಮದ ವೇಳೆಯಲ್ಲಿ ಮಾರುತಿ ಸುಜುಕಿ ಕಾರು ಖರೀದಿ ವೇಳೆಯಲ್ಲಿ ಗರಿಷ್ಠ 70,000 ರು.ಗಳ ವರೆಗೆ ಆಫರ್ ನೀಡಲಾಗುತ್ತಿದೆ. ಈ ಸಂಬಂಧ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಿರಿ.
ದೇಶದ ಅತಿ ದೊಡ್ಡ ಪ್ರಯಾಣಿಕ ಕಾರು ಸಂಸ್ಥೆ ಮಾರುತಿ ಸುಜುಕಿ ಸಾಲು ಸಾಲು ಹಬ್ಬದ ಸಂಭ್ರಮದ ಅಂಗವಾಗಿ ತನ್ನೆಲ್ಲ ಶ್ರೇಣಿಯ ಕಾರುಗಳಿಗೆ ಭರ್ಜರಿ ಆಫರುಗಳನ್ನು ಮುಂದಿಟ್ಟಿದೆ. ಹಾಗೊಂದು ವೇಳೆ ನೀವು ಕೂಡಾ ಮಾರುತಿ ಕಾರನ್ನು ಖರೀದಿಸಲು ಯೋಚಿಸುತ್ತಿದ್ದಲ್ಲಿ ಇದೇ ಸಕಾಲವಾಗಿರಲಿದೆ. ಪ್ರಸ್ತುತ ಲೇಖನದಲ್ಲಿ ಮಾರುತಿ ಕಾರುಗಳಿಗೆ ನೀಡುತ್ತಿರುವ ಸಂಪೂರ್ಣ ಆಫರುಗಳನ್ನು ವಿವರಗವಾಗಿ ಕೊಡಲಾಗಿದೆ.

ಮಾರುತಿ ಆಲ್ಟೊ 800 ಫೇಸ್ ಲಿಫ್ಟ್
ಮಾರುತಿ ಆಲ್ಟೊ 800 ಪರಿಷ್ಕೃತ ಆವೃತ್ತಿಯ ಖರೀದಿ ವೇಳೆಯಲ್ಲಿ 35,000 ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಇದರಲ್ಲಿ 15,000 ರು.ಗಳ ವರೆಗೆ ನಗದು ಡಿಸ್ಕೌಂಟ್ ಮತ್ತು 20,000 ರು.ಗಳ ವರೆಗೆ ಎಕ್ಸ್ ಚೇಂಜ್ ಬೋನಸ್ ಸೇರಿವೆ.

ಮಾರುತಿ ಆಲ್ಟೊ 800
ಪರಿಷ್ಕೃತ ಆವೃತ್ತಿಗಿಂತಲೂ ಮೊದಲು ಬಿಡುಗಡೆಯಾಗಿರುವ ಆಲ್ಟೊ 800 ಕಾರಿಗೂ 50,000 ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಈ ಹಳೆಯ ಆಲ್ಟೊ 800 ಖರೀದಿಯಲ್ಲಿ 30,000 ರು.ಗಳ ವರೆಗೆ ನಗದು ಡಿಸ್ಕೌಂಟ್ ಮತ್ತು 20,000 ರು.ಗಳ ವರೆಗೆ ಎಕ್ಸ್ ಚೇಂಜ್ ಬೋನಸ್ ಸೇರಿವೆ.

ಮಾರುತಿ ಆಲ್ಟೊ ಕೆ10
ಹೆಚ್ಚು ಶಕ್ತಿಶಾಲಿ ಆಲ್ಟೊ ಕೆ10 ಕಾರು ಖರೀದಿ ವೇಳೆಯಲ್ಲೂ 35,000 ರು.ಗಳ ವರೆಗೂ ಡಿಸ್ಕೌಂಟ್ ನೀಡಲಾಗುತ್ತಿದೆ. ಇದರಲ್ಲಿ 15,000 ರು.ಗಳ ನಗದು ಮತ್ತು 20,000 ರು.ಗಳ ವೆರೆಗ ಎಕ್ಸ್ ಚೇಂಜ್ ಬೋನಸ್ ಸೇರಿರಲಿದೆ.

ಮಾರುತಿ ಸೆಲೆರಿಯೊ
ಆಟೋಮ್ಯಾಟಡ್ ಮ್ಯಾನುವಲ್ ಟ್ರಾನ್ಸ್ ಮಿಷನ್ (ಎಎಂಟಿ) ಆಯ್ಕೆಯೊಂದಿಗೆ ಮಾರುಕಟ್ಟೆಯಲ್ಲಿ ಅಬ್ಬರಿಸುತ್ತಿರುವ ಮಾರುತಿ ಸುಜುಕಿ ಸೆಲೆರಿಯೊ ಖರೀದಿ ವೇಳೆಯಲ್ಲಿ 40,000 ರು.ಗಳ ವರೆಗೆ ಡಿಸ್ಕೌಂಟ್ ನೀಡಲಾಗುತ್ತಿದೆ. ಮಾರುತಿ ಸುಜುಕಿ ಸೆಲೆರಿಯೊ ಆಯ್ದ ವೆರಿಯಂಟ್ ಗಳಿಗೆ ಮಾತ್ರ ಈ ಆಫರ್ ಲಭ್ಯವಾಗಲಿದೆ.

ಮಾರುತಿ ಸೆಲೆರಿಯೊ
ಮಾರುತಿ ಸುಜುಕಿ ಸೆಲೆರಿಯೊ ಝಡ್ ಎಕ್ಸ್ ಐ ಎಎಂಟಿ ಮತ್ತು ವಿಎಕ್ಸ್ ಐ ಎಎಂಟಿ ಖರೀದಿ ವೇಳೆಯಲ್ಲಿ 20,000 ರು.ಗಳ ಡಿಸ್ಕೌಂಟ್ ಲಭ್ಯವಾಗಲಿದೆ. ಅದೇ ಹೊತ್ತಿಗೆ ಇನ್ನಿತರ ಸೆಲಿರಿಯೊ ವೆರಿಯಂಟ್ ಗಳಿಗೆ 15,000 ರು.ಗಳ ವರೆಗೆ ನಗದು ಡಿಸ್ಕೌಂಟ್ ಗಿಟ್ಟಿಸಿಕೊಳ್ಳಬಹುದಾಗಿದೆ. ಇನ್ನುಳಿದಂತೆ ಎಲ್ಲ ವೆರಿಯಂಟ್ ಗಳಿಗೂ 20,000 ರು.ಗಳ ವರೆಗೆ ಎಕ್ಸ್ ಚೇಂಜ್ ಬೋನಸ್ ಸಿಗಲಿದೆ.

ಮಾರುತಿ ಸುಜುಕಿ ರಿಟ್ಜ್
ಸ್ಟೋಕ್ ಖಾಲಿ ಮಾಡುವ ಇರಾದೆಯಲ್ಲಿರುವ ಮಾರುತಿ, ತನ್ನ ಜನಪ್ರಿಯ ರಿಟ್ಜ್ ಮಾದರಿಗೂ ಗರಿಷ್ಠ 65,000 ರು.ಗಳ ವರೆಗೆ ಆಫರ್ ಮುಂದಿಡುತ್ತಿದೆ. ರಿಟ್ಜ್ ಎಲ್ ಎಕ್ಸ್ ಐ ಪೆಟ್ರೋಲ್ ವೆರಿಯಂಟ್ ಖರೀದಿ ವೇಳೆಯಲ್ಲಿ 25,000 ರು.ಗಳ ಡಿಸ್ಕೌಂಟ್ ಲಭ್ಯವಾಗಲಿದೆ. ಅದೇ ಹೊತ್ತಿಗೆ ವಿಎಕ್ಸ್ ಐ ಮತ್ತು ಝಡ್ ಎಕ್ಸ್ ಐ ವೆರಿಯಂಟ್ ಖರೀದಿಯಲ್ಲಿ 15,000 ರು.ಗಳ ವರೆಗೆ ಡಿಸ್ಕೌಂಟ್ ಸಿಗಲಿದೆ.

ಮಾರುತಿ ಸುಜುಕಿ ರಿಟ್ಜ್
ದೊಡ್ಡ ಗಾತ್ರದ ಮಾರುತಿ ಸುಜುಕಿ ರಿಟ್ಜ್ ಹ್ಯಾಚ್ ಬ್ಯಾಕ್ ಖರೀದಿ ವೇಳೆಯಲ್ಲಿ 40,000 ರು.ಗಳ ಎಕ್ಸ್ ಚೇಂಜ್ ಬೋನಸ್ ಸಿಗಲಿದೆ. ತನ್ಮೂಲಕ ಗ್ರಾಹಕರು ಗರಿಷ್ಠ 65,000 ರು.ಗಳಷ್ಟು ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

ಮಾರುತಿ ಸ್ವಿಫ್ಟ್
ಮಾರುತಿಯ ಸರ್ವಕಾಲಿಕ ಶ್ರೇಷ್ಠ ಹ್ಯಾಚ್ ಬ್ಯಾಕ್ ಕಾರು ಸ್ವಿಫ್ಟ್ ಖರೀದಿಯಲ್ಲೂ 25,000 ರು.ಗಳ ವರೆಗೆ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಸ್ವಿಫ್ಟ್ ನ ಎಲ್ಲ ಮಾದರಿಗಳಿಗೂ ಡಿಸ್ಕೌಂಟ್ ಲಭ್ಯವಾಗಲಿದೆ.

ಮಾರುತಿ ಸ್ವಿಫ್ಟ್
ಮಾರುತಿ ಸುಜುಕಿ ಸ್ವಿಫ್ಟ್ ಖರೀದಿ ವೇಳೆಯಲ್ಲಿ 10,000 ರು.ಗಳ ವರೆಗೆ ನಗದು ರಿಯಾಯಿತಿ ಮತ್ತು 15,000 ರು.ಗಳ ವರೆಗೆ ಎಕ್ಸ್ ಚೇಂಜ್ ಬೋನಸ್ ನೀಡಲಾಗುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್
ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಕಾಂಪಾಕ್ಟ್ ಸೆಡಾನ್ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಖರೀದಿ ವೇಳೆಯಲ್ಲಿ ಗರಿಷ್ಠ 25,000 ರು.ಗಳ ವರೆಗೆ ಆಫರ್ ನಿಮ್ಮದಾಗಿಸಬಹುದಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್
ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಖರೀದಿಯಲ್ಲಿ 10,000 ರು.ಗಳ ವರೆಗೆ ನಗದು ರಿಯಾಯಿತಿ ಮತ್ತು 15,000 ರು.ಗಳ ವರೆಗೆ ಎಕ್ಸ್ ಚೇಂಜ್ ಬೋನಸ್ ಸೇರಿರಲಿದೆ.

ಮಾರುತಿ ಸುಜುಕಿ ವ್ಯಾಗನಾರ್
'ಟಾಲ್ ಬಾಯ್' ಎಂದೇ ಜನಪ್ರಿಯತೆ ಗಿಟ್ಟಿಸಿಕೊಂಡಿರುವ ಮಾರುತಿ ವ್ಯಾಗನಾರ್ ಹ್ಯಾಚ್ ಬ್ಯಾಕ್ ಖರೀದಿ ವೇಳೆಯಲ್ಲೂ ಗರಿಷ್ಠ 55,000 ರುಪಾಯಿಗಳ ವರೆಗೆ ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

ಮಾರುತಿ ಸುಜುಕಿ ವ್ಯಾಗನಾರ್
ಮಾರುತಿ ಸುಜುಕಿ ವ್ಯಾಗನಾರ್ ಸಿಎನ್ ಜಿ ವೆರಿಯಂಟ್ ಖರೀದಿ ವೇಳೆಯಲ್ಲಿ 20,000 ರು.ಗಳ ವರೆಗೆ ಡಿಸ್ಕೌಂಟ್ ಮತ್ತು 15,000 ರು.ಗಳ ವರೆಗೆ ನಗದು ಡಿಸ್ಕೌಂಟ್ ಗಿಟ್ಟಿಸಿಕೊಳ್ಳಬಹುದಾಗಿದೆ. ಇವೆಲ್ಲದರ ಹೊರತಾಗಿ ವ್ಯಾಗನಾರ್ ಎಲ್ಲ ಮಾದರಿಗಳ ಖರೀದಿ ವೇಳೆಯಲ್ಲಿ 35,000 ರು.ಗಳ ವರೆಗೆ ಎಕ್ಸ್ ಚೇಂಜ್ ಬೋನಸ್ ಲಭ್ಯವಾಗಲಿದೆ.

