ಮಾರುತಿ ಇಗ್ನಿಸ್ ಆಟೋಮ್ಯಾಟಿಕ್‌ ಆವೃತ್ತಿಯಲ್ಲೂ ಬಿಡುಗಡೆ?

Written By:

ಮಾರುಕಟ್ಟೆಯಲ್ಲಿ ತನ್ನ ಅಧಿಪತ್ಯ ಸಾಧಿಸಿರುವ ಮಾರುತಿ ಆಧುನಿಕತೆಗೆ ತಕ್ಕಂತೆ ಹೊಸ ಹೊಸ ಮಾದರಿಗಳನ್ನು ಬಿಡುಗಡೆ ಮಾಡುವ ತವಕದಲ್ಲಿದೆ. ಸಮಕಾಲೀನ ಮಾರುಕಟ್ಟೆಯಲ್ಲಿ ವಿಟಾರಾ ಬ್ರಿಝಾ ಮತ್ತು ಬಲೆನೊಗಳಂತಹ ಪ್ರಭಾವಶಾಲಿ ಮಾದರಿಗಳನ್ನು ಬಿಡುಗಡೆ ಮಾಡಿರುವ ಮಾರುತಿ ಅತಿ ಶೀಘ್ರದಲ್ಲೇ ಇಗ್ನಿಸ್ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ.

ವರ್ಷಾರಂಭದಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಭರ್ಜರಿ ಅನಾವರಣ ಕಂಡಿರುವ ಮಾರುತಿ ಇಗ್ನಿಸ್ ಹಲವು ಬಾರಿ ಟೆಸ್ಟಿಂಗ್ ವೇಳೆ ಸೆರೆ ಹಿಡಿಯಲಾಗಿತ್ತು. ಈಗ ಇಗ್ನಿಸ್ ಸಂಬಂಧ ಮತ್ತಷ್ಟು ಕುತೂಹಲದಾಯಕ ಮಾಹಿತಿಗಳು ಹೊರ ಬರುತ್ತಿದೆ.

ಮಾರುತಿ ಇಗ್ನಿಸ್ ಆಟೋಮ್ಯಾಟಿಕ್‌ ಆವೃತ್ತಿಯಲ್ಲೂ ಬಿಡುಗಡೆ?

ಬಲ್ಲ ಮೂಲಗಳ ಪ್ರಕಾರ ನೂತನ ಇಗ್ನಿಸ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದ್ದು, ಸಿವಿಟಿ ಗೇರ್ ಬಾಕ್ಸ್ ಪಡೆಯುವುದು ಬಹುತೇಕ ಖಚಿತವೆನಿಸಿದೆ.

ಮಾರುತಿ ಇಗ್ನಿಸ್ ಆಟೋಮ್ಯಾಟಿಕ್‌ ಆವೃತ್ತಿಯಲ್ಲೂ ಬಿಡುಗಡೆ?

ಇತ್ತೀಚೆಗಿನ ಮಾರುಕಟ್ಟೆ ಅಂಕಿಅಂಶಗಳನ್ನು ನೋಡಿದಾಗ ಆಲ್ಟೊ ಕೆ10, ವ್ಯಾಗನಾರ್, ಸ್ಟ್ರೀಂಗ್ರೇ, ಸೆಲೆರಿಯೊ ಮತ್ತು ಡಿಜೈರ್ ಡೀಸೆಲ್ ಮಾದರಿಗಳಲ್ಲಿ ಆಟೋಮ್ಯಾಟಡ್ ಮ್ಯಾನುವಲ್ ಗೇರ್ ಬಾಕ್ಸ್ (ಎಎಂಟಿ) ಆಯ್ಕೆಯನ್ನು ನೀಡಿರುವುದನ್ನು ಗಮನಿಸಬಹುದಾಗಿದೆ.

ಮಾರುತಿ ಇಗ್ನಿಸ್ ಆಟೋಮ್ಯಾಟಿಕ್‌ ಆವೃತ್ತಿಯಲ್ಲೂ ಬಿಡುಗಡೆ?

ಎಎಂಟಿ ಮಾದರಿಗಳನ್ನು ಮಾರುತಿ ಆಟೋ ಗೇರ್ ಶಿಪ್ಟ್ ಅಥವಾ ಸಂಕ್ಷಿಪ್ತವಾಗಿ ಎಜಿಎಸ್ ಎಂದು ವಿಶ್ಲೇಷಿಸುತ್ತಿದೆ. ಆದರೆ ನೂತನ ಇಗ್ನಿಸ್ ಮಾದರಿಗೆ ಎಜಿಎಸ್ ಆಳವಡಿಕೆಯಾಗುವ ಸಾಧ್ಯತೆಯಿದೆ.

ಮಾರುತಿ ಇಗ್ನಿಸ್ ಆಟೋಮ್ಯಾಟಿಕ್‌ ಆವೃತ್ತಿಯಲ್ಲೂ ಬಿಡುಗಡೆ?

ಸಂಸ್ಥೆಯ ಪ್ರೀಮಿಯಂ ನೆಕ್ಸಾ ಶೋ ರೂಂಗಳ ಮೂಲಕ ವಿತರಣೆಯಾಗಲಿರುವ ಮಾರುತಿ ಇಗ್ನಿಸ್, ಪೂರ್ಣ ಪ್ರಮಾಣದ ಸಿವಿಟಿ (continuously variable transmission) ಗೇರ್ ಬಾಕ್ಸ್ ಪಡೆಯಲಿದೆ.

ಮಾರುತಿ ಇಗ್ನಿಸ್ ಆಟೋಮ್ಯಾಟಿಕ್‌ ಆವೃತ್ತಿಯಲ್ಲೂ ಬಿಡುಗಡೆ?

ಅಂದ ಹಾಗೆ ಮಾರುತಿ ಇಗ್ನಿಸ್ 1.2 ಲೀಟರ್ ಪೆಟ್ರೋಲ್ ಮತ್ತು 1.3 ಲೀಟರ್ ಡೀಸೆಲ್ ಗೇರ್ ಬಾಕ್ಸ್ ಪಡೆಯುವ ಸಾಧ್ಯತೆಯಿದ್ದು, ನಾಲ್ಕರಿಂದ ಆರು ಲಕ್ಷ ಬೆಲೆ ಪರಿಧಿಯಲ್ಲಿ ಬಿಡುಗಡೆಯಾಗಲಿದೆ.

ಮಾರುತಿ ಇಗ್ನಿಸ್ ಆಟೋಮ್ಯಾಟಿಕ್‌ ಆವೃತ್ತಿಯಲ್ಲೂ ಬಿಡುಗಡೆ?

ಐ-ಎಂ4 ಕಾನ್ಸೆಪ್ಟ್ ಕಾರಿನಿಂದ ಅಭಿವೃದ್ಧಿಪಡಿಸಿರುವ ಮಾರುತಿ ಇಗ್ನಿಸ್ ಒಂದು ಸಬ್ ಕಾಂಪಾಕ್ಟ್ ಕ್ರಾಸೋವರ್ ಕಾರಾಗಿದೆ.

English summary
Maruti Suzuki Ignis To Come With A CVT And Not AMT?
Story first published: Friday, June 24, 2016, 13:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark