ಹೊಸ ವ್ಯಾಗನಾರ್ ಸ್ಟಿಂಗ್ರೇ ಚಿತ್ರ ಲೀಕ್; ಭಾರತಕ್ಕೆ ಯಾವಾಗ?
ಹೊಸ ವ್ಯಾಗನಾರ್ ಸ್ಟಿಂಗ್ರೇ ಚಿತ್ರ ತವರೂರಾದ ಜಪಾನ್ ನಲ್ಲಿ ಲೀಕ್ ಆಗಿದೆ.ಇದು ನಿಕಟ ಭವಿಷ್ಯದಲ್ಲೇ ಭಾರತಕ್ಕೂ ಪ್ರವೇಶಿಸಲಿದೆ.
ಮಾರುತಿ ಅಂಗಸಂಸ್ಥೆಯಾಗಿರುವ ಜಪಾನ್ ಮೂಲದ ಸುಜುಕಿ ಬಿಡುಗಡೆ ಮಾಡಲಿರುವ ಅತಿ ನೂತನ ವ್ಯಾಗನಾರ್ ಸ್ಟಿಂಗ್ರೇ ಚಿತ್ರಗಳು ಲೀಕ್ ಆಗಿವೆ. ಮುಂದಿನ ದಿನಗಳಲ್ಲಿ ಇದು ಭಾರತಕ್ಕೂ ಕಾಲಿಡುತ್ತಾ ಎಂಬುದು ಕುತೂಹಲಕ್ಕೆಡೆ ಮಾಡಿಕೊಟ್ಟಿದೆ.

ಭಾರತದಲ್ಲಿ ಅತಿ ಹೆಚ್ಚು ಯಶಸ್ಸು ದಾಖಲಿಸಿರುವ ಹ್ಯಾಚ್ ಬ್ಯಾಕ್ ಕಾರುಗಳಲ್ಲಿ ವ್ಯಾಗನಾರ್ ಒಂದಾಗಿದೆ. ತನ್ನ ಟಾಲ್ ಬಾಯ್ ವಿನ್ಯಾಸದೊಂದಿಗೆ ವಿಶಿಷ್ಟತೆಯನ್ನು ಕಾಪಾಡಿಕೊಂಡಿರುವ ವ್ಯಾಗನಾರ್ ಗಮನಾರ್ಹ ಮಾರಾಟವನ್ನು ದಾಖಲಿಸಿದೆ.

ಈ ನಡುವೆ ತನ್ನ ಶ್ರೇಣಿಯ ವಾಹನಗಳನ್ನು ವಿಸ್ತರಿಸಿದ್ದ ಮಾರುತಿ, ವ್ಯಾಗನಾರ್ ಸ್ಟಿಂಗ್ರೇ ಎಂಬ ಹೊಸ ಕಾರನ್ನು ಪರಿಚಯಿಸಿತ್ತು. ಆದರೆ ಈ ಮಾದರಿಯು ಮಾರುಕಟ್ಟೆಯಲ್ಲಿ ಅಷ್ಟೇನೂ ಸದ್ದು ಮಾಡಿರಲಿಲ್ಲ.

ಈಗ ಜಪಾನ್ ಮಾರುಕಟ್ಟೆಯಲ್ಲಿ ಹೊಸ ವ್ಯಾಗನಾರ್ ಸ್ಟಿಂಗ್ರೇ ಕಾಣಿಸಿಕೊಂಡಿರುವುದು ಕುತೂಹಲವನ್ನು ಇಮ್ಮಡಿಗೊಳಿಸಿದ್ದು, ಹೊಸ ಕಾರು ಭಾರತಕ್ಕೂ ಆಗಮನವಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಹಿಂದಿನ ಮಾದರಿಗಿಂತಲೂ ಹೆಚ್ಚು ಆಕ್ರಮಣಕಾರಿ ವಿನ್ಯಾಸ ನೀತಿಯಲ್ಲಿ ಹೊಸ ಸ್ಟಿಂಗ್ರೇಯಲ್ಲಿ ಅನುಸರಿಸಲಾಗಿದೆ. ಇದು ಹೆಚ್ಚು ಶಕ್ತಿಶಾಲಿ ರಚನೆಯನ್ನು ಪಡೆದಿದೆ.

ಆಯತಾಕಾರದ ಗ್ರಿಲ್, ಲಂಬವಾಗಿ ಜೋಡಿಸಲಾದ ಹೆಡ್ ಲೈಟ್, ಕ್ರೋಮ್ ಸ್ಪರ್ಶತೆ, ಪರಿಷ್ಕೃತ ಬಂಪರ್, ಏರ್ ಡ್ಯಾಮ್ ಹೀಗೆ ಅನೇಕ ವೈಶಿಷ್ಟ್ಯಗಳನ್ನು ಪಡೆದಿದೆ.

ಬದಿಯಲ್ಲಿ ಸ್ವಭಾವ ರೇಖೆಗಳ ಜೊತೆಗೆ ದಪ್ಪವಾದ ಹಾಗೂ ಮೊನಚಾದ ಬಿ ಪಿಲ್ಲರ್ ಗಳನ್ನು ಕೊಡಲಾಗಿದೆ. ಇನ್ನು ಆಕರ್ಷಕ ವೀಲ್ ಆರ್ಚ್ ಗಳನ್ನು ಕಾಣಬಹುದಾಗಿದೆ.

ಜಪಾನ್ ಮಾದರಿಯ ವ್ಯಾಗನಾರ್ ಸ್ಟಿಂಗ್ರೇ 658 ಸಿಸಿ ಇನ್ ಲೈನ್ ತ್ರಿ ಸಿಲಿಂಡರ್ ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದೆ.

ಹಾಗಿದ್ದರೂ ಭಾರತ ಆವೃತ್ತಿಯು 1.0 ಲೀಟರ್ ಕೆ ಸಿರೀಸ್ ಎಂಜಿನ್ ಜೊತೆ 5 ಸ್ಪೀಡ್ ಮ್ಯಾನುವಲ್ ಹಾಗೂ ಎಎಂಟಿ ಗೇರ್ ಬಾಕ್ಸ್ ಆಯ್ಕೆಯು ಇರುತ್ತದೆ.

ಅಷ್ಟಕ್ಕೂ 2018ರಲ್ಲಷ್ಟೇ ನೂತನ ವ್ಯಾಗನಾರ್ ಕಾರನ್ನು ನಿರೀಕ್ಷೆ ಮಾಡಬಹುದಾಗಿದೆ.


Click it and Unblock the Notifications