ಮರ್ಸಿಡಿಸ್ ಬೆಂಝ್‌ನಿಂದ ಅಪ್ಪಟ ಕ್ರೀಡಾ ಕಾರು

Written By:

ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆಯ ಮರ್ಸಿಡಿಸ್ ಬೆಂಝ್ ನಿರ್ವಹಣಾ ವಿಭಾಗವಾಗಿರುವ ಎಎಂಜಿ, ಅತ್ಯಂತ ಶಕ್ತಿಶಾಲಿ ಜಿಟಿಆರ್ ಕ್ರೀಡಾ ಕಾರನ್ನು ಅನಾವರಣಗೊಳಿಸಿದೆ. ಇದು ಎಲ್ಲ ಹಂತದಲ್ಲೂ ಜರ್ಮನಿಯ ಪ್ರೀಮಿಯಂ ಕಾರು ಸಂಸ್ಥೆಗೆ ಹೊಸ ಆಯಾಮವನ್ನು ತುಂಬಲಿದೆ.

ಮರ್ಸಿಡಿಸ್ ಬೆಂಝ್ ಜಿಟಿ3 ರೇಸರ್ ತಳಹದಿಯಲ್ಲಿ ನಿರ್ಮಾಣವಾಗಿರುವ ನೂತನ ಎಎಂಜಿ ಜಿಟಿಆರ್ ಮುಂಬರುವ ನವೆಂಬರ್ ತಿಂಗಳಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ. ಅಲ್ಲದೆ ಜಿಟಿಎಸ್ ಮಾದರಿಗಿಂತಲೂ ಮೇಲ್ದರ್ಜೆಯಲ್ಲಿ ಗುರುತಿಸಿಕೊಳ್ಳಲಿದೆ.

ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿಆರ್

ನೂತನ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿಆರ್ ಕ್ರೀಡಾ ಕಾರು ಟ್ವಿನ್ ಟರ್ಬೊಚಾರ್ಜ್ಡ್ 4 ಲೀಟರ್ ವಿ8 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ. ಇದು 700 ಎನ್ ಎಂ ತಿರುಗುಬಲದಲ್ಲಿ 577 ಅಶ್ವಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪೆಡಯಲಿದೆ.

ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿಆರ್ ಮಾದರಿಯು 3.6 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದ್ದು, ಗಂಟೆಗೆ ಗರಿಷ್ಠ 319 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ. ಕಾರ್ಬನ್ ಫೈವರ್ ರೂಫ್, 10 ಇಂಚುಗಳ ಅಲ್ಯೂಮಿನಿಯಂ ಚಕ್ರಗಳು ಮತ್ತು ಟೈಟಾನಿಯಂ ಎಕ್ಸಾಸ್ಟ್ ಕೊಳವೆಗಳು ಇದರಲ್ಲಿರಲಿದೆ.

ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿಆರ್

ಜಿಟಿಎಸ್ ಮಾದರಿಗೆ ಹೋಲಿಸಿದಾಗ ನೂತನ ಜಿಟಿಆರ್ 15 ಕೆ.ಜಿ ಗಳಷ್ಟು ಕಡಿಮೆ ಭಾರವನ್ನು ಹೊಂದಿರಲಿದ್ದು, ಹೆಚ್ಚು ನಿರ್ವಹಣೆಯನ್ನು ನೀಡಲಿದೆ. ಜಿಟಿ3 ರೇಸಿಂಗ್ ಕಾರಿನಿಂದ ಡಬಲ್ ವಿಶ್ ಬೋನ್ ಸಸ್ಪೆನ್ಷನ್ ವ್ಯವಸ್ಥೆಯನ್ನು ಆಳವಡಿಸಲಾಗಿದ್ದು, ರಸ್ತೆ ಮಾನ್ಯತೆಯನ್ನು ಪಡೆದಿದೆ. ಹಿಂದುಗಡೆಯೂ ಕಾರ್ಬನ್ ಫೈಬರ್ ರಿಯರ್ ವಿಂಗ್ ಪ್ರಮುಖ ಆಕರ್ಷಣೆಯಾಗಲಿದೆ.

English summary
Mercedes Unveils Mental AMG GT R Sports Car
Story first published: Monday, June 27, 2016, 10:30 [IST]
Please Wait while comments are loading...

Latest Photos

X