ಮಾರುತಿ ವ್ಯಾಗನಾರ್ ಸ್ಟ್ರಿಂಗ್ರೇ
ವ್ಯಾಗನಾರ್ ಮಗದೊಂದು ಅವತಾರವಾಗಿರುವ ವ್ಯಾಗನಾರ್ ಸ್ಟ್ರಿಂಗ್ರೇ ಹ್ಯಾಚ್ ಬ್ಯಾಕ್ ಕಾರು ಖರೀದಿ ವೇಳೆಯಲ್ಲಿ ಗರಿಷ್ಟ 70,000 ರು.ಗಳ ವೆರೆಗೆ ಡಿಸ್ಕೌಂಟ್ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಮಾರುತಿ ವ್ಯಾಗನಾರ್ ಸ್ಟ್ರಿಂಗ್ರೇ
ಮಾರುತಿ ಸುಜುಕಿ ಸ್ಟ್ರಿಂಗ್ರೇ ಎಲ್ ಎಕ್ಸ್ ಐ (ಐಚ್ಛಿಕ) ವೆರಿಯಂಟ್ ಖರೀದಿಯಲ್ಲಿ 35,000 ರು.ಗಳ ವರೆಗೆ ನಗದು ರಿಯಾಯಿತಿ ಮತ್ತು ಎಜಿಎಸ್ ವಿಎಕ್ಸ್ ಐ ಹಾಗೂ ಎಜಿಎಸ್ ವಿಎಕ್ಸ್ ಐ (ಐಚ್ಚಿಕ) ಕಾರು ಖರೀದಿಯಲ್ಲಿ 20,000 ರು.ಗಳ ವರೆಗೆ ನಗದು ಡಿಸ್ಕೌಂಟ್ ಸಿಗಲಿದೆ. ಇನ್ನುಳಿದಂತೆ ಸ್ಟ್ರಿಂಗ್ರೇ ಎಲ್ಲ ವೆರಿಯಂಟ್ ಖರೀದಿ ವೇಳೆಯಲ್ಲೂ 35,000 ರು.ಗಳ ವರೆಗೆ ಎಕ್ಸ್ ಚೇಂಜ್ ಬೋನಸ್ ಲಭ್ಯವಾಗಲಿದೆ.

ಹಾಗಿದ್ದರೂ ಈ ಎಲ್ಲ ಆಫರುಗಳ ಪಟ್ಟಿಯಿಂದ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ಮಾರುತಿ ಸುಜುಕಿ ವಿಟಾರಾ ಬ್ರಿಝಾ, ಬಲೆನೊ ಹ್ಯಾಚ್ ಬ್ಯಾಕ್ ಮತ್ತು ಸಿಯಾಝ್ ಸಿಯಾಝ್ ಕಾರುಗಳನ್ನು ಹೊರತುಪಡಿಸಲಾಗಿದೆ. ಇನ್ನು ಎಸ್ ಕ್ರಾಸ್ ಆಫರುಗಳ ಬಗ್ಗೆಯೂ ಯಾವುದೇ ಮಾಹಿತಿಗಳು ಲಭ್ಯವಾಗಿಲ್ಲ.

ಇವನ್ನೂ ಓದಿ:
01. ಐಕ್ರಿಯೆಟ್; ಮಾರುತಿಯಿಂದ ನೂತನ ವೈಯಕ್ತೀಕರಣ ಪ್ಯಾಕೇಜ್
02. ಮಾರುತಿ ಗೇರ್ ಚೇಂಜ್; ರೆನೊ ಕ್ವಿಡ್ ಪ್ರತಿದಾಳಿಗೆ ಸಿದ್ಧ03. ಕೊನೆಗೂ ಶರಣಾದ ಮಾರುತಿ ರಿಟ್ಜ್; ಇಗ್ನಿಸ್ ಹಾದಿ ಸುಗಮ

Click it and Unblock the Notifications








