10 ಕೋಟಿ ಬೆಲೆ ಬಾಳುವ ಬೆಂಝ್ ಬಾಂಬ್ ಪ್ರೂಫ್ ಎಸ್600 ಗಾರ್ಡ್ ಬಿಡುಗಡೆ

By Nagaraja

ಭಾರತೀಯ ವಾಹನ ಇತಿಹಾಸದಲ್ಲೇ ಅತಿ ದೊಡ್ಡ ಬಿಡುಗಡೆ ಎಂದೇ ಬಿಂಬಿಸಲಾಗಿರುವ ಅಂಶದಲ್ಲಿ ಜರ್ಮನಿಯ ಮೂಲದ ಪ್ರಖ್ಯಾತ ಕಾರು ಸಂಸ್ಥೆಯಾಗಿರುವ ಮರ್ಸಿಡಿಸ್ ಬೆಂಝ್ ಅತಿ ನೂತನ ಮೇಬ್ಯಾಕ್ ಎಸ್600 ಗಾರ್ಡ್ ಕಾರನ್ನು ಭಾರತದಲ್ಲಿ ಭರ್ಜರಿ ಬಿಡುಗಡೆ ಮಾಡಿದೆ.

ನೂತನ ಮರ್ಸಿಡಿಸ್ ಬೆಂಝ್ ಮೇಬ್ಯಾಕ್ ಎಸ್600 ಗಾರ್ಡ್ ಪ್ರಭಾವಿ ಬಾಂಬ್ ದಾಳಿಯನ್ನು ಎದುರಿಸುವಷ್ಟು ಶಕ್ತವಾಗಿದೆ. ಅಷ್ಟೇ ಯಾಕೆ ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 10.5 ಕೋಟಿ ರುಪಾಯಿಗಳಾಗಿದೆ.

ಮೇಬ್ಯಾಕ್ ಎಸ್600 ಗಾರ್ಡ್


ವಿಆರ್10 ಮಟ್ಟದ ಭದ್ರತೆಯನ್ನು ಪಡೆದಿರುವ ವಿಶ್ವದ ಮೊದಲ ಕಾರು ಇದಾಗಿದ್ದು, ಸ್ಫೋಟಗಳು ನಿರೋಧಕ ವಾಹನ ಮಾನ್ಯತೆಯನ್ನು ಪಡೆದಿದೆ.

ಪ್ರಬಲ ಗುಂಡಿನ ದಾಳಿ, ರೈಫಲ್, ಸ್ನೈಪರ್ ಬಂದೂಕು, ಗ್ರೇನೆಡ್ ಸೇರಿದಂತೆ ರಾಕೆಟ್ ಪ್ರೊಪೆಲ್ಡ್ ಗ್ರೇನೆಡ್ ಹಾಗೂ ಸ್ಪೋಟಕಗಳನ್ನು ತಡೆಯಲು ಇದು ಶಕ್ತವಾಗಿದೆ.

ಮೇಬ್ಯಾಕ್ ಎಸ್600 ಗಾರ್ಡ್ ನಿರ್ಮಾಣದಲ್ಲಿ ವಿಶೇಷ ಗಮನ ಹರಿಸಲಾಗಿದ್ದು, ಉಕ್ಕಿನ ವಿಶಿಷ್ಟ ವಿಧಗಳಿಂದ ರಚಿಸಲಾಗಿದೆ. ಇದು ಕಾರಿನೊಳಗಿನ ಪ್ರಯಾಣಿಕರಿಗೂ ಹೆಚ್ಚಿನ ರಕ್ಷಣೆಯನ್ನು ಒದಗಿಸಲಿದೆ.

ಇನ್ನು ವಿಂಡೋಗಳಿಗೆ ವಿಶಿಷ್ಟ ಪಾಲಿಕಾರ್ಬೊನೇಟ್ ಲೇಪನದಿಂದ ತಯಾರಿಸಲಾಗಿದ್ದು, ಗುಂಡಿನ ದಾಳಿಯನ್ನು ತಡೆಯುವಷ್ಟು ಸಮರ್ಥವಾಗಿದೆ.

ಇದರಲ್ಲಿ ಮಿಚಿಗನ್ ಚಕ್ರಗಳನ್ನು ಜೋಡಣೆ ಮಾಡಲಾಗಿದ್ದು, ಇದರ ಸ್ಟೀಲ್ ರಿಮ್ ಗಳು ಪಂಚರ್ ಆದ ಬಳಿಕವೂ 29 ಕೀ.ಮೀ. ವರೆಗೂ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ. ಕಾರಿನ ಕೆಳ ಭಾಗಕ್ಕೂ ರಕ್ಷಾ ಕವಚವನ್ನು ಜೋಡಣೆ ಮಾಡಲಾಗಿದ್ದು, ಸ್ಪೋಟಗಳನ್ನು ಎದುರಿಸುವಷ್ಟು ಸಾಮರ್ಥ್ಯವಾಗಿದೆ. ಎಂಜಿನ್ ಟ್ಯಾಂಕ್ ಗಳಿಗೆ ಪ್ರತ್ಯೇಕ ರಕ್ಷಣಾ ಕವಚವಿರುವುದಿಲ್ಲ. ಹಾಗಿದ್ದರೂ ಬಾಂಬ್ ಅಥವಾ ಬುಲೆಟ್ ದಾಳಿಯ ವೇಳೆ ಸ್ವಯಂ ರಕ್ಷಣೆಯ ಸಾಮರ್ಥ್ಯವಿರುತ್ತದೆ.

ಇನ್ನು ಕಾರಿನೊಳಗೆ ರಾಸಾಯನಿಕ ದಾಳಿಯನ್ನು ಎದುರಿಸಲು ವ್ಯವಸ್ಥೆ ಮಾಡಲಾಗಿದ್ದು, ತಾಜಾ ಹವಾ ಪಸರಿಸಲಿದೆ. ಇನ್ನು ಕಾರಿನ ಹಿಂಭಾಗದಲ್ಲಿ ಗನ್ ರಾಕ್ ಗಳನ್ನು ಕೊಡಲಾಗಿದೆ.

ಕಾರಿನಡಿಯಲ್ಲಿ 6.0 ಲೀಟರ್ ಟ್ವಿನ್ ಟರ್ಬೊ ವಿ12 ಎಂಜಿನ್ ಇದ್ದು, 830 ಎನ್ ಎಂ ತಿರುಗುಬಲದಲ್ಲಿ 523 ಅಶ್ವಶಕ್ತಿ ಉತ್ಪಾದಿಸಲಿದೆ.

ಬರೋಬ್ಬರಿ 4.7 ಟನ್ ಭಾರದ ಹೊರತಾಗಿಯೂ ನೂತನ ಮೇಬ್ಯಾಕ್ ಎಸ್600 ಗಾರ್ಡ್, 7.9 ಸೆಕೆಂಡುಗಳಲ್ಲೇ ಗಂಟೆಗೆ 100 ಕೀ.ಮೀ. ಹಾಗೂ ಗಂಟೆಗೆ ಗರಿಷ್ಠ 190 ಕೀ.ಮೀ. ವೇಗದಲ್ಲಿ ಸಂಚರಿಸಲು ನೆರವಾಗುತ್ತದೆ.

ಅಂದ ಹಾಗೆ ನೂತನ ಮರ್ಸಿಡಿಸ್ ಬೆಂಝ್ ಎಸ್600 ಗಾರ್ಡ್ ಭಾರತದಲ್ಲಿ ಪ್ರಮುಖವಾಗಿಯೂ ಆಡಿ ಎ8ಎಲ್ ಸೆಕ್ಯೂರಿಟಿ ಕಾರಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿದೆ.

Article Published On: Tuesday, March 8, 2016, 17:52 [IST]
English summary
Armoured Mercedes Maybach S600 Guard Enters India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+