'ಟಾಪ್ ಲೆಸ್' ಮಿನಿ ಕನ್ವರ್ಟಿಬಲ್ ಐಕಾನಿಕ್ ಕಾರು ಭಾರತ ಪ್ರವೇಶ
ಬ್ರಿಟನ್‌ನ ಐಕಾನಿಕ್ ಸಣ್ಣ ಪ್ರೀಮಿಯಂ ಕಾರು ಸಂಸ್ಥೆಯಾಗಿರುವ ಮಿನಿ, ಅತಿ ನೂತನ ಕನ್ವರ್ಟಿಬಲ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಮೂಲಕ ಟಾಪ್ ಲೆಸ್ ಕಾರು ಭಾರತ ಪ್ರವೇಶ ಪಡೆದಂತಾಗಿದೆ.
ಬೆಲೆ ಮಾಹಿತಿ: 34.9 ಲಕ್ಷ ರು.
ಬಿಎಂಡಬ್ಲ್ಯು ಅಧೀನತೆಯಲ್ಲಿರುವ ಮಿನಿ ಎರಡನೇ ತಲೆಮಾರಿನ ಕೂಪರ್ ಎಸ್ ಓಪನ್ ಟಾಪ್ ಕಾರು ಮಿನಿ ಕನ್ವರ್ಟಿಬಲ್ ಎಂಬ ಹೆಸರಿನಿಂದಲೂ ಗುರುತಿಸಲ್ಪಟ್ಟಿದೆ.

ಕ್ಲಾಸಿಕ್ ಮೈಬಣ್ಣ ಹಾಗೂ ನೋಟ ಮಿನಿ ಕಾರುಗಳ ವಿಶಿಷ್ಟತೆಯಾಗಿದೆ. ಇದರಲ್ಲಿ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುವ ಗರಿಷ್ಠ ಗುಣಮಟ್ಟದ ಸಾಫ್ಟ್ ಓಪನ್ ಟಾಪ್ ಲಗತ್ತಿಸಲಾಗಿದೆ.

ನೂತನ ಮಿನಿ ಕನ್ವರ್ಟಿಬಲ್ ಕಾರಿನಲ್ಲಿರುವ 2.0 ಲೀಟರ್ ಟರ್ಬೊಚಾರ್ಜ್ಡ್ ಎಂಜಿನ್ 280 ಎನ್‌ಎಂ ತಿರುಗುಬಲದಲ್ಲಿ 189 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಆರು ಸ್ಪೀಡ್ ಮ್ಯಾನುವಲ್ ಜೊತೆಗೆ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯೂ ಇರುತ್ತದೆ.

ಅಲ್ಲದೆ 7.1 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ. ವೇಗವರ್ಧಿಸುವ ಮತ್ತು ಗಂಟೆಗೆ ಗರಿಷ್ಠ 233 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುತ್ತದೆ.

ಮಿನಿಯಲ್ಲಿ ಆಳವಡಿಸಲಾಗಿರುವ ಸಾಫ್ಟ್ ರೂಫ್ ಟಾಪ್, ಕೇವಲ 18 ಸೆಕೆಂಡುಗಳಲ್ಲೇ ತೆರೆದುಕೊಳ್ಳಲಿದೆ.

ವಿಶ್ವೆದೆಲ್ಲೆಡೆ ಪ್ರೀಮಿಯಂ ಸಣ್ಣ ಕಾರಿನ ಬ್ರ್ಯಾಂಡ್ ಪಟ್ಟವನ್ನು ಕಾಯ್ದುಕೊಂಡು ಬಂದಿರುವ ಮಿನಿ ದೇಶದಲ್ಲೂ ಮೋಜಿನ ಪಯಣದ ಅನುಭವ ನೀಡಲಿದೆ.

2015ನೇ ಸಾಲಿನಲ್ಲಿ ಬಿಎಂಡಬ್ಲ್ಯು ಸಂಸ್ಥೆಯು 340ರಷ್ಟು ಮಿನಿ ಕಾರುಗಳ ಮಾರಾಟ ದಾಖಲಿಸಿತ್ತು. ಇದು ಕಳೆದ ವರ್ಷಕ್ಕೆ ಹೋಲಿಸಿದಾಗ ಶೇಕಡಾ 3ರಷ್ಟು ಇಳಿಕೆಯಾಗಿದೆ.

ನೂತನ ಮಿನಿ ನಿರ್ಮಾಣ ಗುಣಮಟ್ಟತೆಯಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದು, ಕ್ಲಾಸಿಕ್ ನೋಟವು ಎಲ್ಲರ ಗಮನ ಸೆಳೆಯಲಿದೆ.

ವಿಶಿಷ್ಟ ಹೆಡ್ ಲ್ಯಾಂಪ್, ಫ್ರಂಟ್ ಗ್ರೀಲ್, ಕ್ರೋಮ್ ಸ್ಪರ್ಶ, ಟೈಲ್ ಲ್ಯಾಂಪ್ ಮತ್ತು ಅತ್ಯಾಕರ್ಷಕ ಒಳಮೈಗಳನ್ನು ಪಡೆದಿದೆ.

ಆಧುನಿಕ ಬೇಡಿಕೆಗೆ ತಕ್ಕಂತೆ ಸಾಂಪ್ರದಾಯಿಕ ವಿನ್ಯಾಸವನ್ನು ಮೈಗೂಡಿಸಿ ಬಂದಿರುವುದು ಮಿನಿ ವಿಶಿಷ್ಟತೆಯಾಗಿದೆ. ಇನ್ನು ಕಾರಿನೊಳಗೂ ಎಲ್ ಇಡಿ ಬೆಳಕು, ದೊಡ್ಡದಾದ 8.8 ಇಂಚುಗಳ ಟಚ್ ಸ್ಕ್ರೀನ್ ಇನ್ಪೋಟೈನ್ಮೆಂಟ್ ಸಿಸ್ಟಂ ಮತ್ತು ಹರ್ಮಾನ್ ಹೈ ಫೈ ಆಡಿಯೋ ಸಿಸ್ಟಂ ವ್ಯವಸ್ಥೆಯೂ ಇರಲಿದೆ.

ಅಂದ ಹಾಗೆ 2012ನೇ ಸಾಲಿನಲ್ಲಿ ವಿಶ್ವದ 100ನೇ ಮಾರುಕಟ್ಟೆ ರೂಪದಲ್ಲಿ ಐಕಾನಿಕ್ ಮಿನಿ ಭಾರತ ಪ್ರವೇಶ ಪಡೆದಿತ್ತು.


Click it and Unblock the Notifications








