ತೆರೆಮರೆಯಲ್ಲಿ ಸಜ್ಜಾಗುತ್ತಿದೆ ಬೆಂಝ್ ವಿದ್ಯುತ್ ಚಾಲಿತ ಕಾರು

Written By:

ಭವಿಷ್ಯದ ಬೇಡಿಕೆಗಳನ್ನು ಅರಿತುಕೊಂಡಿರುವ ಜರ್ಮನಿಯ ಐಷಾರಾಮಿ ಕಾರು ಸಂಸ್ಥೆ ಮರ್ಸಿಡಿಸ್ ಬೆಂಝ್, ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಈ ಮೂಲಕ ವಾಹನ ಜಗತ್ತಿನ ಪರ್ಯಾಯ ವ್ಯವಸ್ಥೆಗೆ ಓಗೊಟ್ಟಿದೆ.

ಅಮೆರಿಕದ ಟೆಸ್ಲಾ ಸಂಸ್ಥೆಯು ವಿದ್ಯುತ್ ಚಾಲಿತ ಕಾರುಗಳ ನಿರ್ಮಾಣ ಹಾಗೂ ಮಾರಾಟದಲ್ಲಿ ಮುಂಚೂಣಿಯಲ್ಲಿದೆ. ಇದರ ಜೊತೆಗೆ ಪೋರ್ಷೆ, ಆಡಿ, ಜಾಗ್ವಾರ್ ಸೇರಿದಂತೆ ಇನ್ನಿತರ ಸಂಸ್ಥೆಗಳು ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದಲ್ಲಿ ತೊಡಗಿಸಿಕೊಂಡಿದೆ. ಹಾಗಿರುವಾಗ ಐಕಾನಿಕ್ ಪರಂಪರೆಯನ್ನು ಕಾಪಾಡಿಕೊಂಡಿರುವ ಬೆಂಝ್ ವಿದ್ಯುತ್ ಚಾಲಿತ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲನ್ನಿಡಲು ಸಿದ್ಧವಾಗುತ್ತಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿದೆ ಬೆಂಝ್ ವಿದ್ಯುತ್ ಚಾಲಿತ ಕಾರು

ಮರ್ಸಿಡಿಸ್ ಬೆಂಝ್ ಎಲೆಕ್ಟ್ರಿಕ್ ವಾಹನಗಳು 'ಇಕ್ಯೂ' ಶ್ರೇಣಿಯ ಹೆಸರಿನಿಂದ ಗುರುತಿಸಲ್ಪಡಲಿದೆ. ಇದನ್ನು ಸಂಸ್ಥೆಯ ನೂತನ ಎಂಇಕ್ಯೂ ಸಬ್ ಬ್ರಾಂಡ್ ನಿಂದ ನಿರ್ಮಾಣವಾಗಲಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿದೆ ಬೆಂಝ್ ವಿದ್ಯುತ್ ಚಾಲಿತ ಕಾರು

ಮರ್ಸಿಡಿಸ್ ಬೆಂಝ್ ಎಲೆಕ್ಟ್ರಿಕ್ ಕಾರುಗಳು ಇಕ್ಯೂ ಇನ್ ಸೈಡ್, ಇಕ್ಯೂ ಬೂಸ್ಟ್ ಹಾಗೂ ಜನರೇಷನ್ ಎಂಇಕ್ಯೂ ಎಂಬ ಘೋಷಣಾ ವಾಕ್ಯದೊಂದಿಗೆ ಮಾರಾಟವಾಗಲಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿದೆ ಬೆಂಝ್ ವಿದ್ಯುತ್ ಚಾಲಿತ ಕಾರು

ಹೊಸ ವಿದ್ಯುತ್ ಕಾರುಗಳ ಮಾರ್ಕೆಟಿಂಗ್ ಗಾಗಿ ಇಕ್ಯೂಎ, ಇಕ್ಯೂಸಿ, ಇಕ್ಯೂಇ, ಇಕ್ಯೂಜಿ, ಇಕ್ಯೂಎಸ್ ಹಾಗೂ ಇನ್ನಿತರ ಇಕ್ಯೂ ಸಂಬಂಧಿತ ಹೆಸರುಗಳು ಬಳಕೆಯಾಗಲಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿದೆ ಬೆಂಝ್ ವಿದ್ಯುತ್ ಚಾಲಿತ ಕಾರು

ನೈಜ ಎಲೆಕ್ಟ್ರಿಕ್ ಕಾರು ನಿರ್ಮಿಸುವುದು ಸಂಸ್ಥೆಯ ಗುರಿಯಾಗಿದೆ. ಬಲ್ಲ ಮೂಲಗಳ ಪ್ರಕಾರ ಟೆಸ್ಲಾ ಮಾಡೆಲ್ ಎಸ್ ಪ್ರತಿಸ್ಪರ್ಧಿಯಾಗಿ ಇಕ್ಯೂಎಸ್ ವಿದ್ಯುತ್ ಚಾಲಿತ ಕಾರನ್ನು ಅಭಿವೃದ್ಧಿಪಡಿಸಲಾಗುವುದು.

ತೆರೆಮರೆಯಲ್ಲಿ ಸಜ್ಜಾಗುತ್ತಿದೆ ಬೆಂಝ್ ವಿದ್ಯುತ್ ಚಾಲಿತ ಕಾರು

ಮುಂದಿನ ವರ್ಷದಲ್ಲಿ ಬೆಂಝ್ ಎಲೆಕ್ಟ್ರಿಕ್ ಕಾರುಗಳು ಅನಾವರಣಗೊಳ್ಳಲಿದೆ. ಆದರೆ ಮಾರಾಟವು ಮೂರು ವರ್ಷಗಳಷ್ಟು ವಿಳಂಬವಾಗಿ ಅಂದರೆ 2019ರಲ್ಲಿ ಆರಂಭವಾಗಲಿದೆ.

ತೆರೆಮರೆಯಲ್ಲಿ ಸಜ್ಜಾಗುತ್ತಿದೆ ಬೆಂಝ್ ವಿದ್ಯುತ್ ಚಾಲಿತ ಕಾರು

ನೂತನ ಎಲೆಕ್ಟ್ರಿಕ್ ವೆಹಿಕಲ್ ಆರ್ಕಿಟೆಕ್ಚರ್ (ಇವಿಎ) ತಳಹದಿಯಲ್ಲಿ ನೂತನ ವಿದ್ಯುತ್ ಚಾಲಿತ ಕಾರುಗಳು ಗುರುತಿಸಿಕೊಳ್ಳಲಿದೆ. ಅಲ್ಲದೆ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಲಾಗುವುದು.

English summary
Mercedes EQ model names for EV sub-brand
Story first published: Friday, August 12, 2016, 15:58 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark