ಶ್ರೀಮಂತರಿಗಾಗಿ ಬೆಂಝ್ ಅತಿ ಶ್ರೀಮಂತ ಜಿಎಲ್‌ಎಸ್ 350ಡಿ ಬಿಡುಗಡೆ
ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಮರ್ಸಿಡಿಸ್ ಬೆಂಝ್ ಅತಿ ನೂತನ ಜಿಎಲ್‌ಎಸ್ 350 ಡಿ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ.
ಬೆಲೆ ಮಾಹಿತಿ: 80.38 ಲಕ್ಷ ರು. (ಎಕ್ಸ್ ಶೋ ರೂಂ ಪುಣೆ)
ನೂತನ ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ 350ಡಿ 2977 ಸಿಸಿ 3 ಲೀಟರ್ ವಿ6 ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 620 ಎನ್ ಎಂ ತಿರುಗುಬಲದಲ್ಲಿ 258 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ 9 ಜಿ ಟ್ರಾನಿಕ್ ಗೇರ್ ಬಾಕ್ಸ್ ಇದರಲ್ಲಿರುತ್ತದೆ.

- ವೇಗವರ್ಧನೆ: 7.8 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.
- ಗರಿಷ್ಠ ವೇಗ: 222 ಕೀ.ಮೀ.
- ಭಾರ: 2.45 ಟನ್
ವೈಶಿಷ್ಟ್ಯಗಳು
- ಎಲ್‌ಇಡಿ ಇಂಟೆಲಿಜೆಟ್ ಲೈಟ್ ಸಿಸ್ಟಂ,
- ಡೇಟೈಮ್ ರನ್ನಿಂಗ್ ಲೈಟ್ಸ್ ಜೊತೆ ಎಲ್‌ಇಡಿ ಫೈಬರ್ ಒಪ್ಟಿಕ್ಸ್,
- ಪ್ಯಾನರಾಮಿಕ್ ಸನ್ ರೂಫ್,
- ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್,
- ಸೀಟು ಸ್ಥಾನ ಮೆಮರಿ,
- ವಿಶೇಷ ಲೈಟಿಂಗ್,
- ಆಪಲ್ ಕಾರ್ ಪ್ಲೇ,
- ಏರ್ ಮ್ಯಾಟಿಕ್ ಸಸ್ಪೆನ್ಷನ್ ಜೊತೆ ಅಡಾಪ್ಟಿವ್ ಡ್ಯಾಂಪನಿಂಗ್ ಸಿಸ್ಟಂ ಪ್ಲಸ್,
- ಅಡಾಪ್ಟಿವ್ ಹೈ ಬೀಮ್ ಅಸಿಸ್ಟ್ ಪ್ಲಸ್,
- 4 ಮ್ಯಾಟಿಕ್ ಪರ್ಮನೆಂಟ್ ಆಲ್ ವೀಲ್ ಡ್ರೈವ್ ಸಿಸ್ಟಂ,
- ನ್ಯೂ ಜನರೇಷನ್ ಟೆಲಿಮ್ಯಾಟಿಕ್ಸ್

ಹೆಡ್ ಲ್ಯಾಂಪ್ ಗಳನ್ನು ಜಿಎಲ್ ಇ ಮತ್ತು ಜಿಎಲ್ ಇ ಕೂಪೆ ಮಾದರಿಗಳಿಂದ ಆಮದು ಮಾಡಲಾಗಿದೆ. ಅಲ್ಲದೆ 20 ಇಂಚುಗಳ 10 ಸ್ಪೋಕ್ ಅಲಾಯ್ ವೀಲ್ ಇದರಲ್ಲಿರುತ್ತದೆ.
ಐದು ಚಾಲನಾ ವಿಧಗಳು: ಕಂಫರ್ಟ್, ಸ್ಪೋರ್ಟ್, ಸ್ಲಿಪ್ಪರಿ, ವೈಯಕ್ತಿಕ ಮತ್ತು ಆಫ್ ರೋಡ್.
ಈ ಏಳು ಸೀಟುಗಳ ಐಷಾರಾಮಿ ಎಸ್‌ಯುವಿ ಕಾರಿನಲ್ಲಿ 680ರಿಂದ 2300 ಲೀಟರ್ ಗಳ ಢಿಕ್ಕಿ ಜಾಗವಿರಲಿದೆ. ಅಲ್ಲದೆ ಮೂರು ಸ್ಪೋಕ್ ಬಹು ಕ್ರಿಯಾತ್ಮಕ ನಪ್ಪ ಲೆಥರ್ ಸ್ಟೀರಿಂಗ್ ವೀಲ್ ಜೊತೆ ಗೇರ್ ಶಿಫ್ಟ್ ಪೆಡಲ್, 12 ಕ್ರಿಯಾತ್ಮಕ ಕೀಗಳು ಮತ್ತು ಲೆಥರ್ ಏರ್ ಬ್ಯಾಗ್ ಕವರ್ ಗಳನ್ನು ಕಾಣಬಹುದಾಗಿದೆ.
ಸುರಕ್ಷತೆ
- ಪ್ರಿ ಸೇಫ್ ಸಿಸ್ಟಂ,
- ಬಾಸ್ ಬ್ರೇಕ್ ಅಸಿಸ್ಟ್,
- ಎಲೆಕ್ಟ್ರಾನಿಕ್ ಆಲ್ ವೀಲ್ ಡ್ರೈವ್ ಟ್ರಾಕ್ಷನ್ ಸಿಸ್ಟಂ 4ಇಟಿಎಸ್,
- ಇಎಸ್ ಪಿ ಜೊತೆ ಕರ್ವ್ ಡೈನಾಮಿಕ್ ಅಸಿಸ್ಟ್ ಮತ್ತು
- ಕ್ರೂಸ್ ಕಂಟ್ರೋಲ್
- ಚಾಲಕ ಮತ್ತು ಪ್ರಯಾಣಿಕ ಬದಿಯ ಏರ್ ಬ್ಯಾಗ್,
- ಬದಿಯ ಏರ್ ಬ್ಯಾಗ್,
- ತ್ರಿ ಪಾಯಿಂಟ್ ಸೀಟು ಬೆಲ್ಟ್

ಆಯಾಮ
ಚಕ್ರಾಂತರ 3073 ಎಂಎಂ,
ಉದ್ದ 5130 ಎಂಎಂ,
ಅಗಲ 2141 ಎಂಎಂ
ಎತ್ತರ 1849 ಎಂಎಂ
ಆರು ಆಕರ್ಷಕ ಬಣ್ಣಗಳು
ಸಿಟ್ರೈನ್ ಬ್ರೌನ್ ಮೆಟ್ಯಾಲಿಕ್,
ಡಿಸೈನೊ ಡೈಮಂಡ್ ವೈಟ್ ಬ್ರೈಟ್,
ಕ್ಯಾವನ್ ಸೈಟ್ ಬ್ಲೂ ಮೆಟ್ಯಾಲಿಕ್,
ಒಬ್ಸಿಡಿಯನ್ ಬ್ಲ್ಯಾಕ್ ಮೆಟ್ಯಾಲಿಕ್,
ಇರಿಡಿಯಮ್ ಸಿಲ್ವರ್ ಮೆಟ್ಯಾಲಿಕ್,
ಟೆನೊರೈಟ್ ಗ್ರೇ ಮೆಟ್ಯಾಲಿಕ್.
ನಿರ್ಮಾಣ ಎಲ್ಲಿ? ಪುಣೆ, ಮೇಕ್ ಇನ್ ಇಂಡಿಯಾ ಭಾಗ.
ಪ್ರತಿಸ್ಪರ್ಧಿಗಳು: ಆಡಿ ಕ್ಯೂ7 ಮತ್ತು ವೋಲ್ವೋ ಎಕ್ಸ್‌ಸಿ-90


Click it and Unblock the Notifications




































































