ಭಾರತದಲ್ಲಿ 20 ವರ್ಷಗಳ ಇ ಕ್ಲಾಸ್ ಸಂಭ್ರಮಕ್ಕೆ ಬೆಂಝ್ 'ಎಡಿಷನ್ ಇ' ಕೊಡುಗೆ

By Nagaraja

ಮರ್ಸಿಡಿಸ್ ಬೆಂಝ್‌ನ ಐಕಾನಿಕ್ ಇ ಕ್ಲಾಸ್ ಭಾರತಕ್ಕೆ ಪ್ರವೇಶಿಸಿ 20 ವರ್ಷಗಳೇ ಉರುಳಿ ಹೋಗಿವೆ. ಈ ಯಶಸ್ಸನ್ನು ಅದ್ದೂರಿಯಾಗಿಯೇ ಆಚರಿಸಿಕೊಳ್ಳಲು ನಿರ್ಧರಿಸಿರುವ ಜರ್ಮನಿಯ ಮೂಲದ ಪ್ರೀಮಿಯಂ ಸಂಸ್ಥೆ 'ಎಡಿಷನ್ ಇ' ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮುಖಾಂತರ ದೇಶದ ಮೊತ್ತ ಮೊದಲ ಮೇಡ್ ಇನ್ ಇಂಡಿಯಾ ಐಷಾರಾಮಿ ಕಾರು ಮತ್ತಷ್ಟು ಉನ್ನತಿ ಗಿಟ್ಟಿಸಿಕೊಂಡಿದೆ.

ಮುಖ್ಯಾಂಶಗಳು

  • ಭಾರತದಲ್ಲಿ ಮರ್ಸಿಡಿಸ್ ಬೆಂಝ್ ಇ ಕ್ಲಾಸ್ 20 ವರ್ಷಗಳ ಸಂಭ್ರಮ,
  • ಇ ಕ್ಲಾಸ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಐಷಾರಾಮಿ ಸೆಡಾನ್ ಕಾರು,
  • 1995ರಲ್ಲಿ ನಿರ್ಮಾಣ ಆರಂಭ - ದೇಶದಲ್ಲಿ ಯಾವುದೇ ಐಷಾರಾಮಿ ಕಾರು ಇಷ್ಟು ದೀರ್ಘಾವಧಿಯ ವರೆಗೆ ಸ್ಥಳೀಯವಾಗಿ ನಿರ್ಮಾಣಗೊಂಡಿಲ್ಲ.
  • ಇದುವರೆಗೆ 32,000 ಯುನಿಟ್ ಗಳಷ್ಟು ಇ ಕ್ಲಾಸ್ ಗಳ ಮಾರಾಟ
  • ಸಂಸ್ಥೆಯಿಂದ 'ವಿಷ್ ಅಪನ್ ಎ ಸ್ಟಾರ್' (Wish Upon a Star) ಅಭಿಯಾನಕ್ಕೂ ಚಾಲನೆ

ಮರ್ಸಿಡಿಸ್ ಬೆಂಝ್


ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಪುಣೆ)

  • ಮರ್ಸಿಡಿಸ್ ಬೆಂಝ್ ಇ 200 'ಎಡಿಷನ್ ಇ': 48.60 ಲಕ್ಷ ರು.
  • ಮರ್ಸಿಡಿಸ್ ಬೆಂಝ್ ಇ 250 ಸಿಡಿಐ 'ಎಡಿಷನ್ ಇ': 50.76 ಲಕ್ಷ ರು.
  • ಮರ್ಸಿಡಿಸ್ ಬೆಂಝ್ ಇ 350 ಸಿಡಿಐ 'ಎಡಿಷನ್ ಇ': 60.61 ಲಕ್ಷ ರು.

ಭಾರತದ ಅತಿ ದೊಡ್ಡ ಐಷಾರಾಮಿ ಕಾರು ನಿರ್ಮಾಣ ಸಂಸ್ಥೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮರ್ಸಿಡಿಸ್ ಬೆಂಝ್, ಎಡಿಷನ್ ಇ ಮುಖಾಂತರ ಕ್ರೀಡಾತ್ಮಕ ವಿನ್ಯಾಸ, ಸಾಟಿಯಿಲ್ಲದ ಆರಾಮದಾಯಕತೆ, ಐಷಾರಾಮಿ ಮತ್ತು ಗರಿಷ್ಠ ಭದ್ರತೆಯನ್ನು ಕಾಪಾಡಿಕೊಂಡಿದೆ.

ದೇಶದಲ್ಲಿ ಇ ಕ್ಲಾಸ್ ನಿರ್ಮಾಣ ಆರಂಭಿಸಿ 20 ವರ್ಷಗಳೇ ಕಳೆದು ಹೋಗಿದ್ದು, ಸಂಸ್ಥೆಯ ಪಾಲಿಗೆ ಹೆಮ್ಮೆಯ ಕ್ಷಣವಾಗಿದೆ.

ಎಂಜಿನ್ ತಾಂತ್ರಿಕತೆ

ಇ 200
1991 ಸಿಸಿ ಇನ್ ಲೈನ್ 4
power kw (hp) @ rpm: 135 (184) @ 5500
Torque (Nm) @ rpm: 300 @ 1200 - 4000
ವೇಗವರ್ಧನೆ: 7.9 ಸೆಕೆಂಡು
ಗರಿಷ್ಠ ವೇಗ: ಗಂಟೆಗೆ 233 ಕೀ.ಮೀ.

ಇ 250 ಸಿಡಿಐ
2143 ಸಿಸಿ ಇನ್ ಲೈನ್ 4
power kw (hp) @ rpm: 150 (204) @ 4200
Torque (Nm) @ rpm: 500 @ 1600 - 1800
ವೇಗವರ್ಧನೆ: 7.5 ಸೆಕೆಂಡು
ಗರಿಷ್ಠ ವೇಗ: ಗಂಟೆಗೆ 242 ಕೀ.ಮೀ.

ಇ 350 ಸಿಡಿಐ
2987 ಸಿಸಿ ವಿ6
power kw (hp) @ rpm: 195 (265) @ 3800
Torque (Nm) @ rpm: 620 @ 1600 - 2400
ವೇಗವರ್ಧನೆ: 6.6 ಸೆಕೆಂಡು
ಗರಿಷ್ಠ ವೇಗ: ಗಂಟೆಗೆ 250 ಕೀ.ಮೀ.

ಸುರಕ್ಷತೆ

  • 8 ಏರ್ ಬ್ಯಾಗ್
  • ನೆಕ್ ಪ್ರೊ ಹೆಡ್ ನಿಯಂತ್ರಣ
  • ಸೀಟು ಬೆಲ್ಟ್ ಪ್ರಿ ಟೆನ್ಷನರ್
  • ಪ್ರಿ ಸೇಫ್ ಸಿಸ್ಟಂ
  • ಅಡಾಪ್ಟಿವ್ ಬ್ರೇಕ್ ಲೈಟ್ಸ್
  • ಇಂಟಲಿಜೆಟ್ ಲೈಟ್ ಸಿಸ್ಟಂ

ಸ್ಟ್ಯಾಂಡರ್ಡ್ ವೈಶಿಷ್ಟ್ಯಗಳು

ಒಳಮೈ

  • ಸಿಡಿ ಕಾರ್ಡ್ ನೇವಿಗೇಷನ್,
  • ಎಂಬಿ ಆಪ್,
  • ಸ್ಪೋರ್ಟಿ ಬ್ರೇಕ್ ಪೆಡಲ್,
  • ಥೆರ್ಮೊಟ್ರಾನಿಕ್ ಆಟೋಮ್ಯಾಟಿಕ್ ಎಸಿ,
  • ಮೆಮರಿ ಸೀಟು ಜೊತೆ 3 ಸೆಟ್ಟಿಗ್ಸ್,
  • ಆಕ್ಟಿವ್ ಪಾರ್ಕ್ ಅಸಿಸ್ಟ್ ಜೊತೆ ಕ್ಯಾಮೆರಾ,
  • ಹೈ ರೆಸೊಲ್ಯೂಷನ್ ಕಲರ್ ಮಿಡಿಯಾ ಡಿಸ್ ಪ್ಲೇ

ಹೊರಮೈ

  • ಎಡಿಷನ್ ಇ ಬ್ಯಾಡ್ಜ್,
  • ಇಲ್ಯೂಮಿನೇಟಡ್ ಸ್ಟಾರ್,
  • ಬ್ಲ್ಯಾಕ್ ಹಬ್ ಕ್ಯಾಪ್,
  • ನ್ಯೂ ಲುಕ್ ಫೈಬರ್ ಟಾಪಿಕ್ ಟೈಲ್ ಲೈಟ್,
  • ಎಲೆಕ್ಟ್ರಾನಿಕ್ ಪ್ಯಾನರಾಮಿಕ್ ಸನ್ ರೂಫ್

Article Published On: Wednesday, February 24, 2016, 16:18 [IST]
English summary
Mercedes-Benz E-Class Edition E Launched In India For Rs. 48.6 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+