ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಸಿ ಕ್ಲಾಸ್ 250ಡಿ ಬಿಡುಗಡೆ
ಜರ್ಮನಿಯ ಪ್ರೀಮಿಯಂ ಕಾರು ಸಂಸ್ಥೆ ಮರ್ಸಿಡಿಸ್ ಬೆಂಝ್ ಭಾರತದಲ್ಲಿ ಅತಿ ನೂತನ ಸಿ ಕ್ಲಾಸ್ 250ಡಿ ಕಾರನ್ನು ಬಿಡುಗಡೆ ಮಾಡಿದೆ.
ಬೆಲೆ ಮಾಹಿತಿ: 44.36 ಲಕ್ಷ ರು. (ಎಕ್ಸ್ ಶೋ ರೂಂ ಪುಣೆ)
ಸಂಸ್ಥೆಯು ಈಗಾಗಲೇ ಭಾರತದಲ್ಲಿ ಸಿ ಕ್ಲಾಸ್ ಸಿ 200 (ಪೆಟ್ರೋಲ್) ಮತ್ತು ಸಿ 220ಡಿ ಮಾದರಿಗಳನ್ನು ಒದಗಿಸುತ್ತಿದೆ. ಇದೀಗ ಗರಿಷ್ಠ ತಾಂತ್ರಿಕತೆಯೊಂದಿಗೆ ಸಿ250ಡಿ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸಲಿದೆ.

ನೂತನ ಮರ್ಸಿಡಿಸ್ ಬೆಂಝ್ ಸಿ350ಡಿ ಕಾರಿನಲ್ಲಿ ಸಂಸ್ಥೆಯ ಮುಂದುವರಿದ ಗೇರ್ ಬಾಕ್ಸ ವ್ಯವಸ್ಥೆಯಾಗಿರುವ 9ಜಿ ಟ್ರಾನಿಕ್ ಬಳಕೆ ಮಾಡಲಾಗಿದೆ. ಸಾಮಾನ್ಯವಾಗಿ ಇದು ಮೇಬ್ಯಾಕ್ ಗಳಂತಹ ಹೈ ಎಂಡ್ ಮಾದರಿಗಳಲ್ಲಿ ನೀಡಲಾಗುತ್ತದೆ.

ಸಂಸ್ಥೆಯ ಪುಣೆ ಘಟಕದಲ್ಲಿ ನೂತನ ಬೆಂಝ್ ಸಿ 250ಡಿ ಸ್ಥಳೀಯವಾಗಿ ನಿರ್ಮಾಣವಾಗಲಿದೆ. ಈ ಮುಖಾಂತರ ಸಿ ಕ್ಲಾಸ್ ಕಾರಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಬೆಂಝ್ ನಿಭಾಯಿಸಲಿದೆ.

ಅಂದ ಹಾಗೆ ನೂತನ ಮರ್ಸಿಡಿಸ್ ಬೆಂಝ್ ಸಿ250ಡಿ, 2.1 ಲೀಟರ್ ಟರ್ಬೊಚಾರ್ಜ್ಡ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 500 ಎನ್ ಎಂ ತಿರುಗುಬಲದಲ್ಲಿ 201 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಅಂತೆಯೇ ಏಳು ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟ್, ಗಾರ್ಮಿನ್ ಮ್ಯಾಪ್ ಪೈಲಟ್ ನೇವಿಗೇಷನ್ ಸಿಸ್ಟಂ, ಎಲ್‌ಇಡಿ ಇಂಟೆಲಿಜೆಂಟ್ ಲೈಟ್ ಸಿಸ್ಟಂ, 17 ಇಂಚುಗಳ ಫೈವ್ ಟ್ವಿನ್ ಸ್ಪೋಕ್ ಅಲಾಯ್ ವೀಲ್ ಇತ್ಯಾದಿ ಸೌಲಭ್ಯಗಳಿರಲಿದೆ.

ಅಂತಿಮವಾಗಿ ಹೊಸ ಮರ್ಸಿಡಿಸ್ ಬೆಂಝ್ ಸಿ250ಡಿ ಸೋಲರ್ ಆಂಬೆರ್, ಪೋಲರ್ ಐಸ್ ಬ್ಲೂ ಮತ್ತು ನ್ಯೂಟ್ರಲ್ ವೈಟ್ ಗಳೆಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications