ನೀವೇಕೆ ಮಾರುತಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿ ಖರೀದಿಸಬೇಕು? 10 ಕಾರಣಗಳು

By Nagaraja

2005ನೇ ಇಸವಿಯಲ್ಲಿ ಭಾರತೀಯ ವಾಹನ ಇತಿಹಾಸದಲ್ಲಿ ಕ್ರಾಂತಿಕಾರಿ ಬದಲಾವಣೆಯುಂಟಾಗಿತ್ತು. ದೇಶದ ಸರ್ವಕಾಲಿಕ ಶ್ರೇಷ್ಠ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ಸ್ವಿಫ್ಟ್ ಕಳೆದೊಂದು ದಶಕದಿಂದಲೂ ಗರಿಷ್ಠ ಮಾರಾಟವನ್ನು ಕಾಪಾಡಿಕೊಂಡಿದೆ. ಈ ಯಶಸ್ಸನ್ನು ಮತ್ತಷ್ಟು ಸ್ಮರಣೀಯವಾಗಿಸಲು ಹೊರಟಿರುವ ಮಾರುತಿ ಸಂಸ್ಥೆಯು ಕ್ರೀಡಾ ಪ್ರೇಮಿಗಳಿಗಾಗಿ 'ಸ್ವಿಫ್ಟ್ ಡೆಕಾ' ಎಂಬ ವಿಶೇಷ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಡೆಕಾ ಆವೃತ್ತಿಗೆ ಬಹಳ ಅರ್ಥವತ್ತಾದ ನಾಮಕರಣವನ್ನು ನೀಡಲಾಗಿದೆ. ಇದು ಡೆಕಾ ಎಂಬ ಗ್ರೀಕ್ ಪದದಿಂದ ಹುಟ್ಟಿಕೊಂಡಿದ್ದು, 10 ಎಂಬ ಅರ್ಥವನ್ನು ನೀಡುತ್ತದೆ. ಜಗತ್ತಿನ ವಿಶ್ವ ವಿಖ್ಯಾತ ಪುಟ್ಬಾಲ್ ಕ್ರೀಡಾಪಟುಗಳ ಅದೃಷ್ಟ ಸಂಖ್ಯೆ 10 ಆಗಿದ್ದು, #PlayLike10 ಎಂಬ ಹ್ಯಾಶ್ ಟ್ಯಾಗ್ ಮೂಲಕ ಮಾರುತಿ ಪ್ರಚಾರ ಹಮ್ಮಿಕೊಂಡಿದೆ. ಬಹಳ ಹಿಂದಿನಿಂದಲೂ ಫುಟ್ಬಾಲ್ ಜೊತೆಗೆ ಸ್ವಿಫ್ಟ್ ನಂಟನ್ನು ನೀವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ಮಾರುತಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿ ವೈಶಿಷ್ಟ್ಯಗಳು

01. ನೀವು ನೋಡುತ್ತಿರುವಂತೆಯೇ ಕಾರಿನ ಹೊರಮೈಯಲ್ಲಿ ಕ್ರೀಡಾತ್ಮಕ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ. ಇಲ್ಲಿಯೂ ಪ್ಲೇ ಲೈಕ್ 10 ಎಂಬ ಪರಿಕಲ್ಪನೆಯನ್ನು ಉಳಿಸಿಕೊಳ್ಳಲಿದೆ. ಹೊರಮೈಯಲ್ಲಿ ವಿಶೇಷ ಗ್ರಾಫಿಕ್ಸ್ ಗಳ ಜೊತೆಗೆ ಡ್ಯುಯಲ್ ಟೋನ್ ರಿಯರ್ ವ್ಯೂ ಮಿರರ್ ಪ್ರಮುಖ ಆಕರ್ಷಣೆಯಾಗಲಿದೆ.

ಮಾರುತಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿ ವೈಶಿಷ್ಟ್ಯಗಳು

02. ಹಾಗೊಂದು ವೇಳೆ ಈ ಹೊಳಪಿನ ಕೆಂಪು ವರ್ಣವು ನಿಮ್ಮ ಬಯಕೆಗಳಿಗೆ ಹೊಂದಿಕೆಯಾಗದಿದ್ದಲ್ಲಿ ಮುತ್ತಿನ ಶ್ವೇತ ವರ್ಣದ ವಿಶೇಷ ಡೆಕಾ ಕಾರನ್ನು ಗಿಟ್ಟಿಸಿಕೊಳ್ಳುವ ಅವಕಾಶವೂ ಇರುತ್ತದೆ.

ಮಾರುತಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿ ವೈಶಿಷ್ಟ್ಯಗಳು

03. ಕಾರಿನ ಒಳಮೈ ಹೆಚ್ಚು ಪ್ರಭಾವಶಾಲಿ ಎನಿಸಿಕೊಂಡಿದೆ. ಡ್ಯುಯಲ್ ಟೋನ್ ಕೆಂಪು ಮತ್ತು ಬಿಳಿ ಕವರ್ ಗಳ ಸ್ಪರ್ಶವೂ ಇಲ್ಲಿರುತ್ತದೆ. ಸೀಟುಗಳಲ್ಲೂ '10' ನಂಬರ್ ಕೊಡಲಾಗಿದೆ.

ಮಾರುತಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿ ವೈಶಿಷ್ಟ್ಯಗಳು

04. ಆಗಲೇ ಆರಾಮದಾಯಕ ಕಾರೆನಿಸಿಕೊಂಡಿರುವ ಸ್ವಿಫ್ಟ್ ಕಾರಿನ ಮುಂಭಾಗದ ಸೀಟಿನಲ್ಲಿ ಆರ್ಮ್ ರೆಸ್ಟ್ ನೀಡುವ ಮೂಲಕ ಮತ್ತಷ್ಟು ಸುಖದಾಯಕ ಪ್ರಯಾಣವನ್ನು ನೀಡಲಿದೆ.

ಮಾರುತಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿ ವೈಶಿಷ್ಟ್ಯಗಳು

05. ಕಾರಿನೊಳಗೆ ಡ್ಯುಯಲ್ ಡಿನ್ ಸೋನಿ ಟಚ್ ಸ್ಕ್ರೀನ್ ಆಡಿಯೋ ಸಿಸ್ಟಂ ಜೊತೆ ಯುಎಸ್ ಬಿ, ಆಕ್ಸ್, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ವೈರ್ ರಹಿತ ಅಕಾ ಫ್ಯೂಸ್-ಫ್ರಿ ಆಡಿಯೋ ಎಕ್ಸ್ ಪೀರಿಯನ್ಸ್ ಸೌಲಭ್ಯಗಳು ಇರಲಿದೆ. ಇದು ನಾಲ್ಕು ಸ್ಪೀಕರ್ ಗಳನ್ನು ಒಳಗೊಂಡಿರಲಿದ್ದು, ಗರಿಷ್ಠ ಮನರಂಜನೆಯನ್ನು ಖಾತ್ರಿಪಡಿಸಲಿದೆ.

ಮಾರುತಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿ ವೈಶಿಷ್ಟ್ಯಗಳು

06. ಕೃತಕ ಕಾರ್ಬನ್ ಫೈಬರ್ ಘಟಕಗಳನ್ನು ಕಾರಿನ ಒಟ್ಟಾರೆ ಕ್ರೀಡಾತ್ಮಕತೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಡೋರ್ ಹ್ಯಾಂಡಲ್ ಗಳಲ್ಲೂ ಇದನ್ನು ಲಗತ್ತಿಸಲಾಗಿದೆ.

ಮಾರುತಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿ ವೈಶಿಷ್ಟ್ಯಗಳು

07. ಮನಸ್ಸಿಗೆ ಮುದ ನೀಡುವ ಬೆಳಕಿನ ವ್ಯವಸ್ಥೆಯು ಕಾರಿನೊಳಗೆ ಅದ್ಭುತ ಅನುಭವ ನೀಡಲಿದೆ. ರಾತ್ರಿ ದೂರ ಪ್ರಯಾಣದ ವೇಳೆ ಕೆಂಪು ವರ್ಣದ ಬೆಳಕಿನ ಸೇವೆಯು ನೆರವಾಗಲಿದೆ.

ಮಾರುತಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿ ವೈಶಿಷ್ಟ್ಯಗಳು

08. ನೂತನ ಸ್ವಿಫ್ಟ್ ಡೆಕಾ ಆವೃತ್ತಿಯು 1.2 ಲೀಟರ್ ಪೆಟ್ರೋಲ್ ಹಾಗೂ 1.3 ಲೀಟರ್ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇವೆರಡು ಅನುಕ್ರಮವಾಗಿ ಪ್ರತಿ ಲೀಟರ್ ಗೆ 20.4 ಹಾಗೂ 25.2 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ಮಾರುತಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿ ವೈಶಿಷ್ಟ್ಯಗಳು

09. ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗಿದ್ದು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಹಾಗೂ ಸೆನ್ಸಾರ್ ವ್ಯವಸ್ಥೆಗಳು ಲಭ್ಯವಾಗಲಿದೆ. ಸೋನಿ ಇನ್ಪೋಟೈನ್ಮೆಂಟ್ ಸಿಸ್ಟಂ ಕ್ಯಾಮೆರಾ ಸಾನಿಧ್ಯವನ್ನು ಇಮ್ಮಡಿಗೊಳಿಸಲಿದೆ.

ಮಾರುತಿ ಸ್ವಿಫ್ಟ್ ಡೆಕಾ ವಿಶೇಷ ಆವೃತ್ತಿ ವೈಶಿಷ್ಟ್ಯಗಳು

10. ಸ್ವಿಫ್ಟ್ ಡೆಕಾ ಆವೃತ್ತಿಯು ಪೆಟ್ರೋಲ್ ಹಾಗೂ ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಾಗಲಿದ್ದು, ದೆಹಲಿ ಎಕ್ಸ್ ಶೋ ರೂಂ ಬೆಲೆಯ ಪ್ರಕಾರ ಅನುಕ್ರಮವಾಗಿ 5.94 ಹಾಗೂ 6.87 ಲಕ್ಷ ರು.ಗಳಷ್ಟು ದುಬಾರಿಯೆನಿಸಲಿದೆ.

ಸ್ವಿಫ್ಟ್ ಡೆಕಾ - ವಿಡಿಯೋ ವೀಕ್ಷಿಸಿ

More from DriveSpark

Article Published On: Monday, September 19, 2016, 11:51 [IST]
English summary
Maruti Swift Deca: Top 10 Highlights That Make This Limited Edition Swift The Most Sought After Car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+