ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ 400 4 ಮ್ಯಾಟಿಕ್ ಎಸ್‌ಯುವಿ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ವಾಹನ ಸಂಸ್ಥೆ ಮರ್ಸಿಡಿಸ್ ಬೆಂಝ್, ಎಸ್ ಕ್ಲಾಸ್ ಎಸ್ ಯುವಿ ಶ್ರೇಣಿಯ ಅತಿ ನೂತನ ಜಿಎಲ್ ಎಸ್ 400 4 ಮ್ಯಾಟಿಕ್ ಕ್ರೀಡಾ ಬಳಕೆಯ ವಾಹನವನ್ನು ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 82.90 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಗ್ರಾಹಕರೀಗ ಡೀಸೆಲ್ ಜೊತೆಗೆ ಪೆಟ್ರೋಲ್ ಎಂಜಿನ್ ಗಳನ್ನು ಆಯ್ಕೆ ಮಾಡಬಹುದಾಗಿದೆ. ನೂತನ ಎಸ್ ಕ್ಲಾಸ್ ಎಸ್ ಯುವಿ ವಿ6 ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ 400 4 ಮ್ಯಾಟಿಕ್ ಎಸ್‌ಯುವಿ ಬಿಡುಗಡೆ

2016ನೇ ಸಾಲಿನಲ್ಲಿ ಮರ್ಸಿಡಿಸ್ ಬೆಂಝ್ ಬಿಡುಗಡೆ ಮಾಡುತ್ತಿರುವ ಎಂಟನೇ ಉತ್ಪನ್ನವಾಗಿದೆ. ಇದರಲ್ಲಿರುವ 3.0 ಲೀಟರ್ ವಿ6 ಪೆಟ್ರೋಲ್ ಎಂಜಿನ್ 480 ಎನ್ ಎಂ ತಿರುಗುಬಲದಲ್ಲಿ 333 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಂತೆಯೇ 9 ಜಿ ಟ್ರಾನಿಕ್ ಗೇರ್ ಬಾಕ್ಸ್ ಸಹ ಇರಲಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ 400 4 ಮ್ಯಾಟಿಕ್ ಎಸ್‌ಯುವಿ ಬಿಡುಗಡೆ

ನೂತನ ಜಿಎಲ್ ಎಸ್ 400 4ಮ್ಯಾಟಿಕ್ ಡೈನಾಮಿಕ್ ಸೆಲೆಕ್ಟ್ ಜೊತೆ ಐದು ಚಾಲನಾ ವಿಧಗಳು ಹೊಂದಿರಲಿದೆ. ಅವುಗಳೆಂದರೆ, ಕಂಫರ್ಟ್, ಸ್ಪೋರ್ಟ್, ಸ್ಲಿಪ್ಪರಿ, ಇಂಡಿವಿಡ್ಯುಯಲ್ ಮತ್ತು ಆಫ್ ರೋಡ್.

ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ 400 4 ಮ್ಯಾಟಿಕ್ ಎಸ್‌ಯುವಿ ಬಿಡುಗಡೆ

ನೂತನ ಜಿಎಲ್ ಎಸ್ 400 ,ಏರ್ ಮ್ಯಾಟಿಕ್ ಸಸ್ಪೆನ್ಷನ್ ಹಾಗೂ ಅಡಾಪ್ಟಿವ್ ಡ್ಯಾಂಪನಿಂಗ್ ಸಿಸ್ಟಂ ಪ್ಲಸ್ ವ್ಯವಸ್ಥೆಯೂ ಇರುತ್ತದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ 400 4 ಮ್ಯಾಟಿಕ್ ಎಸ್‌ಯುವಿ ಬಿಡುಗಡೆ

ಸುರಕ್ಷತೆಯತ್ತ ಗಮನ ಹರಿಸಿದಾಗ, ಪ್ರಿ-ಸೇಫ್ ವ್ಯವಸ್ಥೆ, ಬ್ರೇಕ್ ಅಸಿಸ್ಟ್, ಎಲೆಕ್ಟ್ರಾನಿಕ್ ಆಲ್ ವೀಲ್ ಡ್ರೈವ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ 4ಇಟಿಎಸ್, ಇಎಸ್ ಪಿ ಜೊತೆ ಕರ್ವ್ ಡೈನಾಮಿಕ್ ಅಸಿಸ್ಟ್ ಮತ್ತು ಕ್ರೂಸ್ ಕಂಟ್ರೋಲ್ ಗಳು ಸ್ಟಾಂಡರ್ಡ್ ಗಳು ಲಭ್ಯವಾಗಲಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ 400 4 ಮ್ಯಾಟಿಕ್ ಎಸ್‌ಯುವಿ ಬಿಡುಗಡೆ

ಪೊಲರ್ ವೈಟ್ ಮತ್ತು ಓಬ್ಸಿಡಿಯನ್ ಬ್ಲ್ಯಾಕ್ ಬಣ್ಣಗಳ ಆಯ್ಕೆಗಳಲ್ಲಿ ಮರ್ಸಿಡಿಸ್ ಜಿಎಲ್ ಎಸ್ 400 ಲಭ್ಯವಾಗಲಿದ್ದು, ಕಂಪ್ಲಿಟ್ ಬಿಲ್ಟ್ ಯುನಿಟ್ (ಸಿಬಿಯು) ಮುಖಾಂತರ ಆಗಮನವಾಗಲಿದೆ. ಅಲ್ಲದೆ ವರ್ಷಾಂತ್ಯದೊಳಗೆ ಸ್ಥಳೀಯವಾಗಿ ಜೋಡಣೆ ಕಾರ್ಯ ಆರಂಭವಾಗಲಿದೆ.

ಮರ್ಸಿಡಿಸ್ ಬೆಂಝ್ ಜಿಎಲ್‌ಎಸ್ 400 4 ಮ್ಯಾಟಿಕ್ ಎಸ್‌ಯುವಿ ಬಿಡುಗಡೆ

ಡೀಸೆಲ್ ಆವೃತ್ತಿಯು ಬಿಡುಗಡೆಯಾದ ಮೂರು ತಿಂಗಳೊಳಗೆ ಈಗ ಏಳು ಸೀಟುಗಳ ಜಿಎಲ್ ಸಿ 400 4ಮ್ಯಾಟಿಕ್ ಪೆಟ್ರೋಲ್ ಆವೃತ್ತಿಯು ಎಂಟ್ರಿ ಕೊಟ್ಟಿದೆ.

Article Published On: Thursday, September 8, 2016, 10:05 [IST]
English summary
Mercedes-Benz Launch S-Class Of SUVs In India With Petrol Engine
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+